ಹೈದರಾಬಾದ್: ಶಿಖರ್ ಧವನ್ ನೇತೃತ್ವದ ಟೀಮ್ ಇಂಡಿಯಾ ಸದ್ಯ ಶ್ರೀಲಂಕಾ ಪ್ರವಾಸದಲ್ಲಿದ್ದು, ಮೂರು ಏಕದಿನ ಹಾಗೂ ಮೂರು ಟಿ-20 ಪಂದ್ಯಗಳ ಸರಣಿ ಆಡಲಿದೆ. ಮೊದಲ ವೇಳಾಪಟ್ಟಿಯ ಪ್ರಕಾರ ಜುಲೈ 13 ರಿಂದ ಸರಣಿ ಆರಂಭವಾಗಬೇಕಿತ್ತು. ಆದರೆ ಇಂಗ್ಲೆಂಡ್ ಪ್ರವಾಸ ಮುಗಿಸಿ ಬಂದಿದ್ದ ತಂಡದಲ್ಲಿ ಇಬ್ಬರಿಗೆ ಕೊರೊನಾ ಕಾಣಿಸಿಕೊಂಡಿದ್ದು ಸರಣಿಯನ್ನು ಜುಲೈ 18ಕ್ಕೆ ಮೂಂದೂಡಲಾಗಿತ್ತು.
ಸದ್ಯ ಭಾರತದ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದ ಶ್ರೀಲಂಕಾ ತಂಡದ ಎಲ್ಲಾ ಆಟಗಾರರನ್ನು ಕೋವಿಡ್ ಟೆಸ್ಟ್ಗೆ ಒಳಪಡಿಸಲಾಗಿದ್ದು, ಎಲ್ಲಾ ಆಟಗಾರರ ವರದಿ ನೆಗೆಟಿವ್ ಬಂದಿದೆ. ಇಂಗ್ಲೆಂಡ್‌ನಿಂದ ಹಿಂದಿರುಗಿದ ಶ್ರೀಲಂಕಾದ ಎಲ್ಲಾ ಪ್ರಮುಖ ಆಟಗಾರರ ಕೊರೊನಾ ಪರೀಕ್ಷೆಯ ವರದಿಯೂ ನೆಗೆಟಿವ್ ಬಂದಿದೆ.
ಇದರ ಅಡಿಯಲ್ಲಿ ಹಿರಿಯ ಆಟಗಾರರಾದ ಕುಸಾಲ್ ಪೆರೆರಾ, ದುಷ್ಮಂತ್ ಚಮಿರಾ ಮತ್ತು ಧನಂಜಯ್ ಡಿ ಸಿಲ್ವಾ ಸೇರಿದಂತೆ ಶ್ರೀಲಂಕಾ ತಂಡದಲ್ಲಿ ಎಲ್ಲಾ ಆಟಗಾರರ ಕೊರೊನಾ ವರದಿ ನೆಗೆಟಿವ್ ಬಂದಿದೆ. ಈ ಆಟಗಾರರು ಇಂಗ್ಲೆಂಡ್‌ನಿಂದ ಬಂದ ನಂತರ ಒಂದು ವಾರ ಕಟ್ಟುನಿಟ್ಟಿನ ಕ್ವಾರಂಟೈನ್ ಪೂರ್ಣಗೊಳಿಸಿದ್ದರಿಂದ ಸೋಮವಾರ ಬಯೋ ಬಬಲ್‌ಗೆ ಪ್ರವೇಶ ನೀಡಲಾಗುವುದು ಎಂದು SLC (ಸಿಂಹಳೀಯ ಸ್ಪೋರ್ಟ್ಸ್ ಕ್ಲಬ್ )ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಶ್ರೀಲಂಕಾ-ಭಾರತ ಸರಣಿಗೆ ಹಿನ್ನಡೆ : ಬಯೋಬಬಲ್ನಲ್ಲಿದ್ದ ಲಂಕಾ ಆಟಗಾರನಿಗೂ ಕೊರೊನಾ
ಬಯೋಬಬಲ್ ಅನ್ನು ಪ್ರವೇಶಿಸಿದ ನಂತರ, ಆಟಗಾರರು ಕನಿಷ್ಠ ಪರಸ್ಪರರ ಕೊಠಡಿಗಳಿಗೆ ಭೇಟಿ ನೀಡಬಹುದು ಮತ್ತು ಪರಸ್ಪರ ಭೇಟಿಯಾಗಬಹುದು. ಇದಲ್ಲದೆ, ಆಟಗಾರರು ಜಿಮ್ ಅನ್ನು ಸಹ ಬಳಸಬಹುದಾಗಿದೆ. ಮಂಗಳವಾರದ ವೇಳೆಗೆ ಆಟಗಾರರು ಅಭ್ಯಾಸ ಪ್ರಾರಂಭಿಸುವ ಸಾಧ್ಯತೆಯಿದೆ. ಆಟಗಾರರು ಮಾತ್ರ ಅಭ್ಯಾಸ ನಡೆಸಲು ಅವಕಾಶವಿದ್ದು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಯ ಇತರ ಸದಸ್ಯರು ಬುಧವಾರದವರೆಗೆ ಪ್ರತ್ಯೇಕವಾಗಿರುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.