ಭಾರತ ತಂಡದ ವೇಗದ ಬೌಲರ್ ರೇಣುಕಾ ಸಿಂಗ್ ಅವರು ಇಂಗ್ಲೆಂಡ್ ವಿರುದ್ಧ ನಿನ್ನೆ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಐದು ವಿಕೆಟ್ ಪಡೆದು ದಾಖಲೆ ಬರೆದರು. ಇದು ಅವರ ವೈಯಕ್ತಿಕ ಬೆಸ್ಟ್ ಫರ್ಫಾಮೆನ್ಸ್ ಆಗಿದ್ದು, ನಾಲ್ಕು ಓವರ್‌ಗಳಲ್ಲಿ ಕೇವಲ 15 ರನ್ ಮಾತ್ರ ಬಿಟ್ಟುಕೊಟ್ಟಿದ್ದರು. ಕರಾರುವಾಕ್ ಬೌಲಿಂಗ್ ಹೊರತಾಗಿಯೂ ಇಂಗ್ಲೆಂಡ್ ತಂಡ ಭಾರತಕ್ಕೆ 152 ರನ್ ಟಾರ್ಗೆಟ್ ನೀಡಿತ್ತು. ಈ ಗುರಿ ಮುಟ್ಟುವಲ್ಲಿ ಭಾರತದ ವನಿತೆಯರು 11 ರನ್‌ಗಳಿಂದ ಎಡವಿದರು.
ಟಾಸ್ ಗೆದ್ದು ಕ್ಷೇತ್ರ ರಕ್ಷಣೆ ಆಯ್ದುಕೊಂಡ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ನಿರ್ಧಾರ ಸರಿ ಎಂಬಂತೆ ಪವರ್ ಪ್ಲೇಯೊಳಗೆ ಇಂಗ್ಲೆಂಡ್ನ ಪ್ರಮುಖ ಮೂರು ವಿಕೆಟ್‌ಗಳನ್ನು ರೇಣುಕಾ ಸಿಂಗ್ ಕಬಳಿಸಿದರು. 1, 3 ಮತ್ತು 5ನೇ ಓವರ್‌ಗಳಲ್ಲಿ ಒಂದೊಂದು ವಿಕೆಟ್ ಪಡೆದು ಮುನ್ನುಗ್ಗಿದ ರೇಣುಕಾ, ಕೊನೆಯ ಓವರ್ನಲ್ಲಿ ಮತ್ತೆರಡು ವಿಕೆಟ್ ಉರುಳಿಸಿದರು.
-
Renuka Thakur with career-best figures 👋
— ICC (@ICC) February 18, 2023 " class="align-text-top noRightClick twitterSection" data="
Watch the highlights here 👉 https://t.co/sPfiPoIpQ4#T20WorldCup #TurnItUp pic.twitter.com/n3FKhGTbKc
">Renuka Thakur with career-best figures 👋
— ICC (@ICC) February 18, 2023
Watch the highlights here 👉 https://t.co/sPfiPoIpQ4#T20WorldCup #TurnItUp pic.twitter.com/n3FKhGTbKcRenuka Thakur with career-best figures 👋
— ICC (@ICC) February 18, 2023
Watch the highlights here 👉 https://t.co/sPfiPoIpQ4#T20WorldCup #TurnItUp pic.twitter.com/n3FKhGTbKc
ರೇಣುಕಾ 'ಪಂಚ್'ಕಜ್ಜಾಯ: ಇದು ಟಿ20ಯಲ್ಲಿ ರೇಣುಕಾ ಅವರ ಚೊಚ್ಚಲ ಐದು ವಿಕೆಟ್ ಸಾಧನೆಯಾಗಿದೆ. ಭಾರತೀಯ ಪುರುಷ ಮತ್ತು ಮಹಿಳಾ ಕ್ರಿಕೆಟ್ನಲ್ಲಿಯೂ ಟಿ20 ವಿಶ್ವಕಪ್ನಲ್ಲಿ 5 ವಿಕೆಟ್ ಸಾಧನೆ ಹಿಂದೆಂದೂ ಆಗಿರಲಿಲ್ಲ. ವಿಶ್ವಕಪ್ನಲ್ಲಿ 5 ವಿಕೆಟ್ ಗುಚ್ಚ ಪಡೆದ ಮೊದಲ ಭಾರತೀಯ ಬೌಲರ್ ಎಂಬ ದಾಖಲೆಯನ್ನೂ ಪ್ರತಿಭಾವಂತ ಆಟಗಾರ್ತಿ ಸೃಷ್ಟಿಸಿದರು.
