ETV Bharat / sports

IPL 2024: ಆರ್​ಸಿಬಿ ನಿರ್ದೇಶಕರಾಗಿ ಮೊ ಬೊಬಾಟ್‌ ಆಯ್ಕೆ.. ಚಾಲೆಂಜರ್ಸ್​ ತಂಡದ ಮೇಲೆ ಹೆಚ್ಚಿದ ನಿರೀಕ್ಷೆ! - ETV Bharath Kannada news

2024 ರ ಐಪಿಎಲ್​ಗೂ ಮುನ್ನ ಆರ್​ಸಿಬಿ ತನ್ನ ಕೋಚ್​ ಮತ್ತು ನಿರ್ದೇಶಕರ ಬದಲಾವಣೆಗೆ ಮುಂದಾಗಿದೆ. ಈ ಹಿಂದೆ ಇದ್ದ ಮೈಕ್ ಹೆಸ್ಸನ್ ಮತ್ತು ಸಂಜಯ್​ ಬಂಗಾರ್​ ಅವರನ್ನು ಕೈಬಿಟ್ಟಿದೆ. ಈಗ ಕೋಚ್​​ ಆಗಿ ಆಂಡಿ ಫ್ಲವರ್ ಮತ್ತು ನಿರ್ದೇಶಕರಾಗಿ ಮೊ ಬೊಬಾಟ್‌ ಅವರನ್ನು ಆಯ್ಕೆ ಮಾಡಿದೆ.

Mo Bobat
ಮೊ ಬೊಬಾಟ್‌
author img

By ETV Bharat Karnataka Team

Published : Sep 29, 2023, 4:17 PM IST

ಬೆಂಗಳೂರು: 16 ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ (ಐಪಿಎಲ್​) ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ಮುಂದಿನ ಬಾರಿಯ ಸ್ಪರ್ಧೆಗೆ ಕೊಚ್​ ಹಾಗೂ ನಿದೇರ್ಶಕರನ್ನೇ ಕೈಬಿಟ್ಟು ಹೊಸಬರಿಗೆ ಮಣೆ ಹಾಕಿದೆ. ಈ ಹಿಂದೆಯೇ ಕೋಚ್​ ಸಂಜಯ್​ ಬಂಗಾರ್​ ಅವರನ್ನು ಮತ್ತು ಅವರ ಜೊತೆ ಮೈಕ್ ಹೆಸ್ಸನ್ ಅವರನ್ನು ಕೈಬಿಡಲಾಗಿತ್ತು. ಬಂಗಾರ ಜಾಗಕ್ಕೆ ಆಗಸ್ಟ್​​ ಆರಂಭದಲ್ಲಿ ಆಂಡಿ ಫ್ಲವರ್ ಅವರನ್ನು ಆಯ್ಕೆ ಮಾಡಲಾಗಿತ್ತು. ಈಗ ಮೈಕ್ ಹೆಸ್ಸನ್ ಅವರ ಜಾಗಕ್ಕೆ ಮೊ ಬೊಬಾಟ್‌ ಅವರನ್ನು ಕರೆಸಿಕೊಳ್ಳಲಾಗಿದೆ.

  • RCB appoints Mo Bobat as the Director of Cricket for IPL. 🚨

    Bobat has served England Cricket as their Performance Director since 2019, and has been a part of the ECB set up for 12 years, during which England lifted the T20I and ODI World Cups. 🏆

    Bobat has also worked very… pic.twitter.com/Q61k6WgNPI

    — Royal Challengers Bangalore (@RCBTweets) September 29, 2023 " class="align-text-top noRightClick twitterSection" data=" ">

