ETV Bharat / sports

ಸಿಂಹಳೀಯರ ಮೇಲೆ ಹರಿಣಗಳ ಸವಾರಿ: 2ನೇ ಟಿ-20 ಗೆದ್ದು ಸರಣಿ ಕೈವಶ ಮಾಡಿಕೊಂಡ ಆಫ್ರಿಕಾ - 2ನೇ ಟಿ-20 ಗೆದ್ದ ಆಫ್ರಿಕಾ

ಎರಡನೇ ಟಿ-20 ಪಂದ್ಯದಲ್ಲೂ ವಿಜಯ ಸಾಧಿಸುವ ಮೂಲಕ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಶ್ರೀಲಂಕಾ ವಿರುದ್ಧದ ಚುಟುಕು ಸರಣಿ ಕೈವಶ ಮಾಡಿಕೊಂಡಿದೆ.

Sri Lanka vs South africa
Sri Lanka vs South africa
author img

By

Published : Sep 13, 2021, 5:44 PM IST

ಕೊಲಂಬೊ(ಶ್ರೀಲಂಕಾ): ಏಕದಿನ ಕ್ರಿಕೆಟ್​ ಸರಣಿಯಲ್ಲಿ ಸೋಲುಂಡು ಮುಖಭಂಗಕ್ಕೊಳಗಾಗಿರುವ ದಕ್ಷಿಣ ಆಫ್ರಿಕಾ ಟಿ-20 ಕ್ರಿಕೆಟ್​ ಸರಣಿಯಲ್ಲಿ ತಿರುಗಿಬಿದ್ದಿದೆ.

ಮೊದಲ ಟಿ-20 ಪಂದ್ಯದಲ್ಲಿ 28ರನ್​ಗಳ ಗೆಲುವು ದಾಖಲು ಮಾಡಿದ್ದ ಪ್ರವಾಸಿ ತಂಡ ಎರಡನೇ ಪಂದ್ಯದಲ್ಲೂ 9 ವಿಕೆಟ್​ಗಳ ಅಂತರದ ಜಯ ಸಾಧಿಸಿತು. ಈ ಮೂಲಕ ಒಂದು ಪಂದ್ಯ ಬಾಕಿ ಇರುವಾಗಲೇ ಸರಣಿ ಗೆದ್ದು ಬೀಗಿದೆ.

ಆರ್​​.ಪ್ರೇಮದಾಸ್​ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಟಾಸ್​ ಗೆದ್ದು ಬ್ಯಾಟಿಂಗ್​ ಮಾಡಿದ ಶ್ರೀಲಂಕಾ ತಂಡ ಎದುರಾಳಿ ತಂಡದ ಬೌಲಿಂಗ್​ ದಾಳಿಗೆ ಸಂಪೂರ್ಣವಾಗಿ ತತ್ತರಿಸಿತು. 18.1 ಓವರ್​​ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 103 ರನ್​ಗಳಿಕೆ ಮಾಡಲು ಮಾತ್ರ ಶಕ್ತವಾಯಿತು.

ತಂಡದ ಪರ ಪರೇರಾ(30), ಹಾಗೂ ರಾಜಪಕ್ಸೆ(20) ಅತಿ ಹೆಚ್ಚು ಸ್ಕೋರ್​ ಗಳಿಸಿರುವ ಆಟಗಾರರಾದರು. ಉಳಿದಂತೆ ಯಾವೊಬ್ಬ ಪ್ಲೇಯರ್ಸ್​ ಕೂಡ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ದಕ್ಷಿಣ ಆಫ್ರಿಕಾದ ಮರ್ಕ್ರಾಮ್​, ಶಮ್ಸಿ ತಲಾ 3 ವಿಕೆಟ್ ಪಡೆದುಕೊಂಡರೆ, ಫಾರ್ಚೂನ್​ 2 ವಿಕೆಟ್​, ನೊರ್ಟ್ಜ್​ ಹಾಗೂ ಮಹಾರಾಜ್ ತಲಾ 1 ವಿಕೆಟ್ ಕಿತ್ತರು.

104 ರನ್​ಗಳ ಗುರಿ ಬೆನ್ನತ್ತಿದ ಆಫ್ರಿಕಾ ತಂಡ ಕೇವಲ 1 ವಿಕೆಟ್​​ ಕಳೆದುಕೊಂಡು 14.1 ಓವರ್​ನಲ್ಲಿ ಗೆಲುವಿನ ಗುರಿ ಮುಟ್ಟಿತ್ತು. ತಂಡದ ಪರ ಕ್ವಿಂಟನ್ ಡಿಕಾಕ್​​ ಅಜೇಯ 58ರನ್​ ಹಾಗೂ ಮರ್ಕ್ರಾಮ್​​ ಅಜೇಯ 21ರನ್​ಗಳಿಕೆ ಮಾಡಿದ್ರೆ, ಹೆಂಡ್ರಿಕ್ಸ್​​ 18 ರನ್​ಗಳಿಸಿದಾಗ ವಿಕೆಟ್ ಒಪ್ಪಿಸಿದರು.

Sri Lanka vs South africa
2ನೇ ಟಿ-20 ಪಂದ್ಯ ಗೆದ್ದ ದಕ್ಷಿಣ ಆಫ್ರಿಕಾ

ಇದನ್ನೂ ಓದಿ: ಟೀಂ ಇಂಡಿಯಾ 5ನೇ ಟೆಸ್ಟ್‌ ಪಂದ್ಯ ಆಡದಿರಲು ಕಾರಣವೇನು? ಗಂಗೂಲಿ ಸ್ಪಷ್ಟನೆ ಹೀಗಿದೆ..

ಎರಡನೇ ಟಿ-20 ಪಂದ್ಯದಲ್ಲಿ ಗೆಲುವು ದಾಖಲು ಮಾಡುವ ಮೂಲಕ ದಕ್ಷಿಣ ಆಫ್ರಿಕಾ ಮೂರು ಟಿ-20 ಪಂದ್ಯಗಳ ಸರಣಿಯಲ್ಲಿ 2-0 ಅಂತರದಿಂದ ಸರಣಿ ಕೈವಶ ಮಾಡಿಕೊಂಡಿದೆ. ಫೈನಲ್ ಪಂದ್ಯ ನಾಳೆ ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.