ಮುಂಬೈ (ಮಹಾರಾಷ್ಟ್ರ): ಅಂತಾರಾಷ್ಟ್ರೀಯವಾಗಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಯೋಜಿಸಿದರೆ, ದೇಶೀಯ ಮಹಿಳೆಯರ ಕ್ರಿಕೆಟ್ನಲ್ಲೂ ಟೆಸ್ಟ್ ಮಾದರಿಯ ಕ್ರಿಕೆಟ್ ಆಡಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿಸಬೇಕು ಎಂದು ವನಿತೆಯರ ತಂಡದ ಉಪನಾಯಕಿ ಸ್ಮೃತಿ ಮಂಧಾನ ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೂ ಎರಡು ದಿನ ಮುಂಚಿತವಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಂಧಾನ,"ಅಂತಾರಾಷ್ಟ್ರೀಯ ಕ್ರಿಕೆಟ್ಗೆ ತಕ್ಕಂತೆ ದೇಶೀಯ ಕ್ರಿಕೆಟ್ ಋತುವನ್ನು ತಯಾರಿಸಲಾಗುತ್ತದೆ. ಹೆಚ್ಚು ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಗಳನ್ನು ಆಯೋಜಿಸಿದಲ್ಲಿ ದೇಶೀಯ ಮಹಿಳಾ ಕ್ರಿಕೆಟ್ನಲ್ಲೂ 2 ಅಥವಾ 4 ದಿನದ ಪಂದ್ಯಾವಳಿಗಳು ಕಾಣಲು ಸಿಗಬಹುದು" ಎಂದಿದ್ದಾರೆ.
ತವರಿನಲ್ಲಿ 9 ವರ್ಷಗಳ ನಂತರ ವನಿತೆಯರು ರೆಡ್ ಬಾಲ್ ಕ್ರಿಕೆಟ್ ಆಡುತ್ತಿದ್ದಾರೆ. ಹೀಗಿಗಾ, ಮಹಿಳಾ ತಂಡಕ್ಕೆ ಟೆಸ್ಟ್ ಪಂದ್ಯಗಳಲ್ಲಿ ಅನುಭವ ಕಡಿಮೆ ಇದೆ ಎಂದೇ ಹೇಳಬಹುದು. ಉಪನಾಯಕಿ ಸ್ಮೃತಿ ಮಂಧಾನ ಇಂಗ್ಲೆಂಡ್ ವಿರುದ್ಧ ವೈಟ್ ಜರ್ಸಿ ಪಂದ್ಯಕ್ಕೆ ನೂತನ ಕೋಚ್ ಅಮೋಲ್ ಮಜುಂದಾರ್ ಅವರ ಸಲಹೆ ಅನುಸರಿಸುವುದಾಗಿ ಹೇಳಿದ್ದಾರೆ.
-
How will #TeamIndia batters approach the Test against England 🤔
— BCCI Women (@BCCIWomen) December 12, 2023 " class="align-text-top noRightClick twitterSection" data="
Hear what vice-captain @mandhana_smriti had to say 🔽#INDvENG | @IDFCFIRSTBank pic.twitter.com/mPxie5wtvt
">How will #TeamIndia batters approach the Test against England 🤔
— BCCI Women (@BCCIWomen) December 12, 2023
Hear what vice-captain @mandhana_smriti had to say 🔽#INDvENG | @IDFCFIRSTBank pic.twitter.com/mPxie5wtvtHow will #TeamIndia batters approach the Test against England 🤔
— BCCI Women (@BCCIWomen) December 12, 2023
Hear what vice-captain @mandhana_smriti had to say 🔽#INDvENG | @IDFCFIRSTBank pic.twitter.com/mPxie5wtvt
ಅಮೋಲ್ ಮಜುಂದಾರ್ ಅನುಭವ ಸಹಕಾರಿ: "ನಮ್ಮಲ್ಲಿ ಅನುಭವಿ ತರಬೇತುದಾರ ಅಮೋಲ್ ಸರ್ ಇದ್ದಾರೆ. ಅವರು ರಣಜಿ ಟ್ರೋಫಿ ಕ್ರಿಕೆಟ್‌ನಲ್ಲಿ ಸಾಕಷ್ಟು ಆಡಿದ್ದಾರೆ ಮತ್ತು ಸಾಕಷ್ಟು ಟೆಸ್ಟ್ ಕ್ರಿಕೆಟ್ ಆಡಿದ್ದಾರೆ. ನಮ್ಮಲ್ಲಿ ಇಬ್ಬರು ಅಥವಾ ಮೂವರು ಮಾತ್ರ ಟೆಸ್ಟ್ ಕ್ರಿಕೆಟ್ನ ಅನುಭವ ಹೊಂದಿದ್ದಾರೆ. ಬಹಳಷ್ಟು ಆಟಗಾರ್ತಿಯರು ಕೋಚ್ ಬಳಿ ಟೆಸ್ಟ್ ಆಡುವ ಮನಸ್ಥಿತಿ ಬಗ್ಗೆ ಕೇಳುವುದುನ್ನು ನೋಡಿದ್ದೇನೆ" ಎಂದರು.
