ಇಂಗ್ಲೆಂಡ್ ವಿರುದ್ಧ ಮರುನಿಗದಿಯಾದ ಏಕೈಕ ಟೆಸ್ಟ್ ಪಂದ್ಯಕ್ಕೆ ಸಿದ್ಧತೆ ನಡೆಸುತ್ತಿರುವ ಭಾರತ ತಂಡ, ಲೈಸೆಸ್ಟರ್‌ಶೈರ್ ಕೌಂಟಿ ವಿರುದ್ಧ ಅಭ್ಯಾಸ ಪಂದ್ಯವನ್ನಾಡುತ್ತಿದೆ. ಇಂದು ನಡೆದ ದಿನದಾಟದಲ್ಲಿ ರೋಹಿತ್ ಶರ್ಮಾ, ರೋಮನ್ ವಾಕರ್ ಎಸೆತವನ್ನು ಪುಲ್ ಮಾಡಿದಾಗ ಆಕಾಶಕ್ಕೆ ಚಿಮ್ಮಿದ ಬಾಲ್ ಅಬಿದಿನೆ ಸಕಂಡೆ ಕೈ ಸೇರಿತು. ಈ ವೇಳೆ ರಿಷಬ್ ಪಂತ್, ಜಸ್ಪ್ರೀತ್ ಬೂಮ್ರಾ ಸಂಭ್ರಮಿಸಿದರು.
-
☝️ | Rohit (25) c Sakande, b Walker.
— Leicestershire Foxes 🏏 (@leicsccc) June 23, 2022 " class="align-text-top noRightClick twitterSection" data="
Rohit pulls a short ball from @RomanWalker17 up into the sky, @AbiSakande is under the catch. 👐@imVkohli walks to the middle. Watch him bat. 👇
🇮🇳 IND 50/2
𝐋𝐈𝐕𝐄 𝐒𝐓𝐑𝐄𝐀𝐌: https://t.co/adbXpw0FcA 👈
🦊 #IndiaTourMatch | #LEIvIND pic.twitter.com/5mxQJ5cLKK
">☝️ | Rohit (25) c Sakande, b Walker.
— Leicestershire Foxes 🏏 (@leicsccc) June 23, 2022
Rohit pulls a short ball from @RomanWalker17 up into the sky, @AbiSakande is under the catch. 👐@imVkohli walks to the middle. Watch him bat. 👇
🇮🇳 IND 50/2
𝐋𝐈𝐕𝐄 𝐒𝐓𝐑𝐄𝐀𝐌: https://t.co/adbXpw0FcA 👈
🦊 #IndiaTourMatch | #LEIvIND pic.twitter.com/5mxQJ5cLKK☝️ | Rohit (25) c Sakande, b Walker.
— Leicestershire Foxes 🏏 (@leicsccc) June 23, 2022
Rohit pulls a short ball from @RomanWalker17 up into the sky, @AbiSakande is under the catch. 👐@imVkohli walks to the middle. Watch him bat. 👇
🇮🇳 IND 50/2
𝐋𝐈𝐕𝐄 𝐒𝐓𝐑𝐄𝐀𝐌: https://t.co/adbXpw0FcA 👈
🦊 #IndiaTourMatch | #LEIvIND pic.twitter.com/5mxQJ5cLKK
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಔಟಾದರೆ ಪಂತ್, ಬೂಮ್ರಾ ಯಾಕೆ ಸಂಭ್ರಮಿಸಿದರು ಅಂತೀರಾ?. ಲೈಸೆಸ್ಟರ್ನ ಗ್ರೇಸ್ ರೋಡ್ ಮೈದಾನದಲ್ಲಿ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಲೈಸೆಸ್ಟರ್‌ಶೈರ್ ಕೌಂಟಿ ತಂಡದಿಂದ ರಿಷಬ್ ಪಂತ್, ಚೇತೇಶ್ವರ್ ಪೂಜಾರಾ, ಜಸ್ಪ್ರೀತ್ ಬೂಮ್ರಾ, ಪ್ರಸಿದ್ಧ್ ಕೃಷ್ಣ ಕಣಕ್ಕಿಳಿದು ಅಭ್ಯಾಸ ನಡೆಸುತ್ತಿದ್ದಾರೆ.
ರೋಹಿತ್ ಶರ್ಮಾ 25 ರನ್ ಗಳಿಸಿ ಆಡುತ್ತಿದ್ದಾಗ ರೋಮನ್ ವಾಕರ್ ಬೌಲಿಂಗ್ನಲ್ಲಿ ಪುಲ್ ಮಾಡಲು ಹೋಗಿ ಔಟಾದರು. ಈ ವೇಳೆ ಆಟಗಾರರನ್ನು ಹುರಿದುಂಬಿಸಲು ರಿಷಬ್ ಪಂತ್ ಮತ್ತು ಬೂಮ್ರಾ ಸಂಭ್ರಮಿಸಿದ್ದಾರೆ. ಈ ವಿಡಿಯೋವನ್ನು ಲೈಸೆಸ್ಟರ್‌ಶೈರ್ ಕೌಂಟಿ ಕ್ರಿಕೆಟ್ ಸಂಸ್ಥೆ ತನ್ನ ಟ್ವಿಟರ್ ಹ್ಯಾಂಡಲ್ನಲ್ಲಿ ಶೇರ್ ಮಾಡಿದೆ.
ಮಳೆಯಿಂದ ಈ ಪಂದ್ಯ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ವಿರಾಟ್ ಕೊಹ್ಲಿ 32 ರನ್ ಬಾರಿಸಿದ್ದು ಲಯಕ್ಕೆ ಮರಳುವ ಸೂಚನೆ ನೀಡಿದ್ದಾರೆ. ಅಲ್ಲದೇ ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ಶ್ರೇಯಸ್ ಅಯ್ಯರ್ ಸೊನ್ನೆಗೆ ಔಟಾದರು.
ಇದನ್ನೂ ಓದಿ: ರಣಜಿ ಫೈನಲ್ 2ನೇ ದಿನದಾಟ: ಮುಂಬೈಗೆ ಸರ್ಫರಾಜ್ ಶತಕದ ಬಲ, ಮಧ್ಯಪ್ರದೇಶ 1 ವಿಕೆಟ್ಗೆ 123