ನವದೆಹಲಿ: ಭಾರತದ ಬ್ಯಾಟಿಂಗ್ ದಂತಕತೆ ಸಚಿನ್ ತೆಂಡೂಲ್ಕರ್ ಮುಂದಿನ ದಿನಗಳಲ್ಲಿ ಭಾರತ ತಂಡ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ವಿಶ್ವಕಪ್ ಎತ್ತಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಅವರಿಬ್ಬರು ತಂಡದಿಂದ ಅತ್ಯುತ್ತಮವಾದದ್ದನ್ನು ಹೊರತೆಗೆಯುವ ಕೆಲಸವನ್ನು ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಟಿ20 ವಿಶ್ವಕಪ್ ಮುಗಿಯುತ್ತಿದ್ದಂತೆ ಬಿಸಿಸಿಐ ಸಂಪೂರ್ಣ ಟೀಮ್ ಮ್ಯಾನೇಜ್ಮೆಂಟ್ ಬದಲಾಯಿಸಿದೆ. ಮುಖ್ಯ ಕೋಚ್ ಆಗಿದ್ದ ರವಿಶಾಸ್ತ್ರಿ ಜಾಗಕ್ಕೆ ರಾಹುಲ್ ದ್ರಾವಿಡ್ ಅವರನ್ನು, ಸೀಮಿತ ಓವರ್ಗಳ ತಂಡಕ್ಕೆ ವಿರಾಟ್ ಕೊಹ್ಲಿ ಬದಲು ರೋಹಿತ್ ಶರ್ಮಾರನ್ನು ನಾಯಕನನ್ನಾಗಿ ನೇಮಿಸಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ರೋಹಿತ್ ಮತ್ತು ರಾಹುಲ್ ಅದ್ಭುತವಾದ ಜೋಡಿ. ನನಗೆ ಆ ಇಬ್ಬರು ಹುಡುಗರು ತಂಡಕ್ಕೆ ಅತ್ಯುತ್ತಮವಾದ ಕೆಲಸ ಮಾಡುತ್ತಾರೆ ಮತ್ತು ಅವರ ಸಾಮರ್ಥ್ಯಕ್ಕೆ ತಕ್ಕಂತೆ ತಯಾರಿ ಮಾಡುತ್ತಾರೆ. ಅವರ ಬೆಂಬಲಕ್ಕೆ ತುಂಬಾ ಜನ ಇದ್ದಾರೆ. ಖಂಡಿತ ಮುಂದಿನ ದಿನಗಳಲ್ಲಿ ಭಾರತ ತಂಡ ಟ್ರೋಫಿಗಳನ್ನು ಗೆಲ್ಲಲಿದೆ" ಎಂದು ಸಚಿನ್ ಬ್ಯಾಕ್ಸ್ಟೇಜ್ ವಿತ್ ಬೋರಿಯಾ ಕಾರ್ಯಕ್ರಮದಲ್ಲಿ ಹೇಳದ್ದಾರೆ.
ಮತ್ತೆ ಭಾರತ ಟ್ರೋಪಿ ಎತ್ತಿಹಿಡಿಯುವುದನ್ನು ನೋಡಲು ಇಷ್ಟಪಡುತ್ತೇನೆ:
ಏಪ್ರಿಲ್ ತಿಂಗಳಿಗೆ ನಾವು 2011ರ ವಿಶ್ವಕಪ್ ಗೆದ್ದು 11 ವರ್ಷ ತುಂಬಲಿದೆ. ಅದು ತುಂಬಾ ದೀರ್ಘ ಕಾಯುವಿಕೆಯಾಗಲಿದೆ. ನನ್ನನ್ನು ಸೇರಿದಂತೆ ಪ್ರತಿಯೊಬ್ಬರು ಬಿಸಿಸಿಐ ಕ್ಯಾಬಿನೆಟ್ನಲ್ಲಿ ಟ್ರೋಫಿ ನೋಡುವುದಕ್ಕೆ ಇಷ್ಟಪಡುತ್ತೇವೆ. ಎಲ್ಲಾ ಕ್ರಿಕೆಟಿಗರು ಈ ಟ್ರೋಫಿಗಾಗಿಯೇ ಆಡಲಿದ್ದಾರೆ. ಚುಟುಕು ಕ್ರಿಕೆಟ್ ಆಗಿರಬಹುದು ಅಥವಾ ದೀರ್ಘ ಮಾದರಿಯಾಗಿರಬಹುದು, ಆ ಟ್ರೋಫಿಗಿಂತ ದೊಡ್ಡದಾದದ್ದು ಬೇರೇನಿಲ್ಲ. ವಿಶ್ವಕಪ್ ಅಂದರೆ ಏನೋ ಒಂಥರಾ ವಿಶೇಷ ಭಾವನೆ ಎಂದು ತೆಂಡೂಲ್ಕರ್ ಹೇಳಿದ್ದಾರೆ.
ಇದನ್ನೂ ಓದಿ: ಕಮ್ಬ್ಯಾಕ್ ಸುಲಭವಲ್ಲ, ಭವಿಷ್ಯದ ದೃಷ್ಟಿಯಿಂದ ಮ್ಯಾನೇಜ್ಮೆಂಟ್ ಕುಲ್ದೀಪ್ ಬೆಂಬಲಕ್ಕೆ ನಿಲ್ಬೇಕು : ಹರ್ಭಜನ್