ಹೈದರಾಬಾದ್(ತೆಲಂಗಾಣ): ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಆರಂಭಿಕ ಶುಭಮನ್ ಗಿಲ್ ದ್ವಿಶತಕ ದಾಖಲಿಸಿದ್ದಾರೆ. ಈ ಮೂಲಕ ಭಾರತದ ದಿಗ್ಗಜ ಬ್ಯಾಟರ್ಗಳ ದಾಖಲೆಯನ್ನು ಹಿಮ್ಮೆಟ್ಟಿಸಿದ್ದಾರೆ. ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಮತ್ತು ಶಿಖರ್ ಅತೀ ವೇಗದ 1000 ರನ್ ದಾಖಲೆ ಧೂಳಿ ಪಟವಾಗಿದೆ.
ದ್ವಿಶತಕ ಬಾರಿಸಿದ ಐದನೇ ಬ್ಯಾಟರ್: ಭಾರತದ ಪರವಾಗಿ ದ್ವಿಶತಕ ಗಳಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಐದನೇಯವರಾಗಿ ಗಿಲ್ ಹೊರಹೊಮ್ಮಿದ್ದಾರೆ. ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ ಮತ್ತು ಇತ್ತೀಚೆಗೆ ದ್ವಿಶತಕ ಬಾರಿಸಿದ ಇಶನ್ ಕಿಶನ್ ಪಟ್ಟಿಯಲ್ಲಿದ್ದಾರೆ. ಆದರೆ, ಭಾರತದ ಪರವಾಗಿ ಇದುವರೆಗೂ ಏಳು ಡಬಲ್ ಸೆಂಚುರಿಗಳು ದಾಖಲಾಗಿದೆ. ಇದರಲ್ಲಿ ಮೂರು ದ್ವಿಶತಕ ರೋಹಿತ್ ಶರ್ಮಾ ಹೆಸರಿನಲ್ಲಿದೆ. ಏಕದಿನದ ಭಾರತೀಯ ಅತೀ ಹೆಚ್ಚು ರನ್ ದಾಖಲೆಯೂ ರೋಹಿತ್ ಶರ್ಮಾ (264) ಹೆಸರಿನಲ್ಲಿದೆ.
-
𝗧𝗵𝗲 𝗜𝗹𝗹𝘂𝘀𝘁𝗿𝗶𝗼𝘂𝘀 𝟮𝟬𝟬 𝗖𝗹𝘂𝗯!
— BCCI (@BCCI) January 18, 2023 " class="align-text-top noRightClick twitterSection" data="
Welcome @ShubmanGill 😃👏#TeamIndia | #INDvNZ | @mastercardindia pic.twitter.com/EFZ6FXffu6
">𝗧𝗵𝗲 𝗜𝗹𝗹𝘂𝘀𝘁𝗿𝗶𝗼𝘂𝘀 𝟮𝟬𝟬 𝗖𝗹𝘂𝗯!
— BCCI (@BCCI) January 18, 2023
Welcome @ShubmanGill 😃👏#TeamIndia | #INDvNZ | @mastercardindia pic.twitter.com/EFZ6FXffu6𝗧𝗵𝗲 𝗜𝗹𝗹𝘂𝘀𝘁𝗿𝗶𝗼𝘂𝘀 𝟮𝟬𝟬 𝗖𝗹𝘂𝗯!
— BCCI (@BCCI) January 18, 2023
Welcome @ShubmanGill 😃👏#TeamIndia | #INDvNZ | @mastercardindia pic.twitter.com/EFZ6FXffu6
19 ಇನ್ನಿಂಗ್ಸ್ನಲ್ಲಿ ಸಹಸ್ರ ಸಾಧನೆ: ನಾಲ್ಕು ದಿನದ ಅಂತರದಲ್ಲಿ ಮತ್ತೊಂದು ಶತಕವನ್ನು ಗಿಲ್ ದಾಖಲಿಸಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಸಾವಿರ ರನ್ ಪೂರೈಸಿದ್ದಾರೆ. ಗಿಲ್ಗೆ ಏಕದಿನ ಕ್ರಿಕೆಟ್‌ನಲ್ಲಿ 1000 ರನ್ ದಾಖಲಿಸಲು 105 ರನ್ಗಳ ಅವಶ್ಯಕತೆ ಇತ್ತು. ಇಂದು ಶತಕ ಗಳಿಸಿ ಮುನ್ನಡೆಯುತ್ತಿದ್ದಂತೆ ಈ ದಾಖಲೆ ಬರೆದರು.
ಗಿಲ್ ಭಾರತೀಯರಲ್ಲಿ ಅತೀ ಕಡಿಮೆ ಇನ್ನಿಂಗ್ಸ್ನಲ್ಲಿ ಸಹಸ್ರ ರನ್ ಪೂರೈಸಿದ ಬ್ಯಾಟರ್ ಆಗಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಅವರ 24 ಇನ್ನಿಂಗ್ಸ್‌ಗಳಲ್ಲಿ ಈ ದಾಖಲೆ ಮಾಡಿದ್ದರು. ಎಲ್ಲ ದೇಶಗಳನ್ನು ಪರಿಗಣಿಸಿದರೆ ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 1000 ರನ್ ಗಳಿಸಿದ ಜಂಟಿ ಎರಡನೇ ಸ್ಥಾನವನ್ನು ಪಾಕಿಸ್ತಾನ ಬ್ಯಾಟ್ಸ್‌ಮನ್ ಇಮಾಮ್ ಉಲ್ ಹಕ್ ಅವರೊಂದಿಗೆ ಶುಭಮನ್ ಗಿಲ್ ಹಂಚಿಕೊಂಡಿದ್ದಾರೆ. ಪಾಕಿಸ್ತಾನದ ಬ್ಯಾಟರ್ ಫಖಾರ್ ಝಮಾನ್ 18 ಇನ್ನಿಂಗ್ಸ್ನಲ್ಲಿ ಸಾವಿರ ರನ್ ಪೂರೈಸಿದ್ದು, ಮೊದಲ ಸ್ಥಾನದಲ್ಲಿದ್ದಾರೆ.
