ETV Bharat / sports

280ರ ಗುರಿಯ ನಿರೀಕ್ಷೆಯಲ್ಲಿದ್ದೆವು, ಬೌಲರ್​ಗಳು 190ಕ್ಕೆ ಕಟ್ಟಿಹಾಕಿದರು: ರೋಹಿತ್​ ಶರ್ಮಾ - ETV Bharath Karnataka

ಪಾಕಿಸ್ತಾನದ ವಿರುದ್ಧದ ಗೆಲುವಿನ ನಂತರ ರೋಹಿತ್​ ಶರ್ಮಾ ಭಾರತದ ಬೌಲಿಂಗ್ ದಾಳಿಯನ್ನು ಪ್ರಶಂಸಿದರು.

Rohit Sharma
Rohit Sharma
author img

By ETV Bharat Karnataka Team

Published : Oct 14, 2023, 11:08 PM IST

ಅಹಮದಾಬಾದ್ (ಗುಜರಾತ್): ಶನಿವಾರ ಇಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿದ ನಂತರ ಟೀಮ್​ ಇಂಡಿಯಾದ ನಾಯಕ ರೋಹಿತ್ ಶರ್ಮಾ ತಂಡದ ಅಸಾಧಾರಣ ಪ್ರದರ್ಶನಕ್ಕೆ ಬೌಲರ್‌ಗಳನ್ನು ಶ್ಲಾಘಿಸಿದ್ದಾರೆ. ಬೌಲಿಂಗ್​ ಸ್ನೇಹಿ ಅಲ್ಲದ ಪಿಚ್‌ನಲ್ಲಿ ಭಾರತೀಯ ಬೌಲರ್‌ಗಳು ಪಾಕಿಸ್ತಾನವನ್ನು 191 ರನ್‌ಗಳಿಗೆ ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದರು. ನಂತರ ಭಾರತ ರೋಹಿತ್ ಶರ್ಮಾ ಅವರ ಅಬ್ಬರದ 86 ರನ್‌ಗಳ ನೆರವಿನಿಂದ ಪಾಕಿಸ್ತಾನದ ವಿರುದ್ಧ ಏಳು ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು.

ಐವರು ಭಾರತೀಯ ಬೌಲರ್‌ಗಳು ತಲಾ ಎರಡು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಭಾರತ 42.5 ಓವರ್‌ಗಳಲ್ಲಿ ಪಾಕಿಸ್ತಾನವನ್ನು ಆಲೌಟ್ ಮಾಡಿತು. ಪಾಕ್​ ಕೊಟ್ಟ ಗುರಿಯನ್ನು ಭಾರತ 31 ನೇ ಓವರ್‌ನಲ್ಲೇ ಪೂರೈಸಿ ಉತ್ತಮ ರನ್​ರೇಟ್​ ಸಾಧಿಸಿತು. ಇದು ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಸತತ ಎಂಟನೇ ಗೆಲುವಾಗಿದೆ.

ಪಂದ್ಯದ ನಂತರ ಮಾತನಾಡಿದ ಭಾರತದ ನಾಯಕ ರೋಹಿತ್​ ಶರ್ಮಾ,"ಬೌಲರ್‌ಗಳು ನಮಗೆ ಆಟವನ್ನು ಸುಲಭಮಾಡಿಕೊಟ್ಟರು. ಈ ಪಿಚ್​ನಲ್ಲಿ 190 ರನ್​ ನಾವು ನಿರೀಕ್ಷಿಸಿರಲಿಲ್ಲ. ಒಂದು ಹಂತದಲ್ಲಿ ನಾವು 280 ಲೆಕ್ಕಾಚಾರದಲ್ಲಿದ್ದೆವು. ತಂಡದಲ್ಲಿ ಉತ್ತಮ 6 ಬೌಲರ್​ಗಳಿದ್ದಾರೆ. ನಾಯಕನಾಗಿ ನಾನು ಅವರನ್ನು ಆಯ್ಕೆ ಮಾಡಿಕೊಳ್ಳ ಬೇಕಷ್ಟೇ. ಪ್ರತಿಯೊಬ್ಬರು ತಂಡಕ್ಕೆ ತಮ್ಮ ಶೇಕಡಾ 100 ರಷ್ಟನ್ನು ಕೊಡುತ್ತಾರೆ. ಪರಿಸ್ಥಿತಿಗೆ ಅನುಗುಣವಾಗಿ ಆಡಿಸುವುದು ಮುಖ್ಯ ಅಷ್ಟೇ" ಎಂದಿದ್ದಾರೆ.

