ETV Bharat / sports

ಟಿ-20 ಪಂದ್ಯ: ಜಿಂಬಾಬ್ವೆ ವಿರುದ್ಧ ತಿಣುಕಾಡಿ ಗೆದ್ದ ಪಾಕಿಸ್ತಾನ

author img

By

Published : Apr 21, 2021, 8:40 PM IST

150 ರನ್​ಗಳ ಗುರಿ ಬೆನ್ನತ್ತಿದ ಜಿಂಬಾಬ್ವೆ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 138 ರನ್​ಗಳಿಸಿತು. ಕ್ರೈಗ್ ಇರ್ವಿನ್ 34, ಲ್ಯೂಕ್ ಜಾಂಗ್ವೆ 30 ಮತ್ತು ತಿನಾಶೆ ಕಮುನ್ಹುಕಂವೆ 29 ರನ್​ಗಳಿಸಿ ಗೆಲುವಿಗಾಗಿ ನಡೆಸಿದ ಹೋರಾಟ ವಿಫಲವಾಯಿತು.

ಜಿಂಬಾಬ್ವೆ ವಿರುದ್ಧ  ಪಾಕಿಸ್ತಾನಕ್ಕೆ ಜಯ
ಜಿಂಬಾಬ್ವೆ ವಿರುದ್ಧ ಪಾಕಿಸ್ತಾನಕ್ಕೆ ಜಯ

ಹರಾರೆ: ಅತಿಥೇಯ ಜಿಂಬಾಬ್ವೆ ವಿರುದ್ಧ ಪಾಕಿಸ್ತಾನ ಮೊದಲ ಟಿ-20 ಪಂದ್ಯದಲ್ಲಿ 11 ರನ್​ಗಳ ರೋಚಕ ಜಯ ಸಾಧಿಸಿ 3 ಪಂದ್ಯಗಳ ಸರಣಿಯಲ್ಲಿ 1-0ಯಲ್ಲಿ ಮುನ್ನಡೆ ಸಾಧಿಸಿದೆ.

ಟಾಸ್​​ ಗೆದ್ದ ಜಿಂಬಾಬ್ವೆ ಬಲಿಷ್ಠ ಪಾಕಿಸ್ತಾನವನ್ನು 149 ರನ್​ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಯಿತು. ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್​ ಅರ್ಧಶತಕ ಗಳಿಸಿದ್ದು ಬಿಟ್ಟರೆ, ಉಳಿದ ಯಾವ ಬ್ಯಾಟ್ಸ್​ಮನ್​ 20ರ ಗಟಿ ದಾಟಲಿಲ್ಲ. ನಾಯಕ ಬಾಬರ್ ಅಜಮ್ 8 ರನ್​, ಫಖರ್ ಝಮಾನ್ 13, ಹಫೀಜ್​ 5, ದಾನೀಶ್ ಅಜೀಜ್ 15, ಹೈದರ್ ಅಲಿ 5 ಫಹೀಮ್ ಆಶ್ರಫ್ 1 ನವಾಜ್ 9 ರನ್​ಗಳಿಗೆ ವಿಕೆಟ್​ ಒಪ್ಪಿಸಿದರು.

16 ಓವರ್​ಗಳಲ್ಲಿ 100ಕ್ಕೆ 6 ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿ ಪಾಕಿಸ್ತಾನಕ್ಕೆ ಆಸರೆಯಾದ ರಿಜ್ವಾನ್ 61 ಎಸೆತಗಳಲ್ಲಿ 10 ಬೌಂಡರಿ ಮತ್ತು 1 ಸಿಕ್ಸರ್​ ನೆರವಿನಿಂದ ಅಜೇಯ 82 ರನ್​ಗಳಿಸಿ 150 ರನ್​ಗಳ ಟಾರ್ಗೆಟ್ ನೀಡಲು ನೆರವಾದರು.

ಆಕರ್ಷಕ ಬೌಲಿಂಗ್ ಪ್ರದರ್ಶನ ತೋರಿದ ಜಿಂಬಾಬ್ವೆಯ ಲ್ಯೂಕ್ ಜಾಂಗ್ವೆ 24ಕ್ಕೆ 2 , ವೆಸ್ಲಿ ಮಾಧೆವೆರೆ 11ಕ್ಕೆ 2 ವಿಕೆಟ್​ ಪಡೆದರೆ, ರಿಚರ್ಡ್​ ಎಂಗರವ ಹಾಗೂ ಮುಜರಬನಿ ತಲಾ ಒಂದು ವಿಕೆಟ್ ಪಡೆದರು.

150 ರನ್​ಗಳ ಗುರಿ ಬೆನ್ನತ್ತಿದ ಜಿಂಬಾಬ್ವೆ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 138 ರನ್​ಗಳಿಸಿತು. ಕ್ರೈಗ್ ಇರ್ವಿನ್ 34, ಲ್ಯೂಕ್ ಜಾಂಗ್ವೆ 30 ಮತ್ತು ತಿನಾಶೆ ಕಮುನ್ಹುಕಂವೆ 29 ರನ್​ಗಳಿಸಿ ಗೆಲುವಿಗಾಗಿ ನಡೆಸಿದ ಹೋರಾಟ ವಿಫಲವಾಯಿತು.

ಪಾಕ್ ಪರ ಉಸ್ಮಾನ್ ಖಾದಿರ್ 29ರನ್​ ನೀಡಿ 3 ವಿಕೆಟ್ ಪಡೆದರೆ, ಮೊಹಮ್ಮದ್ ಹಸ್ನೈನ್ 27ಕ್ಕೆ 2 , ಹಫೀಜ್ 21ಕ್ಕೆ 1 ಮತ್ತು ಹ್ಯಾರಿಸ್ ರವೂಫ್ 29ಕ್ಕೆ 1 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.