ಮೊ ಬೊಬಾಟ್‌ ಆರ್​ಸಿಬಿಯ ನಿರ್ದೇಶಕರಾಗಿ ತಂಡವನ್ನು ಮುನ್ನಡೆಸಿದರೆ, ಆಂಡಿ ಫ್ಲವರ್ ಮುಖ್ಯ ತರಬೇತುದಾರರಾಗಿ ತಂಡದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಇನ್ನು ಆಟಗಾರರ ಮಿನಿ ಹಾರಾಜಿನ ವೇಳೆ ತಂಡದಲ್ಲಿ ಯಾವೆಲ್ಲಾ ಬದಲಾವಣೆಗಳು ಆಗಲಿದೆ ಎಂಬುದನ್ನು ಕಾದುನೋಡಬೇಕಿದೆ. 2024ರ ಆವೃತ್ತಿಗೂ ಮುನ್ನ ನಿರ್ದೇಶಕ ಮತ್ತು ಕೋಚ್​ ಬದಲಾವಣೆ ಆರ್​ಸಿಬಿ ತಂಡದ ಮೇಜರ್​ ಸರ್ಜರಿ ಎಂದೇ ಪರಿಗಣಿಸಲಾಗುತ್ತಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ನಿರ್ದೇಶಕರಾಗಿ ಆಯ್ಕೆ ಅಗಿರುವ ಮೊ ಬೊಬಾಟ್‌ 12 ವರ್ಷಗಳ ಕಾಲ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಕಾರ್ಯನಿರ್ವಹಿಸಿದ ಅನುಭವವನ್ನು ಹೊಂದಿದ್ದಾರೆ. 2019 ವಿಶ್ವಕಪ್​ ಗೆದ್ದ ಇಂಗ್ಲೆಂಡ್​ ತಂಡ ನಿರ್ದೇಶಕರಾಗಿದ್ದರು. ಇಂಗ್ಲೆಂಡ್​ ತಂಡಕ್ಕೆ ನಿರ್ದೇಶಕರಾಗಿ ಆಯ್ಕೆ ಆದ ನಂತರ ತಂಡದ ಪ್ರದರ್ಶನದಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿದ್ದಾರೆ. ಇವರ ನಿರ್ದೇಶನದಲ್ಲಿ ಇಂಗ್ಲೆಂಡ್​ ಟಿ20, ಏಕದಿನ ಮತ್ತು ಆ್ಯಶಸ್​ ಸರಣಿಯಲ್ಲಿ ಗಮನಾರ್ಹ ಪ್ರದರ್ಶನ ನೀಡುತ್ತಾ ಬಂದಿದೆ. ಬೊಬಾಟ್ ಮತ್ತು ಆರ್‌ಸಿಬಿ ಮುಖ್ಯ ಕೋಚ್ ಆಂಡಿ ಫ್ಲವರ್ ಈ ಹಿಂದೆ ಇಂಗ್ಲೆಂಡ್​ ತಂಡದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಈಗ ಮತ್ತೊಮ್ಮೆ ಈ ಜೋಡಿ ಒಂದಾಗಿದ್ದು ಆರ್​ಸಿಬಿ ಅಭಿಮಾನಿಗಳಿಗೆ ಕುತೂಹಲ ಹೆಚ್ಚುವಂತೆ ಮಾಡಿದೆ.

"ಕ್ರಿಕೆಟ್‌ನ ನಿರ್ದೇಶಕರಾಗಿ ಆರ್​ಸಿಬಿಗೆ ಸೇರ್ಪಡೆಗೊಳ್ಳಲು ನಾನು ಉತ್ಸುಕನಾಗಿದ್ದೇನೆ ಮತ್ತು ಹೆಮ್ಮೆಪಡುತ್ತೇನೆ. ಆರ್​ಸಿಬಿ ವಿಶ್ವದಲ್ಲೇ ಅತ್ಯಂತ ಗುರುತಿಸಬಹುದಾದ ಫ್ರಾಂಚೈಸಿಗಳಲ್ಲಿ ಒಂದಾಗಿದ್ದು, ಎಲ್ಲೆಡೆ ಅಭಿಮಾನಿ ಬಳಗವನ್ನು ಹೊಂದಿದೆ. ಈ ತಂಡದಲ್ಲಿ ಸೇವೆ ಸಲ್ಲಿಸುವುದು ದೊಡ್ಡ ಗೌರವವಾಗಿದೆ. ಮೈಕ್ ಹೆಸ್ಸನ್ ಮತ್ತು ಸಂಜಯ್ ಬಂಗಾರ್ ತಂಡಕ್ಕಾಗಿ ಉತ್ತಮ ಸೇವೆಯನ್ನು ಮಾಡಿದ್ದಾರೆ. ಅವರ ಸ್ಥಾನದಲ್ಲಿ ಮುಂದುವೆರೆಯುವುದು ಸಂತಸ ತಂದಿದೆ" ಎಂದು ಬೊಬಾಟ್ ಹೇಳಿದ್ದಾರೆ.

