ETV Bharat / sports

ಕ್ಷೇತ್ರ ರಕ್ಷಣೆ ವೇಳೆ ಡಿಕ್ಕಿ: ರಾಣಾಗೆ ಗಂಭೀರ ಗಾಯ

author img

By ETV Bharat Karnataka Team

Published : Dec 30, 2023, 8:42 PM IST

ಸ್ನೇಹಾ ರಾಣಾ ಮತ್ತು ಪೂಜಾ ವಸ್ತ್ರಾಕರ್ ನಡುವೆ ಕ್ಷೇತ್ರ ರಕ್ಷಣೆ ವೇಳೆ ಡಿಕ್ಕಿ ಆಗಿದ್ದು, ರಾಣಾ ಗಂಭೀರವಾಗಿ ಗಾಯಗೊಂಡ ಕಾರಣ ಸ್ಕ್ಯಾನ್​ಗೆ ಕಳಿಸಲಾಗಿದೆ ಎಂದು ಬಿಸಿಸಿಐ ಮಾಹಿತಿ ನೀಡಿದೆ.

Sneh Rana
Sneh Rana

ಮುಂಬೈ (ಮಹಾರಾಷ್ಟ್ರ): ಇಲ್ಲಿನ ವಾಂಖೆಡೆಯಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಪೂಜಾ ವಸ್ತ್ರಾಕರ್ ಮತ್ತು ಸ್ನೇಹಾ ರಾಣಾ ನಡುವೆ ಡಿಕ್ಕಿ ಸಂಭವಿಸಿದ್ದು, ರಾಣಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಶ್ರೇಯಾಂಕಾ ಪಾಟೀಲ್​ 25ನೇ ಓವರ್​ನಲ್ಲಿ ಫೀಲ್ಡಿಂಗ್​ ಮಾಡುವಾಗ ಇಬ್ಬರ ನಡುವೆ ಡಿಕ್ಕಿ ಸಂಭವಿಸಿದೆ.

ಡಿಕ್ಕಿಯಲ್ಲಿ ಸ್ನೇಹಾ ಗಂಭೀರವಾಗಿ ಗಾಯಗೊಂಡಿದ್ದು, ಮೈದಾನದಲ್ಲೇ ಕುಸಿದು ಬಿದ್ದರು. ವೈದ್ಯರು ಮೈದಾನಕ್ಕೆ ಬಂದು ರಾಣಾ ಅವರನ್ನು ಕರೆದೊಯ್ದರು. ಆಫ್​ ಬ್ರೇಕ್ ಸ್ಪಿನ್ನರ್ ಸ್ನೇಹಾ ರಾಣಾ ಅವರನ್ನು ಸ್ಕ್ಯಾನ್‌ಗೆ ಕಳಿಸಲಾಗುವುದು ಎಂದು ಬಿಸಿಸಿಐ ಮಾಹಿತಿ ನೀಡಿದೆ.

"ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ಡಿಕ್ಕಿಯಿಂದ ಸ್ನೇಹಾ ರಾಣಾ ತಲೆನೋವಿಗೆ ತುತ್ತಾಗಿದ್ದಾರೆ. ಅವರನ್ನು ಸ್ಕ್ಯಾನ್‌ಗಾಗಿ ತೆಗೆದುಕೊಳ್ಳಲಾಗಿದೆ ಮತ್ತು ಅವರು ನಡೆಯುತ್ತಿರುವ ಏಕದಿನದಲ್ಲಿ ಇನ್ನು ಮುಂದೆ ಭಾಗವಹಿಸುವುದಿಲ್ಲ. ಹರ್ಲೀನ್ ಡಿಯೋಲ್ ಅವರನ್ನು ಬದಲಿಯಾಗಿ ಹೆಸರಿಸಲಾಗಿದೆ" ಎಂದು ಬಿಸಿಸಿಐ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.

