ETV Bharat / sports

ದಕ್ಷಿಣ ಆಫ್ರಿಕಾ ಕ್ರಿಕೆಟರ್ ಮೇಲೆ ಹಲ್ಲೆ.. ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ವೇಗದ ಬೌಲರ್ - ಕ್ರಿಕೆಟರ್​ ಮಾಂಡ್ಲಿ ಖಮಾಲೋ

ಪಬ್​​ನಲ್ಲಿ ಸಂಭ್ರಮಾಚರಣೆ ಮಾಡ್ತಿದ್ದ ವೇಳೆ ದಕ್ಷಿಣ ಆಫ್ರಿಕಾದ ಕ್ರಿಕೆಟಿಗನ ಮೇಲೆ ಹಲ್ಲೆ ನಡೆಸಲಾಗಿದ್ದು, ಗಂಭೀರ ಸ್ಥಿತಿಯಲ್ಲಿರುವ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

South African Cricketer Mondli
South African Cricketer Mondli
author img

By

Published : Jun 1, 2022, 7:01 AM IST

ಜೋಹಾನ್ಸ್​​ಬರ್ಗ್​: ದಕ್ಷಿಣ ಆಫ್ರಿಕಾದ ಅಂಡರ್​ -19 ತಂಡದ ಮಾಜಿ ಬೌಲರ್​​ ಮಾಂಡ್ಲಿ ಖಮಾಲೋ ಮೇಲೆ ಗಂಭೀರವಾಗಿ ಹಲ್ಲೆ ನಡೆಸಲಾಗಿದ್ದು, ಕೋಮಾ ಸ್ಥಿತಿಯಲ್ಲೇ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ. ದಕ್ಷಿಣ ಆಫ್ರಿಕಾದ ಬ್ರಿಡ್ಜ್​​​ ವಾಟರ್​​ನಲ್ಲಿರುವ ಪಬ್​​ ಹೊರಗಡೆ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ವರದಿಯಾಗಿದೆ.

ವೃತ್ತಿಪರ ಕ್ರಿಕೆಟಿಗನಾಗಿದ್ದ ಮಾಂಡ್ಲಿ ಖಮಾಲೋ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮೆದುಳಿನ ರಕ್ತಸ್ರಾವದಿಂದಾಗಿ ಅವರು ಕೋಮಾ ಸ್ಥಿತಿಯಲ್ಲಿದ್ದಾರೆಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ 27 ವರ್ಷದ ವ್ಯಕ್ತಿಯೊಬ್ಬನ ಬಂಧನ ಮಾಡಲಾಗಿದೆ. ಸದ್ಯ ನಾರ್ಥ್​ ಪೀಥರ್ಟನ್​​ ಕ್ರಿಕೆಟ್ ಕ್ಲಬ್​​ಗಾಗಿ ಆಡುತ್ತಿದ್ದ ಅವರು, ಕಳೆದ ಭಾನುವಾರ ರಾತ್ರಿ ತಂಡದೊಂದಿಗೆ ವಿಜಯೋತ್ಸವದಲ್ಲಿ ಭಾಗಿಯಾಗಿದ್ದರು. ಈ ವೇಳೆ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: Asia Cup Hockey 2022: ಕೊರಿಯಾ ವಿರುದ್ಧ 4-4 ಗೋಲುಗಳ ಡ್ರಾ.. ಭಾರತದ ಫೈನಲ್​ ಕನಸು ಭಗ್ನ

ದಕ್ಷಿಣ ಆಫ್ರಿಕಾದ ಖಮಾಲೋ ಇಲ್ಲಿಯವರೆಗೆ 4 ಪ್ರಥಮ ದರ್ಜೆ ಪಂದ್ಯ ಹಾಗೂ 1 ಲಿಸ್ಟ್ ಎ ಪಂದ್ಯವನ್ನಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ನಾರ್ಥ್​​ ಪೀಥರ್ಟನ್​ ಕ್ರಿಕೆಟ್​ ಕ್ಲಬ್​ ಪ್ರಕಟಣೆ ಹೊರಡಿಸಿದ್ದು, ಘಟನೆಯಿಂದ ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ. ಖಮಾಲೋ ಅವರಿಗೆ ಸದ್ಯ ಚಿಕಿತ್ಸೆ ಮುಂದುವರೆದಿದೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.