ETV Bharat / sports

T20I: 4 ಬೌಂಡರಿ, 10 ಸಿಕ್ಸರ್​ ಸಹಿತ ಪೊವೆಲ್ ಶತಕ​: ಇಂಗ್ಲೆಂಡ್ ವಿರುದ್ಧ ಗೆದ್ದು ಬೀಗಿದ ವೆಸ್ಟ್​​ ವಿಂಡೀಸ್​ - ರೊವ್ಮನ್ ಪೊವೆಲ್ ಶತಕ

ವಿಂಡೀಸ್ ನೀಡಿದ್ದ 225 ರನ್​ಗಳ ಬೃಹತ್ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 204ರನ್​ಗಳಿಸಿ 20 ರನ್​ಗಳ ಸೋಲು ಕಂಡಿತು. ಟಾಮ್ ಬಾಂಟಮ್​ 39 ಎಸೆತಗಳಲ್ಲಿ 3 ಬೌಂಡರಿ ಮತ್ತು 6 ಸಿಕ್ಸ್​ಗಳ ಸಹಿತ 73 ರನ್​ಗಳಿಸಿ ತಂಡದ ಗರಿಷ್ಠ ಸ್ಕೋರರ್​ ಎನಿಸಿಕೊಂಡರು.

Rovman Powell century
ರೊವ್ಮನ್​ ಪೊವೆಲ್ ಶತಕ
author img

By

Published : Jan 27, 2022, 5:38 PM IST

ಬಾರ್ಬೆಡೋಸ್: ಇಂಗ್ಲೆಂಡ್​ ವಿರುದ್ಧದ 3ನೇ ಪಂದ್ಯದಲ್ಲಿ ಆಲ್​ರೌಂಡರ್​ ರೊವ್ಮನ್ ಪೊವೆಲ್ ಅವರು ಅಬ್ಬರಿ ಶತಕದ ನೆರವಿನಿಂದ ವೆಸ್ಟ್​ ಇಂಡೀಸ್​ 20 ರನ್​ಗಳ ಭರ್ಜರಿ ಜಯ ಸಾಧಿಸಿ 5 ಪಂದ್ಯಗಳ ಟಿ20 ಸರಣಿಯಲ್ಲಿ 2-1ರಲ್ಲಿ ಮುನ್ನಡೆ ಪಡೆದುಕೊಂಡಿದೆ.

ಬುಧವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್​ ಇಂಡೀಸ್​ ತಂಡ 20 ಓವರ್​ಗಳಲ್ಲಿ 5 ವಿಕೆಟ್​ ಕಳೆದುಕೊಂಡು 224 ರನ್​ಗಳಿಸಿತ್ತು. ರೊವ್ಮನ್ ಪೊವೆಲ್ 53 ಎಸೆತಗಳಲ್ಲಿ 4 ಬೌಂಡರಿ,10 ಸಿಕ್ಸರ್​ಗಳ ಸಹಿತ ಶತಕ ಸಿಡಿಸಿದರೆ, ನಿಕೋಲಸ್ ಪೂರನ್​ 43 ಎಸೆತಗಳಲ್ಲಿ 4 ಬೌಂಡರಿ ಮತ್ತು 5 ಸಿಕ್ಸರ್​ಗಳ ಸಹಿತ 70 ರನ್​ಗಳಿಸಿ ಬೃಹತ್​ ಮೊತ್ತಕ್ಕೆ ಕಾರಣರಾದರು.

ಇದನ್ನೂ ಓದಿ: ಅಂಡರ್ 19 ವಿಶ್ವಕಪ್: ದ.ಆಫ್ರಿಕಾ ಮಣಿಸಿ ಸೆಮಿಫೈನಲ್ ಪ್ರವೇಶಿಸಿದ ಇಂಗ್ಲೆಂಡ್​ U19

225 ರನ್​ಗಳ ಬೃಹತ್ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 204ರನ್​ಗಳಿಸಿ 20 ರನ್​ಗಳ ಸೋಲು ಕಂಡಿತು. ಟಾಮ್ ಬಾಂಟಮ್​ 39 ಎಸೆತಗಳಲ್ಲಿ 3 ಬೌಂಡರಿ ಮತ್ತು 6 ಸಿಕ್ಸ್​ಗಳ ಸಹಿತ 73, ಫಿಲಿಪ್ ಸಾಲ್ಟ್ 24 ಎಸೆತಗಳಲ್ಲಿ 3 ಬೌಂಡರಿ ಮತ್ತು 5 ಸಿಕ್ಸರ್​ಗಳ ಸಹಿತ 57 ರನ್​ಗಳಿಸಿ ಕೊನೆಯವರೆಗೂ ಗೆಲುವಿಗಾಗಿ ಶತಪ್ರಯತ್ನ ಪಟ್ಟು ವಿಫಲರಾದರು.

ವೆಸ್ಟ್ ಇಂಡೀಸ್ ಪರ ರೊಮಾರಿಯಾ ಶೆಫರ್ಡ್​ 59 ರನ್​ ನೀಡಿ 3 ವಿಕೆಟ್ ಪಡೆದರೆ, ಕೀರನ್ ಪೊಲಾರ್ಡ್​ 31ಕ್ಕೆ 2, ಕಾಟ್ರೆಲ್ 28ಕ್ಕೆ 1, ಹೋಲ್ಡರ್​ 41ಕ್ಕೆ1 ಮತ್ತು ಹೊಸೈನ್ 36ಕ್ಕೆ 1 ವಿಕೆಟ್ ಪಡೆದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.