pic.twitter.com/GaoDni3xFj

— Virat Sharma (@ViratSharm39743) December 30, 2023

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿದ ಆಸ್ಟ್ರೇಲಿಯಾಕ್ಕೆ ಉತ್ತಮ ರನ್​ ಗಳಿಸಲು ಭಾರತದ ಕ್ಷೇತ್ರ ರಕ್ಷಣೆ ಸಹಕಾರಿ ಆಯಿತು. ಬರೋಬ್ಬರಿ 7 ಕ್ಯಾಚ್​ ಕೈಚೆಲ್ಲಿದ ತಂಡ ಆಸೀಸ್​ ಆಟಗಾರ್ತಿಯರಿಗೆ ಹಲವು ಜೀವದಾನದ ನೀಡಿದರು. ಇದರ ಪರಿಣಾಮ ಆಸ್ಟ್ರೇಲಿಯಾ ತಂಡ 50 ಓವರ್​ಗೆ 8 ವಿಕೆಟ್​ ನಷ್ಟಕ್ಕೆ 258 ರನ್​ ಕಲೆಹಾಕಿ ಸ್ಪರ್ಧಾತ್ಮಕ ಗುರಿಯನ್ನು ನೀಡಿತು.

ಆಸೀಸ್ ಆರಂಭಿಕ ಆಟಗಾರ್ತಿ ಫೋಬೆ ಲಿಚ್‌ಫೀಲ್ಡ್ (98 ಎಸೆತಗಳಲ್ಲಿ 63 ರನ್) ಮತ್ತು ಎಲ್ಲಿಸ್ ಪೆರ್ರಿ (47 ಎಸೆತಗಳಲ್ಲಿ 50 ರನ್) ತಂಡಕ್ಕೆ ಸ್ಥಿರವಾದ ಅಡಿಪಾಯ ಹಾಕಲು ನಿರ್ಣಾಯಕ ಇನ್ನಿಂಗ್ಸ್​ ಆಡಿದರು. ಅಲಾನಾ ಕಿಂಗ್‌ (17 ಎಸೆತಗಳಲ್ಲಿ 28* ರನ್) ಮತ್ತು ಕಿಮ್ ಗಾರ್ತ್ (10 ಎಸೆತಗಳಲ್ಲಿ 11* ರನ್) ಅವರ ಅಜೇಯ ನಾಕ್‌ಗಳು ಆಸ್ಟ್ರೇಲಿಯಾ 258/8 ತಲುಪಲು ನೆರವಾದವು. ಮೊದಲ ಎಂಟು ಓವರ್‌ಗಳಲ್ಲಿ ಲಿಚ್‌ಫೀಲ್ಡ್ ಅವರಿಗೆ ಮೂರು ಬಾರಿ ಜೀವದಾನ ಸಿಕ್ಕಿತು ಫೋಬೆ ಅರ್ಧಶತಕ ಗಳಿಸಿ ತಂಡಕ್ಕೆ ಮಾರಕರಾದರೆ, ಕೊನೆಯಲ್ಲಿ ಬಿರುಸಿನಿಂದ ಆಡುತ್ತಿದ್ದ ಅಲಾನಾ ಕಿಂಗ್‌ ಅವರ ಕ್ಯಾಚನ್ನು ಎರಡು ಬಾರಿ ತಂಡ ಕೈಚೆಲ್ಲಿತು.

ಕ್ಯಾಚ್​ಗಳು ಕೈಚೆಲ್ಲಿದರೂ ಭಾರತದ ಬೌಲರ್​​ಗಳು ತಮ್ಮ ಸಂಪೂರ್ಣ ಶ್ರಮವನ್ನು ಬೌಲಿಂಗ್​ನಲ್ಲಿ ವಹಿಸಿದರು. ದೀಪ್ತಿ ಶರ್ಮಾ 10 ಓವರ್​ ಮಾಡಿ 38 ರನ್​ ಕೊಟ್ಟು 5 ವಿಕೆಟ್​ ಕಿತ್ತರೆ, ಪೂಜಾ, ಶ್ರೇಯಾಂಕಾ ಪಾಟೀಲ್ ಮತ್ತು ಸ್ನೇಹಾ ರಾಣಾ ತಲಾ ಒಂದು ವಿಕೆಟ್ ಪಡೆದರು.

ಇದನ್ನೂ ಓದಿ: ಐದು ವಿಕೆಟ್​ ಕಿತ್ತ ದೀಪ್ತಿ: ಭಾರತಕ್ಕೆ 259 ರನ್​ಗಳ ಗುರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.