ನವದೆಹಲಿ: ಅಫ್ಘಾನಿಸ್ತಾನ ವಿರುದ್ಧ ಗುರುವಾರ ನಡೆದ ಮೊದಲ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಹೊಸ ದಾಖಲೆ ಬರೆದಿದ್ದಾರೆ. ಸುಮಾರು 14 ತಿಂಗಳ ನಂತರ ಚುಟುಕು ಕ್ರಿಕೆಟ್ ಟೂರ್ನಿಗೆ ಮರಳಿರುವ ಹಿಟ್ಮ್ಯಾನ್ ಈ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಆಟಗಾರರಾಗಿ 100ನೇ ಟಿ20 ಪಂದ್ಯಗಳನ್ನು ಗೆದ್ದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ರೋಹಿತ್ ಪಾತ್ರರಾಗಿದ್ದಾರೆ.
-
Rohit Sharma has 40 wins from just 52 games in T20I as a captain 🇮🇳
— Johns. (@CricCrazyJohns) January 12, 2024 " class="align-text-top noRightClick twitterSection" data="
- One of the most successful captains in T20I history. pic.twitter.com/Tpas68JN4M
">Rohit Sharma has 40 wins from just 52 games in T20I as a captain 🇮🇳
— Johns. (@CricCrazyJohns) January 12, 2024
- One of the most successful captains in T20I history. pic.twitter.com/Tpas68JN4MRohit Sharma has 40 wins from just 52 games in T20I as a captain 🇮🇳
— Johns. (@CricCrazyJohns) January 12, 2024
- One of the most successful captains in T20I history. pic.twitter.com/Tpas68JN4M
ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಮೊಹಲಿಯಲ್ಲಿ ಜರುಗಿತ್ತು. ಈ ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್ಗಳ ಜಯ ದಾಖಲಿಸಿ ಸರಣಿಯಲ್ಲಿ ಶುಭಾರಂಭ ಮಾಡಿದೆ. ಆದರೆ, 14 ತಿಂಗಳ ನಂತರ ಟಿ-20 ಮಾದರಿ ಕ್ರಿಕೆಟ್ಗೆ ಮರಳಿರುವ ಸ್ಟಾರ್ ಆಟಗಾರ ರೋಹಿತ್ ಶೂನ್ಯಕ್ಕೆ ರನೌಟ್ ಆಗಿ ಪೆವಿಲಿಯನ್‌ಗೆ ಸೇರಿಸಿದ್ದರು. ಈ ಮೂಲಕ ರೋಹಿತ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಒಟ್ಟು 6 ಬಾರಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು.
-
1st player to be part of:
— Mufaddal Vohra (@mufaddal_vohra) January 11, 2024 " class="align-text-top noRightClick twitterSection" data="
100 ODI wins - Sir Viv Richards.
100 Test wins - Ricky Ponting.
100 T20i wins - Rohit Sharma*.
- Hitman joins the list of the greats...!!! pic.twitter.com/9LWiCupsbq
">1st player to be part of:
— Mufaddal Vohra (@mufaddal_vohra) January 11, 2024
100 ODI wins - Sir Viv Richards.
100 Test wins - Ricky Ponting.
100 T20i wins - Rohit Sharma*.
- Hitman joins the list of the greats...!!! pic.twitter.com/9LWiCupsbq1st player to be part of:
— Mufaddal Vohra (@mufaddal_vohra) January 11, 2024
100 ODI wins - Sir Viv Richards.
100 Test wins - Ricky Ponting.
100 T20i wins - Rohit Sharma*.
- Hitman joins the list of the greats...!!! pic.twitter.com/9LWiCupsbq
ರೋಹಿತ್ ಹೆಸರಲ್ಲಿ ವಿಶ್ವ ದಾಖಲೆ: ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಶೂನ್ಯಕ್ಕೆ ಔಟಾದರೂ ತಮ್ಮ ಹೆಸರಿನಲ್ಲಿ ದೊಡ್ಡ ದಾಖಲೆ ಮಾಡಿದ್ದಾರೆ. ರೋಹಿತ್ ಈಗ 100ನೇ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಪಂದ್ಯಗಳನ್ನು ಗೆದ್ದ ಆಟಗಾರರಾಗಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೇ, ನಾಯಕರಾಗಿ 52 ಟಿ-20 ಕ್ರಿಕೆಟ್‌ನಲ್ಲಿ ಪಂದ್ಯಗಳನ್ನು ಮುನ್ನಡೆಸಿರುವ ಅವರಿಗೆ ಇದು 40ನೇ ಜಯವೂ ಆಗಿದೆ.