ದ್ವಿಶತಕ ಗಳಿಸಿದ ಅತೀ ಕಿರಿಯ ಬ್ಯಾಟರ್: ಬಾಂಗ್ಲಾ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಇಶನ್ ಕಿಶನ್(24 ವರ್ಷ) ಇನ್ನೂರು ರನ್ ಗಳಿಸಿದ್ದರು. ಇವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಪರವಾಗಿ ಅತೀ ಕಿರಿಯ ದ್ವಿಶತಕ ದಾಖಲಿಸಿ ಆಟಗಾರರಾಗಿದ್ದರು. ಇಂದು ಗಿಲ್ ಇನ್ನೂರು ಗಳಿಸಿ ಅವರ ದಾಖಲೆಯನ್ನು ಹಿಮ್ಮೆಟ್ಟಿಸಿರು. ಗಿಲ್ಗೆ ಇನ್ನೂ 23 ವರ್ಷ ಹೀಗಾಗಿ ಭಾರತದ ಪರ ದ್ವಿಶತಕ ಹೊಡೆದ ಕಿರಿಯ ಆಟಗಾರ ಎಂಬ ಖ್ಯಾತಿ ಗಳಿಸಿದ್ದಾರೆ. ರೋಹಿತ್ ಶರ್ಮಾ 26ರನೇ ವರ್ಷದಲ್ಲಿ ಇನ್ನೂರು ರನ್ ಗಳಸಿದ್ದರು.
ನ್ಯೂಜಿಲ್ಯಾಂಡ್ ವಿರುದ್ಧ ಅತೀ ಹೆಚ್ಚು ರನ್ ಗಳಿಸಿದ ಬ್ಯಾಟರ್ ಗಿಲ್: ಸಚಿನ್ 186 ರನ್ ಗಳಿಸಿ ನ್ಯೂಜಿಲ್ಯಾಂಡ್ ವಿರುದ್ಧ ಅತೀ ಹೆಚ್ಚು ರನ್ ಗಳಿಕೆ ಮಾಡಿದವರಾಗಿದ್ದರು. ಗಿಲ್ 201 ರನ್ ಗಳಿಸಿ ಸಚಿನ್ರ ಈ ದಾಖಲೆಯನ್ನು ಮುರಿದಿದ್ದು, ಅವರನ್ನು ಎರಡನೇ ಸ್ಥಾನಕ್ಕೆ ತಳ್ಳಿದ್ದಾರೆ. ವಿಪರ್ಯಾಸ ಎಂದರೆ ಸಚಿನ್ ಕೂಡ ಹೈದರಾಬಾದ್ನ ಕ್ರಿಡಾಂಗಣದಲ್ಲೇ ನ್ಯೂಜಿಲ್ಯಾಂಡ್ ವಿರುದ್ಧ 186ರನ್ ಗಳಿಸಿದ್ದರು. ಮೂರನೇ ಸ್ಥಾನದಲ್ಲಿ ಮ್ಯಾಥ್ಯೂ ಹೆಡೆನ್ (181) ಇದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ ಮುನ್ನೂರು ರನ್ಗೂ ಹೆಚ್ಚಿನ ಗುರಿ: ಭಾರತ ಸತತವಾಗಿ ಏಕದಿನ ಕ್ರಿಕೆಟ್ ಆಡುತ್ತಿದ್ದು, ಕಳೆದ ನಾಲ್ಕು ಇನ್ನಿಂಗ್ಸ್ನಲ್ಲಿ ತಿಶತಕ ರನ್ಗಳ ಗುರಿಯನ್ನು ಎದುರಾಳಿಗೆ ನೀಡುತ್ತಾ ಬಂದಿದೆ. ಬಾಂಗ್ಲಾ ಎದುರಿನ ಕೊನೆಯ ಪಂದ್ಯದಲ್ಲಿ 409 ರನ್ ಗುರಿ ನೀಡಿತ್ತು. ಈ ಪಂದ್ಯದಲ್ಲಿ ಇಶನ್ ಕಿಶನ್ ದ್ವಿಶತಕ ಗಳಿಸಿದ್ದರು. ಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ 373 ಮತ್ತು ಮೂರನೇ ಪಂದ್ಯದಲ್ಲಿ 390 ರನ್ ಗುರಿ ನೀಡಿದ್ದರು. ಇಂದಿನ ಪಂದ್ಯದಲ್ಲಿ 349ರನ್ ಗಳಿಸುವ ಮೂಲಕ ಭಾರತ ಸತತ ಮುನ್ನೂರು ಪ್ಲೆಸ್ ರನ್ ಗುರಿಯನ್ನು ಎದುರಾಳಿಗೆ ನೀಡುತ್ತಾ ಬಂದಿದೆ.
ಇದನ್ನೂ ಓದಿ: ಶುಭಮನ್ ಗಿಲ್ ದಾಖಲೆಯ ದ್ವಿಶತಕ: ನ್ಯೂಜಿಲ್ಯಾಂಡ್ಗೆ ಬೃಹತ್ ಗೆಲುವಿನ ಗುರಿ ನೀಡಿದ ಭಾರತ