ETV Bharat / sports

ಪಂತ್​ ಜಾಗದಲ್ಲಿ ಯಾರೇ ಆಡಿದರೂ ಪರ್ಯಾಯ ಅಲ್ಲ: ರಿಕ್ಕಿ ಪಾಂಟಿಂಗ್​ - ETV Bharath Kannada news

ವಾರ್ನರ್​ ಡೆಲ್ಲಿ ಕ್ಯಾಪಿಟಲ್ಸ್​ನಲ್ಲಿ ಆರಂಭಿಕರಾಗಿಯೇ ಮುಂದುವರೆಯುತ್ತಾರೆ ಎಂದು ಪಾಂಟಿಂಗ್​ ಹೇಳಿದ್ದಾರೆ.

Ricky Ponting  about Rishabh Pant and David Warner
ಪಂತ್​ ಜಾಗದಲ್ಲಿ ಯಾರೇ ಆಡಿದರೂ ಪರ್ಯಾಯ ಅಲ್ಲ: ರಿಕ್ಕಿ ಪಾಂಟಿಂಗ್​
author img

By

Published : Mar 24, 2023, 9:55 PM IST

ನವದೆಹಲಿ: ಗಾಯಗೊಂಡಿರುವ ರಿಷಬ್‌ ಪಂತ್‌ ಅವರ ಸ್ಥಾನವ0ನ್ನು ತುಂಬಲು ಸಾಧ್ಯವಿಲ್ಲ ಮತ್ತು ಅವರಂತಹ ಪ್ರಭಾವ ಬೀರುವ ಆಟಗಾರ ಮತ್ತೊಬ್ಬರಿಲ್ಲ ಎಂದು ಐಪಿಎಲ್‌ ತಂಡದ ಡೆಲ್ಲಿ ಕ್ಯಾಪಿಟಲ್ಸ್‌ ಮುಖ್ಯ ಕೋಚ್‌ ರಿಕಿ ಪಾಂಟಿಂಗ್‌ ಹೇಳಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಪಂತ್ ಅವರು ಅನಿರ್ದಿಷ್ಟಾವಧಿಗೆ ಕ್ರಿಕೆಟ್​ನಿಂದ ಹೊರಗುಳಿದಿದ್ದಾರೆ. ಪಾಂಟಿಂಗ್ ಅವರು ತಮ್ಮ ನೆಚ್ಚಿನ ಆಟಗಾರ ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಹೋಮ್ ಪಂದ್ಯಗಳ ಸಮಯದಲ್ಲಿ ಇರಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಆಸ್ಟ್ರೇಲಿಯಾದ ಮಾಜಿ ನಾಯಕ, ಪಂತ್ ಅವರ ನಿರ್ಗಮನವು ದೊಡ್ಡ ಹೊಡೆತವಾಗಿದೆ. ಅವರ ಸ್ಥಾನದಲ್ಲಿ ನಾವು ಯಾರನ್ನು ಆಡಿಸುತ್ತೇವೆ ಎಂಬುದು ಮುಖ್ಯವಲ್ಲ, ಏಕೆಂದರೆ ಅವರ ಸ್ಥಾನವನ್ನು ನಾವು ಕಳೆದುಕೊಳ್ಳುತ್ತೇವೆ. ಆಟದ ಎಲ್ಲಾ ಮೂರು ಸ್ವರೂಪಗಳಲ್ಲಿ ಅವರು ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು ಎಂಬುದನ್ನು ಮರೆಮಾಚಲು ಸಾಧ್ಯವಿಲ್ಲ. ಟೆಸ್ಟ್ ಬ್ಯಾಟ್ಸ್‌ಮನ್‌ಗಳಲ್ಲಿ ವಿಶ್ವ ಶ್ರೇಯಾಂಕದಲ್ಲಿ ಪಂತ್ ಅಗ್ರ ಐದು ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ನಾಯಕರಾಗಿ ಬಂದು ಫಿನಿಶರ್​ ಆಗಿ ತಂಡದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅವರ ಸ್ಥಾನವನ್ನು ತುಂಬುವುದು ಅಸಾಧ್ಯ. ಮುಂಬೈನ ಯುವ ಆಲ್‌ರೌಂಡರ್ ಅಮನ್ ಹಕೀಮ್ ಖಾನ್ ಉತ್ತಮ ಆಟಗಾರ ತಂಡದಲ್ಲಿದ್ದಾರೆ ಎಂದಿದ್ದಾರೆ. ಈ ಮೂಲಕ ಪರ್ಯಾಯ ಆಟಗಾರನ ಹುಡುಕಾಟದ ಬಗ್ಗೆ ತಿಳಿಸಿದ್ದಾರೆ. ಫಿರೋಜ್ ಷಾ ಕೋಟ್ಲಾದಲ್ಲಿ ಎರಡು ಅಭ್ಯಾಸ ಮ್ಯಾಚ್​ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅಮನ್ ಖಾನ್ ನಮ್ಮನ್ನು ಹೆಚ್ಚು ಪ್ರಭಾವಿಸಿದ ಆಟಗಾರ ಎಂದು ಪಾಂಟಿಂಗ್ ಹೇಳಿದ್ದಾರೆ.

