ETV Bharat / sports

ಕೊಹ್ಲಿ, ರೋಹಿತ್ ಅಲ್ಲ, ಈತ ಭಾರತದ ಅಪಾಯಕಾರಿ - ಗೇಮ್ ಚೇಂಜರ್ ಬ್ಯಾಟ್ಸ್​ಮನ್: ಕಿವೀಸ್ ಕೋಚ್​

author img

By

Published : May 24, 2021, 6:04 PM IST

​ಜರ್ಗನ್​ಸೆನ್ ಪ್ರಕಾರ ರಿಷಭ್ ಪಂತ್ ಎದುರಾಳಿಯಿಂದ ಪಂದ್ಯವನ್ನು ಯಾವುದೇ ಸಮಯದಲ್ಲಾದರೂ ಏಕಾಂಗಿಯಾಗಿ ಕಸಿದುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ವಿಶ್ವದ ನಂಬರ್ 1 ತಂಡದ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಪಂತ್ ಅವ​ರಿಂದ ಉಂಟಾಗುವ ಪರಿಣಾಮದ ಬಗ್ಗೆ ನ್ಯೂಜಿಲ್ಯಾಂಡ್ ತಂಡ ಎಚ್ಚರಿಕೆಯಿಂದ ಇರಬೇಕೆಂದು ತಿಳಿಸಿದ್ದಾರೆ.

ರೋಹಿತ್ ಶರ್ಮಾ-  ವಿರಾಟ್​ ಕೊಹ್ಲಿ
ರೋಹಿತ್ ಶರ್ಮಾ- ವಿರಾಟ್​ ಕೊಹ್ಲಿ

ಲಂಡನ್: ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ರಿಷಭ್ ಪಂತ್ ಭಾರತ ತಂಡದಲ್ಲಿರುವ ಅಪಾಯಕಾರಿ ಬ್ಯಾಟ್ಸ್​ಮನ್ ಹಾಗೂ ಗೇಮ್ ಚೇಂಜರ್​ ಎಂದು ನ್ಯೂಜಿಲ್ಯಾಂಡ್ ತಂಡದ ಬೌಲಿಂಗ್ ಕೋಚ್ ಶೇನ್ ಜರ್ಗನ್​ಸೆನ್ ಅಭಿಪ್ರಾಯ ಪಟ್ಟಿದ್ದಾರೆ.

​ಜರ್ಗನ್​ಸೆನ್ ಪ್ರಕಾರ ರಿಷಭ್ ಪಂತ್ ಎದುರಾಳಿಯಿಂದ ಪಂದ್ಯವನ್ನು ಯಾವುದೇ ಸಮಯದಲ್ಲಾದರೂ ಏಕಾಂಗಿಯಾಗಿ ಕಸಿದುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ವಿಶ್ವದ ನಂಬರ್ 1 ತಂಡದ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಪಂತ್​ರಿಂದ ಉಂಟಾಗುವ ಪರಿಣಾಮದ ಬಗ್ಗೆ ನ್ಯೂಜಿಲ್ಯಾಂಡ್ ತಂಡ ಎಚ್ಚರಿಕೆಯಿಂದ ಇರಬೇಕೆಂದು ತಿಳಿಸಿದ್ದಾರೆ.

" ಪಂತ್ ಅತ್ಯಂತ ಅಪಾಯಕಾರಿ ಆಟಗಾರನಾಗಿದ್ದು, ಅವರು ಏಕಾಂಗಿಯಾಗಿ ಆಟವನ್ನು ಬದಲಾಯಿಸಬಲ್ಲರು. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ಅದನ್ನು ಅದ್ಭುತವಾಗಿ ಮಾಡಿದನ್ನು ನಾವು ನೋಡಿದ್ದೇವೆ. ಅವರು ಅತ್ಯಂತ ಸಕಾರಾತ್ಮಕ ಮನಸ್ಸಿನವರು, ಆದರೂ, ಅವರ ವಿಕೆಟ್ ತೆಗೆದುಕೊಳ್ಳುವ ಅವಕಾಶ ನಮ್ಮ ಬೌಲರ್​ಗಳಿಗೆ ಬರುತ್ತದೆ" ಎಂದು ಜರ್ಗೆನ್ಸನ್ ಆಂಗ್ಲ​ ಪತ್ರಿಕೆ ಟೆಲಿಗ್ರಾಫ್​ಗೆ ತಿಳಿಸಿದ್ದಾರೆ.

ನಮ್ಮ ಬೌಲರ್​​ಗಳು ಕೂಡ ಅತ್ಯುತ್ತಮವಾಗಿ ಬೌಲಿಂಗ್ ಮಾಡುವ ಅವಶ್ಯಕತೆಯಿದೆ. ಆರಾಮವಾಗಿದ್ದು, ಪಂತ್​ ರನ್​​ಗಳಿಸದಿರಲು ಎಷ್ಟು ಸಾಧ್ಯವೋ ಅಷ್ಟು ಕಷ್ಟಪಡುವ ಹಾಗೆ ಮಾಡಬೇಕು. ಏಕೆಂದರೆ ಅವರು ಸುಲಭವಾಗಿ ರನ್​ಗಳಿಸುವ ಬ್ಯಾಟ್ಸ್​ಮನ್ ಮತ್ತು ಆತನನ್ನು ಕಟ್ಟಿ ಹಾಕುವುದು ಕಠಿಣ, ನಾವಿದನ್ನು ತಲೆಯಲ್ಲಿಟ್ಟುಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸದಲ್ಲಿ ಮೊದಲೆ ಪಂದ್ಯದವರೆಗೆ ತಂಡದಲ್ಲಿ ಅವಕಾಶ ಪಡೆಯುವುದಕ್ಕೆ ಸಾಧ್ಯವಾಗದ ಪಂತ್, ನಂತರದ ಪಂದ್ಯಗಳಲ್ಲಿ ಅಬ್ಬರಿಸಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದರು. ಅವರು ಸಿಡ್ನಿ ಟೆಸ್ಟ್​ನಲ್ಲಿ 97ರನ್​ ಸಿಡಿಸಿ ಭಾರತ ಡ್ರಾ ಸಾಧಿಸಲು ನೆರವಾದರೆ, ಗಬ್ಬಾ ಟೆಸ್ಟ್​ನಲ್ಲಿ ಅಜೇಯ 89 ರನ್​ ಸಿಡಿಸಿ ಐತಿಹಾಸಿಕ ಜಯದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅದೇ ಪ್ರದರ್ಶನವನ್ನು ಇಂಗ್ಲೆಂಡ್ ವಿರುದ್ಧ ತೋರಿಸಿದ್ದರು.

ಇದನ್ನು ಓದಿ:WTC ಫೈನಲ್​ನಲ್ಲಿ ಭಾರತದ ವಿರುದ್ಧ ಮೇಲುಗೈ ಸಾಧಿಸಲು ಇಂಗ್ಲೆಂಡ್ ಸರಣಿ ಅನುಕೂಲ : ಟೇಲರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.