ಇದನ್ನೂ ಓದಿ: ಟಿ20 ಸರಣಿ: ಶಿವಂ ದುಬೆ ಅರ್ಧಶತಕ, ಆಫ್ಘನ್ ವಿರುದ್ಧ ಭಾರತದ ಶುಭಾರಂಭ
ಮೊಹಾಲಿಯ ಐಎಸ್ ಬಿಂದ್ರಾ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಅಫ್ಘಾನಿಸ್ತಾನ ತಂಡ ನಿಗದಿತ 20 ಓವರ್ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 158 ರನ್ಗಳನ್ನು ಬಾರಿಸಿತ್ತು. ಈ ಗುರಿ ಬೆನ್ನಟ್ಟಿದ ಭಾರತ ತಂಡ 17.3 ಓವರ್ಗಳಲ್ಲಿ ನಾಲ್ಕು ವಿಕೆಟ್ಗಳ ಕಳೆದುಕೊಂಡು 159 ರನ್ಗಳೊಂದಿಗೆ ಗೆಲುವಿನ ನಗೆ ಬೀರಿತ್ತು. ನಾಯಕ ರೋಹಿತ್ ಶರ್ಮಾ ಮೊದಲ ಓವರ್‌ನಲ್ಲೇ ರನೌಟ್ಗೆ ಸಿಲುಕಿಗೆ ಪೆವಿಲಿಯನ್ ಸೇರಿದ್ದರು.
-
For his unbeaten 60*(40) in the chase, Shivam Dube is adjudged the Player of the Match 👏👏#TeamIndia win the 1st T20I by 6 wickets 👌👌
— BCCI (@BCCI) January 11, 2024 " class="align-text-top noRightClick twitterSection" data="
Scorecard ▶️ https://t.co/BkCq71Zm6G#INDvAFG | @IDFCFIRSTBank | @IamShivamDube pic.twitter.com/mdQYdP8NsQ
">For his unbeaten 60*(40) in the chase, Shivam Dube is adjudged the Player of the Match 👏👏#TeamIndia win the 1st T20I by 6 wickets 👌👌
— BCCI (@BCCI) January 11, 2024
Scorecard ▶️ https://t.co/BkCq71Zm6G#INDvAFG | @IDFCFIRSTBank | @IamShivamDube pic.twitter.com/mdQYdP8NsQFor his unbeaten 60*(40) in the chase, Shivam Dube is adjudged the Player of the Match 👏👏#TeamIndia win the 1st T20I by 6 wickets 👌👌
— BCCI (@BCCI) January 11, 2024
Scorecard ▶️ https://t.co/BkCq71Zm6G#INDvAFG | @IDFCFIRSTBank | @IamShivamDube pic.twitter.com/mdQYdP8NsQ
ಶಿವಂ ದುಬೆ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿ ಅಜೇಯ ಅರ್ಧಶತಕ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 40 ಎಸತೆಗಳನ್ನು ಎದುರಿಸಿದ ಶಿವಂ ದುಬೆ ಐದು ಬೌಂಡರಿಗಳು ಮತ್ತು ಎರಡು ಸಿಕ್ಸರ್ ಸಮೇತ 60 ರನ್ಗಳನ್ನು ಸಿಡಿಸಿದ್ದರು. ಇದರಿಂದ ರೋಹಿತ್ ಶರ್ಮಾ ಪಡೆ ಮೂರು ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.
ಇದನ್ನೂ ಓದಿ: ಅಫ್ಘಾನಿಸ್ತಾನ ವಿರುದ್ಧ ಮೊದಲ ಟಿ20: ಆಟಗಾರರನ್ನು ಕಾಡಿದ ವಿಪರೀತ ಚಳಿ