"ನಾವು ಮಧ್ಯಮ ಕ್ರಮಾಂಕದಲ್ಲಿ ಪವರ್ ಹಿಟರ್‌ಗಳ ಬಗ್ಗೆ ಮಾತನಾಡಿದರೆ, ನಮ್ಮಲ್ಲಿ ಅಮನ್ ಖಾನ್, ರೋವ್‌ಮನ್ ಪೊವೆಲ್ ಮತ್ತು ಅಕ್ಷರ್ ಪಟೇಲ್ ಅವರಂತಹ ಆಟಗಾರರಿದ್ದಾರೆ. ಕಳೆದ 12 ತಿಂಗಳಲ್ಲಿ ಅಕ್ಷರ್ ಬ್ಯಾಟಿಂಗ್ ಸಾಕಷ್ಟು ಸುಧಾರಿಸಿದೆ. ರಿಷಬ್ ಅವರ ಅನುಪಸ್ಥಿತಿಯನ್ನು ಮಧ್ಯಮ ಕ್ರಮಾಂಕದಲ್ಲಿ ಇವರು ತಂಡಕ್ಕೆ ಆಸರೆಯಾಗಲಿದ್ದಾರೆ. ಅಕ್ಷರ್​ ಪಟೇಲ್​ ರಿಷಬ್​ಗೆ ಪರ್ಯಾಯ ಅಲ್ಲದಿದ್ದರೂ ಒತ್ತಡದ ಸಮಯದಲ್ಲಿ ರನ್​ ಗಳಿಸುವ ಬ್ಯಾಟರ್​ ರೀತಿ ಕಾಣುತ್ತಾರೆ".

"ಡೇವಿಡ್ ವಾರ್ನರ್ ಅವರು ಭಾರತದ ವಿರುದ್ಧ ಮುಕ್ತಾಯಗೊಂಡ ಮೂರನೇ ಏಕದಿನ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿರಬಹುದು ಆದರೆ, ಹೊಸದಾಗಿ ನೇಮಕಗೊಂಡ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಕಳೆದ ಎರಡು ದಶಕಗಳಲ್ಲಿ ಅವರು ಯಶಸ್ಸನ್ನು ಕಂಡುಕೊಂಡದ್ದು, ಆರಂಭಿಕ ಆಟಗಾರರಾಗಿ. ಹೀಗಾಗಿ ಡೆಲ್ಲಿಯಲ್ಲೂ ಅವರು ಆರಂಭಿಕರಾಗಿರಲಿದ್ದಾರೆ".

"ವಾರ್ನರ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವುದು ನನಗೆ ಇಷ್ಟವಿಲ್ಲ. ಅವರು ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಆರಂಭಿಕ ಆಟಗಾರರಾಗಿದ್ದಾರೆ. ಕಳೆದ ವರ್ಷ ಅವರು ಡೆಲ್ಲಿ ಕ್ಯಾಪಿಟಲ್ಸ್‌ಗಾಗಿ ಆಡಿದ ಪಂದ್ಯಗಳಲ್ಲಿ ನಾವು ಅದನ್ನು ನೋಡಿದ್ದೇವೆ. ಅವರು ನಮ್ಮ ಅತಿ ಹೆಚ್ಚು ರನ್ ಗಳಿಸಿದವರು ಮತ್ತು ಮ್ಯಾಚ್ ಗೆಲ್ಲಿಸಬಲ್ಲ ಬ್ಯಾಟರ್​ ಆಗಿದ್ದಾರೆ" ಎಂದು ರಿಕ್ಕಿ ಹೇಳಿದ್ದಾರೆ.

ಇದನ್ನೂ ಓದಿ: "ರಿಷಬ್​ ಜೊತೆಗಿನ ಕ್ಷಣಗಳು ಮಿಸ್​ ಆಗುತ್ತವೆ": ಡೆಲ್ಲಿ ಕ್ಯಾಪಿಟಲ್ಸ್​ ಪಾಳಯ ಸೇರಿದ ನಾಯಕ ವಾರ್ನರ್​ ಮಾತು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.