ETV Bharat / sports

ಕ್ರಿಕೆಟ್​​ ಇರೋವರೆಗೂ ಶೇನ್​ ವಾರ್ನ್​ ಹೆಸರು ಅಜರಾಮರ​: ದ್ರಾವಿಡ್​​ ಕಂಬನಿ - ಕ್ರಿಕೆಟ್​ ತಂಡದ ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​​

ನನ್ನ ಕ್ರಿಕೆಟ್​ ವೃತ್ತಿ ಜೀವನದಲ್ಲಿ ಶೇನ್​ ವಾರ್ನ್​ ಪ್ರಮುಖ ವ್ಯಕ್ತಿ ಆಗಿದ್ದರು ಎಂದೇ ನಾನು ಭಾವಿಸಿದ್ದೇನೆ ಎಂದು ದ್ರಾವಿಡ್ ಕಂಬನಿ ಮಿಡಿದಿದ್ದಾರೆ.

rahul dravid
ದ್ರಾವಿಡ್​​ ಕಂಬನಿ
author img

By

Published : Mar 6, 2022, 3:58 PM IST

ಮೊಹಾಲಿ (ಪಂಜಾಬ್​): ಆಸ್ಪ್ರೇಲಿಯಾದ ಖ್ಯಾತ ಕ್ರಿಕೆಟರ್​, ಸ್ಪೀನ್​ ಮಾಂತ್ರಿಕ ಶೇನ್​ ವಾರ್ನ್​​ ಹಠಾತ್​ ಅಗಲಿಕೆಯಿಂದ ನನಗೆ ವೈಯಕ್ತಿಕ ನಷ್ಟ ಉಂಟಾಗಿದೆ. ಕ್ರಿಕೆಟ್​​ ಆಡುವವರೆಗೂ ಶೇನ್​ ವಾರ್ನ್​​ ಹೆಸರು ಅಚ್ಚಳಿಯದೇ ಉಳಿಯಲಿದೆ ಎಂದು ಭಾರತ ಕ್ರಿಕೆಟ್​ ತಂಡದ ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​​ ಹೇಳಿದ್ದಾರೆ.

ಶೇನ್​ ವಾರ್ನ್​​ ಎದುರು ನಾನು ಕ್ರಿಕೆಟ್​​ ಆಡಿರುವುದೇ ನನಗೆ ಹೆಮ್ಮೆ. ಅವರನ್ನು ವೈಯಕ್ತಿಕವಾಗಿ ತಿಳಿದುಕೊಂಡಿರುವುದು ಮತ್ತು ಸುದೀರ್ಘ ಕಾಲ ಅವರ ಸಹಪಾಠಿಯಾಗಿರುವುದು ನನ್ನ ಭಾಗ್ಯ. ನನ್ನ ಕ್ರಿಕೆಟ್​ ವೃತ್ತಿ ಜೀವನದಲ್ಲಿ ವಾರ್ನ್​ ಪ್ರಮುಖ ವ್ಯಕ್ತಿ ಆಗಿದ್ದರು ಎಂದೇ ನಾನು ಭಾವಿಸಿದ್ದೇನೆ ಎಂದು ದ್ರಾವಿಡ್ ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ: ತನ್ನ ಬದುಕನ್ನು ಹೇಳುವ ಬಯೋಪಿಕ್​ ಬಗ್ಗೆ ಶೇನ್​ ವಾರ್ನ್ ಕಂಡ ಕನಸು ಏನಾಯ್ತು? ​

ಆಗಾಗ್ಗೆ ಭೇಟಿ ಮಾಡುತ್ತಿದ್ದರೂ ಅವರು ಆಪ್ತತೆಯಿಂದ ಕಾಣುತ್ತಿದ್ದರು. ನಿಜಕ್ಕೂ ಅವರ ಅಗಲಿಕೆ ನನಗೆ ವೈಯಕ್ತಿಕ ನಷ್ಟವೇ ಆಗಿದೆ. ಇದು ನನ್ನನ್ನು ತುಂಬಾ ನೋವುಂಟು ಮಾಡಿದೆ ಮತ್ತು ದುಃಖಕರವಾಗಿದೆ. ಕ್ರಿಕೆಟ್​ ಆಟವನ್ನು ಆಡುವವರೆಗೆ ಶೇನ್​ ವಾರ್ನ್ ಮತ್ತು ರಾಡ್ನಿ ಮಾರ್ಷ್ ಅಂತವರು ಸದಾ ನೆನಪಿನಲ್ಲಿ ಉಳಿಯುತ್ತಾರೆ ಎಂದು ಕ್ರಿಕೆಟ್​ ದಿಗ್ಗಜ ರಾಹುಲ್​ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.