ಭಾರತ 2 ವರ್ಷದ ಹಿಂದೆ ಅಂದರೆ 2021ರ ಜೂನ್ ಮತ್ತು ಸೆಪ್ಟೆಂಬರ್‌ನಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಟೆಸ್ಟ್‌ಗಳನ್ನು ಆಡಿದೆ. ಎರಡೂ ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ. ಇಂಗ್ಲೆಂಡ್ ವನಿತೆಯರ ತಂಡ ಈ ವರ್ಷದ ಜೂನ್‌ನಲ್ಲಿ ನಡೆದ ಮಹಿಳಾ ಆಶಸ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಪಂದ್ಯವಾಗಿದ್ದರಿಂದ ಇತ್ತೀಚೆಗೆ ರೆಡ್-ಬಾಲ್ ಕ್ರಿಕೆಟ್ ಆಡಿರುವ ಅನುಭವವನ್ನು ಹೊಂದಿದೆ.
ಇಂಗ್ಲೆಂಡ್ ವಿರುದ್ಧದ ಸರಣಿ ಆರಂಭಕ್ಕೂ ಮುನ್ನ ಬೆಂಗಳೂರಿನಲ್ಲಿ ವನಿತೆಯರ ಎ ತಂಡ ಇಂಗ್ಲೆಂಡ್ ವಿರುದ್ಧ ಆಡಿತ್ತು. "ನಾವು ಒಂದು ಅಭ್ಯಾಸ ಪಂದ್ಯವನ್ನು ಹೊಂದಿದ್ದೆವು, ಎಲ್ಲ ಹುಡುಗಿಯರು ಅದರ ಭಾಗವಾಗಿದ್ದರು. ಸ್ವಲ್ಪ ದೈಹಿಕ ಸಮಸ್ಯೆಯಿಂದಾಗಿ ನಾನು ಆಡಲು ಸಾಧ್ಯವಾಗಲಿಲ್ಲ ಆದರೆ, ನಾವು ಬೆಂಗಳೂರಿನಲ್ಲಿ ನಾಲ್ಕು ದಿನಗಳ ಕಾಲ ಉತ್ತಮ ಪಂದ್ಯವನ್ನು ಆಡಿದೆವು, ಭಾರತ ಎ ಹುಡುಗಿಯರನ್ನು ಕೆಂಪು - ಬಾಲ್ ಕ್ರಿಕೆಟ್‌ನಲ್ಲಿ ಉತ್ತಮ ಸಿದ್ಧತೆ ನಡೆಸಿದ್ದಾರೆ. ಇನ್ನು ಎರಡು ದಿನಗಳ ಕಾಲ ಸಂಪೂರ್ಣ ತಂಡ ಇಲ್ಲಿ ಅಭ್ಯಾಸದಲ್ಲಿ ಪಾಲ್ಗೊಳ್ಳಲಿದೆ" ಎಂದು ಮಾಹಿತಿ ನೀಡಿದ್ದಾರೆ.
"ಟೆಸ್ಟ್ಗೆ ದೈಹಿಕ ಮತ್ತು ಮಾನಸಿಕ ತಯಾರಿ ಬೇಕಾಗುತ್ತದೆ. ನಾಲ್ಕು ದಿನ ಮೈದಾನದಲ್ಲಿ ಆಡುವುದಕ್ಕೆ ಹೆಚ್ಚು ಶ್ರಮ ವಹಿಸಬೇಕು. ನಾವು ಕಳೆದ ಕೆಲ ವರ್ಷಗಳಿಂದ ಟಿ-20 ಮತ್ತು ಏಕದಿನವನ್ನೇ ಹೆಚ್ಚು ಆಡಿದ್ದರಿಂದ ಇದು ಒತ್ತಡ ಎಂದು ಕಾಣಿಸಬಹುದು. ಆದರೆ, ಆಟದ ಶೈಲಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಹೆಚ್ಚು ತಾಳ್ಮೆಯಿಂದ ಆಡಬೇಕು. ಅವಕಾಶ ಸಿಕ್ಕಿದರೆ ಸಿಕ್ಸ್ ಸಹ ಹೊಡೆಯಬಹುದು" ಎಂದು ನಗುತ್ತಾ ಉತ್ತರಿಸಿದರು.
ಇದನ್ನೂ ಓದಿ: ರಿಷಭ್ ಪಂತ್ ನಾಯಕತ್ವದಲ್ಲೇ 2024ರ ಐಪಿಎಲ್ ಆಡಲಿದೆ ಡೆಲ್ಲಿ ಕ್ಯಾಪಿಟಲ್ಸ್..!