ಹೀಗಿತ್ತು ರೇಣುಕಾ ಬೌಲಿಂಗ್ ದಾಳಿ: ಮೊದಲ ಓವರ್ನಲ್ಲೇ ಆರಂಭಿಕ ಆಟಗಾರ್ತಿ ಡೇನಿಯಲ್ ವ್ಯಾಟ್ ಅವರ ವಿಕೆಟ್ ಅನ್ನು ಲೆಂತ್ ಬೌಲಿಂಗ್ನಿಂದ ತೆಗೆದರು. ಡೇನಿಯಲ್ ವ್ಯಾಟ್ ಡಕೌಟ್ ಆಗಿ ಪೆವಿಲಿಯನ್ ಹಾದಿ ಹಿಡಿಯಬೇಕಾಯ್ತು. ಮೂರನೇ ವಿಕೆಟ್ ಆಗಿ ಕ್ರೀಸಿಗಿಳಿದ ಆಲಿಸ್ ಕ್ಯಾಪ್ಸಿ ಅವರು ರೇಣುಕಾರ ಮೂರನೇ ಓವರ್ನ ಮೊದಲ ಗುಡ್ಲೆಂತ್ ಬಾಲ್ನಲ್ಲಿ ಕ್ಲೀನ್ ಬೌಲ್ಡ್ ಆದರು. 5ನೇ ಓವರ್ನ 4ನೇ ಎಸೆತದಲ್ಲಿ ಕ್ಯಾಪ್ಸಿಯವರನ್ನು ಬೌಲ್ಡ್ ಮಾಡಿದ ಬಾಲ್ನ ರೀಪ್ಲೇಯಂತೆ ಎಸೆದ ರೇಣುಕಾ ಸಿಂಗ್ ಸೋಫಿಯಾ ಡಂಕ್ಲಿ ಅವರ ವಿಕೆಟ್ ಕಿತ್ತರು. ಪವರ್‌ಪ್ಲೇ ಕೊನೆಯಲ್ಲಿ ಇಂಗ್ಲೆಂಡ್ 37/3ರಲ್ಲಿ ಕಳೆದುಕೊಂಡು ಸಂಕಷ್ಟದಲ್ಲಿತ್ತು.
ಇದಾದ ಬಳಿಕ ಪಂದ್ಯದ ಮತ್ತು ವೈಯಕ್ತಿಕ ಕೊನೆಯ ಓವರ್ನಲ್ಲಿ 40 ರನ್ ಗಳಿಸಿ ಕ್ರೀಸ್‌ನಲ್ಲಿ ಸೆಟ್ಲ್ ಆಗಿದ್ದ ಆಮಿ ಜೋನ್ಸ್ ಅವರ ವಿಕೆಟ್ ಪಡೆದರು. ಅವರ ನಂತರ ಕ್ರೀಸ್ಗೆ ಬಂದ ನ್ಯಾಟ್ ಸ್ಕೀವರ್ ಬ್ರಂಟ್ ಅವರನ್ನೂ ಡಕೌಟ್ ಮಾಡಿದರು. ಅಂತಿಮ ಓವರ್ನಲ್ಲಿ ಇಂಗ್ಲೆಂಡ್ ತಂಡ ಏಳು ರನ್ ಮಾತ್ರ ಗಳಿಸಿತು. ಈ ಸಂದರ್ಭದಲ್ಲಿ ರೇಣುಕಾ 3 (ಸಿಂಗಲ್) ರನ್ ಮಾತ್ರ ನೀಡಿದರು. (ಕೊನೆಯ ಬಾಲ್ ಬೈಸ್ ಫೋರ್ ಆದ್ದರಿಂದ ಬೌಲರ್ಗೆ ರನ್ ಸೇರುವುದಿಲ್ಲ).
