ದುಬೈ : ಡೆಲ್ಲಿ ತಂಡದ ನಾಯಕ ರಿಷಭ್ ಪಂತ್ ಪ್ರಬುದ್ಧತೆಯ ಮಟ್ಟ ಅನೀರಕ್ಷಿತ ಎತ್ತರದಲ್ಲಿದೆ ಎದು ಮುಖ್ಯ ಕೋಚ್ ರಿಕಿ ಪಾಂಟಿಂಗ್ ಪ್ರಶಂಸಿಸಿದ್ದಾರೆ. ಅಲ್ಲದೆ ಅವರು ಕಳೆದ ಒಂದೆರಡು ಆವೃತ್ತಿಗಳಲ್ಲಿ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮನ್ನಿಂದ ಪರಿಪೂರ್ಣ ನಾಯಕನಾಗಿ ಬದಲಾಗಿದ್ದಾರೆ ಎಂದು ಆಸೀಸ್ ಲೆಜೆಂಡ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಖಾಯಂ ನಾಯಕ ಶ್ರೇಯಸ್ ಅಯ್ಯರ್ ಗಾಯಗೊಂಡ ಕಾರಣ 23 ವರ್ಷದ ಪಂತ್ಗೆ 2021ರ ಐಪಿಎಲ್ನಲ್ಲಿ ಡೆಲ್ಲಿ ತಂಡವನ್ನು ಮುನ್ನಡೆಸುವ ಜವಾಬ್ದಾರಿ ನೀಡಲಾಗಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿದ ಯುವ ಆಟಗಾರ, ಡೆಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಎರಡು ಆವೃತ್ತಿಗಳಲ್ಲಿ ರಿಷಭ್ರ ಪ್ರಬುದ್ಧತೆ ಅತ್ಯುನ್ನತ ಮಟ್ಟದಲ್ಲಿ ಸಾಗುತ್ತಿದೆ ಎಂದು ಕ್ರಿಕೆಟ್ ಶ್ರೇಷ್ಠರಲ್ಲಿ ಒಬ್ಬರಾಗಿರುವ ಪಾಂಟಿಂಗ್, ಪಂತ್ ಬೆಳವಣಿಗೆಯನ್ನು ಕೊಂಡಾಡಿದಾರೆ.
ನಾನು ಮೊದಲು ಇಲ್ಲಿಗೆ(ಕ್ಯಾಪಿಟಲ್ಸ್) ಬಂದಾಗಿನಿಂದ ನೋಡಿರುವ ಪ್ರಕಾರ, ಪಂತ್ ಕಡಿಮೆ ಅವಧಿಯಲ್ಲಿ ವೇಗವಾಗಿ ಜನಪ್ರೀಯತೆ ಗಳಿಸಿಕೊಂಡಿದ್ದಾರೆ. ಆತ ಭಾರತ ಕ್ರಿಕೆಟ್ನಲ್ಲಿ ದೀರ್ಘ ಸಮಯದಲ್ಲಿ ಆಡುವ ಒಬ್ಬ ಮಹತ್ವದ ಆಟಗಾರನಾಗುವುದನ್ನು ನಾವೆಲ್ಲಾ ನೋಡಲಿದ್ದೇವೆ ಎಂದು ನಾನು ಹೇಳಿದ್ದೆ. ಆ ದಿನ ಬರುವುದನ್ನು ನಾನು ನೋಡಬಹುದು ಮತ್ತು ಪಂತ್ ಭಾರತ ತಂಡದಲ್ಲಿ ಆಡುವುದಕ್ಕೆ ಎಷ್ಟು ಬಯಸುತ್ತಾರೆ ಎಂಬುದು ನನಗೆ ತಿಳಿದಿದೆ ಎಂದು ಪಂಟರ್ ಹೇಳಿದ್ದಾರೆ.
ಅವರ ನಾಯಕತ್ವದ ಬಗ್ಗೆ ಮಾತನಾಡಿ, ಅವರು ನಾಯಕನ ಜವಾಬ್ದಾರಿಯನ್ನು ಅದ್ಭುತವಾಗಿ ನಿರ್ವಹಿಸುತ್ತಿದ್ದಾರೆ. ನಾವೆಲ್ಲರೂ ವಿಶೇಷವಾದದ್ದಕ್ಕಾಗಿ ಪ್ರಯತ್ನಿಸುತ್ತಿದ್ದೇವೆ. ಕಳೆದ ಬಾರಿಗಿಂತ ಈ ವರ್ಷ ನಾವು ಒಂದು ಹೆಜ್ಜೆ ಮುಂದೆ ಹೋಗಲು ಬಯಸುತ್ತೇವೆ ಮತ್ತು ರಿಷಭ್ ಅದರಲ್ಲಿ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ ಎಂದಿದ್ದಾರೆ.
ಇದನ್ನು ಓದಿ:ಕೊಹ್ಲಿ, ವಿಲಿಯಮ್ಸರಂತೆ ರಿಷಭ್ ಪಂತ್ ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿಕೊಡಬಲ್ಲರು: ರಿಕಿ ಪಾಂಟಿಂಗ್