"ನಾನು ಆಂಡಿ ಫ್ಲವರ್ ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ. ಸಮಯ ಬಂದಾಗ, ನಾನು ಇಂಗ್ಲೆಂಡ್​ ಕ್ರಿಕೆಟ್​ನ್ನು ತೊರೆಯುತ್ತೇನೆ. ವರ್ಷಗಳಲ್ಲಿ ನಾನು ಪಡೆದ ಎಲ್ಲಾ ಅವಕಾಶಗಳು ಮತ್ತು ಬೆಂಬಲಕ್ಕಾಗಿ ನಾನು ಶಾಶ್ವತವಾಗಿ ಕೃತಜ್ಞರಾಗಿರುತ್ತೇನೆ. ಆಂಡಿ ಮತ್ತು ನಾನು ಮುಂಬರುವ ಸವಾಲುಗಳನ್ನು ಆನಂದಿಸುತ್ತಿದ್ದೇವೆ ಮತ್ತು ಫಾಫ್ ಆಟಗಾರರಿಗೆ ಅವರ ಸಾಮರ್ಥ್ಯವನ್ನು ಪೂರೈಸಲು ಸಹಾಯ ಮಾಡಲು ನಾವು ಎದುರು ನೋಡುತ್ತಿದ್ದೇವೆ"ಎಂದಿದ್ದಾರೆ .

ನೇಮಕಾತಿ ಕುರಿತು ಮಾತನಾಡುತ್ತಾ, ಡಿಯಾಜಿಯೊ ಇಂಡಿಯಾದ ಮುಖ್ಯ ವಾಣಿಜ್ಯ ಅಧಿಕಾರಿ ಮತ್ತು ಆರ್​ಸಿಬಿ ಅಧ್ಯಕ್ಷರಾದ ಪ್ರಥ್ಮೇಶ್ ಮಿಶ್ರಾ,"ಐಪಿಎಲ್‌ನಲ್ಲಿ ಆರ್​ಸಿಬಿಗಾಗಿ ಕ್ರಿಕೆಟ್ ನಿರ್ದೇಶಕರಾಗಿ ಮೊ ಬೊಬಾಟ್ ಅವರನ್ನು ಸ್ವಾಗತಿಸಲು ನಾವು ಸಂತೋಷಪಡುತ್ತೇವೆ. ಆರ್​ಸಿಬಿ ಯಾವಾಗಲೂ ಪ್ರದರ್ಶನ-ಆಧಾರಿತ ವಿಧಾನದ ಮೇಲೆ ಕೇಂದ್ರೀಕರಿಸಿದೆ. 'ಪ್ಲೇಬೋಲ್ಡ್' ಆರ್​ಸಿಬಿಯ ಮೂಲ ತತ್ವ. ಬೊಬಾಟ್ ಅವರು ಇಂಗ್ಲೆಂಡ್‌ನೊಂದಿಗೆ ಈಗಾಗಲೇ ಸಾಬೀತುಪಡಿಸಿದ್ದಾರೆ ಮತ್ತು ಪರಿಣತಿ, ವರ್ಷಗಳ ಅನುಭವದೊಂದಿಗೆ ಅವರು ಆರ್‌ಸಿಬಿಗೆ ಹೊಸ ಶ್ರೇಷ್ಠತೆಗೆ ಮಾರ್ಗದರ್ಶನ ನೀಡುತ್ತಾರೆ ಎಂದು ನಾನು ನಂಬುತ್ತೇನೆ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ICC Cricket World Cup 2023: ವಿಶ್ವಕಪ್ ಪಂದ್ಯಗಳ ಅನಧಿಕೃತ ಪ್ರಸಾರ, ಸ್ಟ್ರೀಮಿಂಗ್​ಗೆ ದೆಹಲಿ ಹೈಕೋರ್ಟ್ ನಿರ್ಬಂಧ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.