ಢಾಕಾ(ಬಾಂಗ್ಲಾದೇಶ): ಮೀರ್‌ಪುರದ ಶೇರ್ ಎ ಬಾಂಗ್ಲಾ ಸ್ಟೇಡಿಯಂನಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಬೆರಳಿಗೆ ಗಂಭೀರ ಗಾಯ ಮಾಡಿಕೊಂಡಿದ್ದು, ಮೈದಾನ ತೊರೆದು ಸ್ಕ್ಯಾನಿಂಗ್ಗೆ ಒಳಗಾಗಿದ್ದಾರೆ.
ಕ್ಯಾಚ್ ಹಿಡಿಯುವ ವೇಳೆ ತಪ್ಪಿ ಚೆಂಡು ಹೆಬ್ಬೆರಳಿಗೆ ಬಲವಾಗಿ ಬಡಿದಿದ್ದು, ರಕ್ತ ಚಿಮ್ಮಿದೆ. ತೀವ್ರ ನೋವಿನಿಂದ ಒದ್ದಾಡಿದ ರೋಹಿತ್ ವೈದ್ಯಕೀಯ ತಪಾಸಣೆಗೆ ಒಳಗಾದರು. ಬಳಿಕ ವೈದ್ಯರ ಸಲಹೆಯ ಮೇಲೆ ಮೈದಾನದಿಂದ ಹೊರ ನಡೆದರು.
-
Update: India Captain Rohit Sharma suffered a blow to his thumb while fielding in the 2nd ODI. The BCCI Medical Team assessed him. He has now gone for scans. pic.twitter.com/LHysrbDiKw
— BCCI (@BCCI) December 7, 2022 " class="align-text-top noRightClick twitterSection" data="
">Update: India Captain Rohit Sharma suffered a blow to his thumb while fielding in the 2nd ODI. The BCCI Medical Team assessed him. He has now gone for scans. pic.twitter.com/LHysrbDiKw
— BCCI (@BCCI) December 7, 2022Update: India Captain Rohit Sharma suffered a blow to his thumb while fielding in the 2nd ODI. The BCCI Medical Team assessed him. He has now gone for scans. pic.twitter.com/LHysrbDiKw
— BCCI (@BCCI) December 7, 2022
ಈ ಬಗ್ಗೆ ಟ್ವೀಟ್ ಮಾಡಿರುವ ಬಿಸಿಸಿಐ, ಮೊಹಮದ್ ಸಿರಾಜ್ ಎಸೆದ ಇನಿಂಗ್ಸ್ನ ಎರಡನೇ ಓವರ್‌ನ 4ನೇ ಎಸೆತದಲ್ಲಿ ಆರಂಭಿಕ ಅನಾಮುಲ್ ಹಕ್ ಬಿಜೋಯ್ ಬ್ಯಾಟ್ ಅಂಚಿಗೆ ತಾಕಿದ ಚೆಂಡನ್ನು ಸ್ಲಿಪ್ನಲ್ಲಿದ್ದ ರೋಹಿತ್ ಹಿಡಿಯುವ ಯತ್ನಿಸಿದ್ದಾರೆ. ಈ ವೇಳೆ ಚೆಂಡು ರೋಹಿತ್ ಹೆಬ್ಬೆರಳಿಗೆ ಬಲವಾಗಿ ಬಡಿಯಿತು. ಚರ್ಮ ಕಟ್ ಆಗಿ ರಕ್ತ ಸುರಿಯಲಾರಂಭಿಸಿತು.
ನೋವಿನಿಂದ ಒದ್ದಾಡುತ್ತಿದ್ದ ರೋಹಿತ್ಗೆ ತಂಡದ ವೈದ್ಯರು ಚಿಕಿತ್ಸೆ ನೀಡಿದರು. ಬಳಿಕ ಗಾಯ ಉಲ್ಬಣಗೊಳ್ಳದಿರಲು ಹೆಚ್ಚಿನ ತಪಾಸಣೆಗಾಗಿ ಸ್ಕ್ಯಾನಿಂಗ್ ಮಾಡಲು ಸಲಹೆ ನೀಡಿದ್ದಾರೆ. ಇದರಿಂದ ನಾಯಕ ಮೈದಾನ ತೊರೆದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದರಿಂದ ಉಪನಾಯಕ ಕೆಎಲ್ ರಾಹುಲ್ ಪಂದ್ಯದ ನೇತೃತ್ವ ವಹಿಸಿಕೊಂಡಿದ್ದು, ರಜತ್ ಪಾಟಿದಾರ್ ಬದಲಿ ಫೀಲ್ಡಿಂಗ್ಗೆ ಇಳಿದಿದ್ದಾರೆ. ಸರಣಿಯ ಮೊದಲ ಏಕದಿನವನ್ನು 1 ವಿಕೆಟ್‌ನಿಂದ ಹೀನಾಯವಾಗಿ ಸೋತ ಭಾರತ ಮೂರು ಪಂದ್ಯಗಳ ಸರಣಿಯಲ್ಲಿ ಜೀವಂತವಾಗಿರಿಸಿಕೊಳ್ಳಲು ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ಓದಿ: ಟಾಸ್ ಗೆದ್ದ ಬಾಂಗ್ಲಾ ಬ್ಯಾಟಿಂಗ್ ಆಯ್ಕೆ: ಗೆಲ್ಲುವ ಒತ್ತಡದಲ್ಲಿ ಭಾರತ