ETV Bharat / sports

ಪದಾರ್ಪಣೆ ಪಂದ್ಯದಲ್ಲೇ ವಿನೂತನ ದಾಖಲೆ ಬರೆದ ಸ್ನೇಹ್​ ರಾಣಾ - ಆಲ್​ ರೌಂಡರ್​ ಸ್ನೇಹ್ ರಾಣಾ

ಪುರುಷರ ಟೆಸ್ಟ್ ಕ್ರಿಕೆಟ್‌ನಲ್ಲಿ ವಾಷಿಂಗ್ಟನ್ ಸುಂದರ್ ಮತ್ತು ಅಮರ್ ಸಿಂಗ್ ಪದಾರ್ಪಣೆ ಪಂದ್ಯದಲ್ಲೇ ಅರ್ಧಶತಕ ಸಿಡಿಸಿದ ಸಾಧನೆ ಮಾಡಿದ್ದರು.

Sneh Rana
ಸ್ನೇಹ್​ ರಾಣಾ
author img

By

Published : Jun 20, 2021, 9:56 AM IST

ಬ್ರಿಸ್ಟಲ್: 7 ವರ್ಷಗಳ ನಂತರ ಟೆಸ್ಟ್​ ಕ್ರಿಕೆಟ್​ಗೆ ಮರಳಿದ ಭಾರತದ ವನಿತೆಯರ ತಂಡ ಇಂಗ್ಲೆಂಡ್​ ವಿರುದ್ಧ ಏಕೈಕ ಟೆಸ್ಟ್​ ಪಂದ್ಯದಲ್ಲಿ ಡ್ರಾ ಸಾಧಿಸುವ ಮೂಲಕ ಪಂದ್ಯ ಅಂತ್ಯಗೊಳಿಸಿದೆ. ಈ ಪಂದ್ಯದಲ್ಲಿ ಆಟಗಾರ್ತಿ ಸ್ನೇಹ್ ರಾಣಾ ಸ್ಮರಣೀಯ ಸಾಧನೆಗೈದರು.

ಈ ಟೆಸ್ಟ್​ ಪಂದ್ಯದಲ್ಲಿ ಭಾರತ ತಂಡದ ಆಲ್‌ರೌಂಡರ್​ ಸ್ನೇಹ್ ರಾಣಾ ವಿನೂತನ ಸಾಧನೆ ಮಾಡಿದರು. ಪದಾರ್ಪಣೆ ಪಂದ್ಯದಲ್ಲೇ ಮಿಂಚಿದ ರಾಣಾ ತಂಡವನ್ನು ಸೋಲಿನ ಸುಳಿಯಿಂದ ಪಾರು ಮಾಡಿದ್ರು. ಚೊಚ್ಚಲ ಪಂದ್ಯದಲ್ಲೇ ರಾಣಾ 4 ವಿಕೆಟ್​ ಹಾಗೂ ಅರ್ಧಶತಕ ಸಿಡಿಸಿ ಭಾರತ ವನಿತೆಯರ ತಂಡದ ಮೊದಲ ಆಟಗಾರ್ತಿ ಎನಿಸಿಕೊಂಡರು.

ಈ ಪಂದ್ಯದಲ್ಲಿ ಸ್ನೇಹ್​ ರಾಣಾ ಮೊದಲ ಇನ್ನಿಂಗ್ಸ್‌ನಲ್ಲಿ ಅದ್ಭುತ ಬೌಲಿಂಗ್​ ದಾಳಿ ಮಾಡಿದ್ದು, ಇಂಗ್ಲೆಂಡ್​​ ತಂಡಕ್ಕೆ ಮಾರಕವಾದರು. 131 ರನ್​ ನೀಡಿ ಪ್ರಮುಖ 4 ವಿಕೆಟ್​ ಕಿತ್ತು ಇಂಗ್ಲೆಂಡ್​ ವನಿತೆಯರನ್ನು ಕಟ್ಟಿಹಾಕಿದ್ದರು. ಭಾರತದ ಎರಡನೇ ಇನ್ನಿಂಗ್ಸ್​​ನಲ್ಲಿ ಅಜಯ 80 ರನ್​ ಸಿಡಿಸಿ ತಂಡವನ್ನು ಸೋಲಿನಿಂದ ಪಾರು ಮಾಡಿದ್ದರು.

ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಸರ್ವಾಂಗೀಣ ಸಾಧನೆ ಮಾಡಿದ ಇತರ ಇಬ್ಬರು ಭಾರತೀಯರು ವಾಷಿಂಗ್ಟನ್ ಸುಂದರ್ ಮತ್ತು ಅಮರ್ ಸಿಂಗ್. ಈ ಇಬ್ಬರು ಆಟಗಾರರು ಕೂಡಾ ಪದಾರ್ಪಣೆ ಪಂದ್ಯದಲ್ಲೇ ಅರ್ಧಶತಕ ಸಿಡಿಸಿ ಮಿಂಚಿರುವ ದಾಖಲೆ ಇದೆ.

For All Latest Updates

TAGGED:

Sneh Rana
ETV Bharat Logo

Copyright © 2025 Ushodaya Enterprises Pvt. Ltd., All Rights Reserved.