ಬೌಲಿಂಗ್​ ಯುನಿಟ್​ ಹೊಗಳಿದ ರೋಹಿತ್​ ಶರ್ಮಾ ಬ್ಯಾಟಿಂಗ್ ವಿಭಾಗಕ್ಕೂ ಮೆಚ್ಚುಗೆ ತಿಳಿಸಿದರು. "ವಿಶ್ವಕಪ್​ಗೂ ಮುನ್ನವೇ ಬ್ಯಾಟರ್​​ಗಳಿಂದ ಉತ್ತಮ ಪ್ರದರ್ಶನ ಬರುತ್ತಿತ್ತು. ಇದರಿಂದ ಅವರಿಗೆ ನಾವು ಜವಾಬ್ದಾರಿಯನ್ನು ಹಂಚ ಬೇಕಿತ್ತಷ್ಟೇ. ಪ್ರತಿಯೊಬ್ಬರಿಗೂ ಅವರ ಸ್ಥಾನದಲ್ಲಿ ಹೇಗೆ ಕಾರ್ಯನಿರ್ವಹಿಸ ಬೇಕು ಎಂಬ ಸ್ಪಷ್ಟತೆ ಇದೆ. ಇದರಿಂದ ಆಟಗಾರರಿಗೆ ಗೊಂದಲ ಇರುವುದಿಲ್ಲ" ಎಂದರು.

ಮುಂದಿನ ಪಂದ್ಯಗಳ ಬಗ್ಗೆ ವಿಶ್ವಾಸಯುತವಾಗಿ ಮಾತನಾಡಿ ರೋಹಿತ್​,"ಒಟ್ಟಾರೆಯಾಗಿ ಮೂರು ಪಂದ್ಯಗಳಿಂದ ತಂಡ ಉತ್ತಮವಾಗಿ ಕಾಣುತ್ತಿದೆ. ಇದೇ ಸಮತೋಲಿತ ಮನಸ್ಸಿನಿಂದ ಮುಂದುವರೆಯಲು ಬಯಸುತ್ತೇವೆ. ನಾವು ಮುಂದೆಯೂ ಉತ್ತಮ ತಂಡಗಳೊಂದಿಗೆ ಪೈಪೋಟಿ ನಡೆಸ ಬೇಕಿದೆ. ಹಿಂದಿನ ಲೆಕ್ಕಾಚಾರಕ್ಕಿಂತ ಅಂದಿನ ಆಟ ಮುಖ್ಯವಾಗುತ್ತದೆ. ಹೀಗಾಗಿ ಮುಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನಕ್ಕೆ ಎದುರು ನೋಡುತ್ತಿದ್ದೇನೆ" ಎಂದು ಹೇಳಿದ್ದಾರೆ.

ಪಾಕಿಸ್ತಾನ ನಾಯಕ ಬಾಬರ್​ ಅಜಮ್​ ಮಾತನಾಡಿ," ನಾವು ಉತ್ತಮ ಆರಂಭವನ್ನುಪಡೆದಿದ್ದೆವು. ನಾನು ಮತ್ತು ಇಮಾಮ್ ನಡುವೆ ಉತ್ತಮ ಪಾಲುದಾರಿಕೆ ಮಾಡಿದೆವು. ನಾವು ಸಾಮಾನ್ಯ ಕ್ರಿಕೆಟ್ ಆಡಲು ಬಯಸಿದ್ದೇವೆ. ಇದ್ದಕ್ಕಿದ್ದಂತೆ ನಾವು ಕುಸಿತವನ್ನು ಹೊಂದಿದೆವು. ನಾವು ಪ್ರಾರಂಭಿಸಿದ ರೀತಿಯಲ್ಲಿ, 280-290 ಅನ್ನು ಗುರಿಯನ್ನು ನೀಡುವ ಲೆಕ್ಕಾಚಾರದಲ್ಲಿದ್ದೆವು. ರೋಹಿತ್ ಅತ್ಯುತ್ತಮ ಇನ್ನಿಂಗ್ಸ್ ಆಡಿದರು" ಎಂದಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನ ಮಣಿಸಿ ಹ್ಯಾಟ್ರಿಕ್​ ಜಯ ದಾಖಲಿಸಿದ ಭಾರತ.. ಪಾಕ್​ ವಿರುದ್ಧ ವಿಶ್ವಕಪ್​ನ 8ನೇ ಗೆಲುವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.