ETV Bharat / sports

IPL ಸಂಭಾವನೆಯಲ್ಲಿ ರೋಹಿತ್ ಶರ್ಮಾಗೆ ಅಗ್ರ ಪಟ್ಟ: ಧೋನಿ ಹಿಂದಿಕ್ಕಿ ₹178 ಕೋಟಿ ಗಳಿಕೆ! - ಸುರೇಶ್ ರೈನಾ ನಾಲ್ಕನೇ ಸ್ಥಾನ

ಕ್ರಿಕೆಟಿಗ ರೋಹಿತ್ ಶರ್ಮಾ ಅವರು ಐಪಿಎಲ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಶ್ರೀಮಂತ ಆಟಗಾರ ಎಂದು ಹೆಸರು ಗಳಿಸಿದ್ದಾರೆ.

Rohit Sharma
ರೋಹಿತ್ ಶರ್ಮಾ
author img

By

Published : Dec 30, 2022, 6:55 PM IST

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 2023ರ ಆರಂಭಕ್ಕೂ ಮುನ್ನವೇ ಮುಂಬೈ ಇಂಡಿಯನ್ಸ್ ಹಾಗೂ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೊಸ ದಾಖಲೆಯ ಮೂಲಕ ಸುದ್ದಿಯಲ್ಲಿದ್ದಾರೆ. ಹಿಟ್‌ಮ್ಯಾನ್‌ ಶರ್ಮಾ ಐಪಿಎಲ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಶ್ರೀಮಂತ ಆಟಗಾರ ಎಂಬ ಹೆಗ್ಗಳಿಗೆ ಪಡೆದಿದ್ದು, ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಹಿಂದಿಕ್ಕಿದ್ದಾರೆ.

ರೋಹಿತ್ ಶರ್ಮಾ ಅವರು 16 ವರ್ಷಗಳಲ್ಲಿ ಐಪಿಎಲ್‌ನಿಂದ 178.6 ಕೋಟಿ ರೂ ಗಳಿಕೆ ಮಾಡಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಅವರು 16 ವರ್ಷಗಳಲ್ಲಿ ಐಪಿಎಲ್ ಮೂಲಕ 176.84 ಕೋಟಿ ರೂ.ಪಡೆದಿದ್ದಾರೆ. ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ಬ್ಯಾಟರ್ ಸುರೇಶ್ ರೈನಾ ಅವರ ಹೆಸರುಗಳೂ ಹೆಚ್ಚು ಗಳಿಕೆ ಮಾಡಿರುವ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ನಿರಂತರ ಆಡುತ್ತಿರುವ ಕೊಹ್ಲಿ ಇದುವರೆಗೂ 173.2 ಕೋಟಿ ರೂ.ಗಳಿಸಿ ಮೂರನೇ ಸ್ಥಾನದಲ್ಲಿದ್ದರೆ, 14 ವರ್ಷಗಳಲ್ಲಿ ಲೀಗ್‌ನಿಂದ 110.7 ಕೋಟಿ ಬಾಚಿಕೊಂಡಿರುವ ಸುರೇಶ್ ರೈನಾ 4ನೇ ಸ್ಥಾನ ಪಡೆದಿದ್ದಾರೆ. 2011 ರಿಂದ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್​ ತಂಡದಲ್ಲಿ ಪ್ರಮುಖ ಆಟಗಾರನಾಗಿ ಆಡುತ್ತಿದ್ದಾರೆ. ಈ ಹಿಂದೆ ಡೆಕ್ಕನ್ ಚಾರ್ಜರ್ಸ್ ತಂಡದ ಭಾಗವಾಗಿದ್ದರು.

ಮುಂಬೈ ಇಂಡಿಯನ್ಸ್‌ನಿಂದ ಬಂಪರ್ ಆಫರ್: ಇಂಡಿಯನ್ ಪ್ರೀಮಿಯರ್ ಲೀಗ್‌ನ ಮೊದಲ ಆವೃತ್ತಿ 2008ರಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡವು ರೋಹಿತ್ ಶರ್ಮಾ ಅವರನ್ನು 3 ಕೋಟಿ ರೂ.ಗೆ ಖರೀದಿಸಿತ್ತು. ಇದಾದ ನಂತರ ಮುಂದಿನ ಎರಡು ಆವೃತ್ತಿಗಳಿಗೆ ರೋಹಿತ್ ಶರ್ಮಾ ತಲಾ 3 ಕೋಟಿ ರೂ ಸಂಭಾವನೆ ಪಡೆದಿದ್ದರು.

ರೋಹಿತ್ ಬ್ಯಾಟಿಂಗ್ ಬಲ ಅರಿತು 2011ರಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ರೋಹಿತ್ ಶರ್ಮಾರನ್ನು ಸೆಳೆಯಲು ಸಿದ್ಧತೆ ನಡೆಸಿತ್ತು. ಇದಕ್ಕಾಗಿ 9.2 ಕೋಟಿ ರೂಪಾಯಿಗಳ ಬೃಹತ್ ಮೊತ್ತ ವ್ಯಯಿಸಿದೆ. ಅಷ್ಟೇ ಅಲ್ಲ, ಇದೇ ಫ್ರಾಂಚೈಸಿ 2014ರಲ್ಲಿ 12.5 ಕೋಟಿ ರೂಪಾಯಿ ನೀಡಿ ತಂಡದಲ್ಲೇ ಉಳಿಸಿಕೊಂಡಿತ್ತು. 2018 ರಲ್ಲಿ ಶರ್ಮಾರನ್ನು 15 ಕೋಟಿ ರೂ.ಗೆ ಉಳಿಸಿಕೊಂಡು, ಈಗ 2022ರ ಐಪಿಎಲ್ ಹರಾಜಿನಲ್ಲಿಯೂ ತಂಡದ ನಾಯಕತ್ವದಲ್ಲಿಯೇ ಉಳಿಸಿಕೊಂಡು, 16 ಕೋಟಿ ರೂಪಾಯಿಗೆ ಖರೀದಿಸಿದೆ.

ಇದನ್ನೂಓದಿ: FIDE ವಿಶ್ವ ರ‍್ಯಾಪಿಡ್ ಚೆಸ್‌: ಕಂಚಿನ ಪದಕ ಗೆದ್ದ ಭಾರತದ ಸವಿತಾಶ್ರೀ ಬಾಸ್ಕರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.