27 ವರ್ಷದ ರೇಣುಕಾ ಠಾಕೂರ್ ಸಿಂಗ್ ಮೂಲತಃ ಹಿಮಾಚಲ ಪ್ರದೇಶದವರಾಗಿದ್ದು, ಬಲಗೈ ಮಧ್ಯಮ ವೇಗಿ. ಇದುವರೆಗೂ ಅಂತಾರಾಷ್ಟ್ರೀಯ 30 ಟಿ20 ಪಂದ್ಯಗಳನ್ನು ಆಡಿದ್ದು 29 ಇನ್ನಿಂಗ್ಸ್ ಬೌಲ್ ಮಾಡಿ 30 ವಿಕೆಟ್ ಪಡೆದಿದ್ದಾರೆ. ನಿನ್ನೆ 15 ರನ್ಗಳಿಗೆ 5 ವಿಕೆಟ್ ಪಡೆದಿದ್ದು ಅವರ ವೈಯುಕ್ತಿಕ ಬೆಸ್ಟ್ ಆಗಿದ್ದು, 6.32 ಎಕಾನಮಿ ಕಾಯ್ದುಕೊಂಡಿದ್ದಾರೆ. 7 ಏಕದಿನ ಪಂದ್ಯಗಳನ್ನಾಡಿದ್ದು, 268 ರನ್ ಬಿಟ್ಟುಕೊಟ್ಟು 18 ವಿಕೆಟ್ ಕಬಳಿಸಿದ್ದಾರೆ. ಏಕದಿನದಲ್ಲಿ 28 ರನ್ಗೆ 4 ವಿಕೆಟ್ ಪಡೆದಿದ್ದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ.
ರೇಣುಕಾ ಪಾದಾರ್ಪಣೆ ಪಂದ್ಯಗಳು: 2021 ಅಕ್ಟೋಬರ್‌ನ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅಂತಾರಾಷ್ಟ್ರೀಯ ಟಿ20ಗೆ ಪಾದಾರ್ಪಣೆ ಮಾಡಿದರು. ಆದರೆ ಮಳೆ ಅಡ್ಡಿಯಿಂದಾಗಿ ಮೊದಲ ಪಂದ್ಯದಲ್ಲಿ ಬೌಲಿಂಗ್ ಮಾಡುವ ಅವಕಾಶವೇ ಸಿಗಲಿಲ್ಲ. ಸರಣಿಯ ಕೊನೆ ಟಿ20 ಪಂದ್ಯದಲ್ಲಿ ಅಂತಾರಾಷ್ಟ್ರೀಯ ಮೊದಲ ವಿಕೆಟ್ ಪಡೆದರು. ಅಂತಾರಾಷ್ಟ್ರೀಯ ಏಕದಿನಕ್ಕೆ ನ್ಯೂಜಿಲೆಂಡ್ ಪ್ರವಾಸದಲ್ಲಿ ಡೆಬ್ಯು ಮಾಡಿದರು. ಮೊದಲ ಪಂದ್ಯದಲ್ಲೇ ಒಂದು ವಿಕೆಟ್ ಗಳಿಸಿದರು.
-
The ICC Emerging Player of 2022 is now a Royal Challenger! 🔥
— Royal Challengers Bangalore (@RCBTweets) February 13, 2023 " class="align-text-top noRightClick twitterSection" data="
Welcome to RCB, Renuka Singh! 🤩#PlayBold #WeAreChallengers #WPL2023 #WPLAuction #NowARoyalChallenger pic.twitter.com/X2YBCIofNj
">The ICC Emerging Player of 2022 is now a Royal Challenger! 🔥
— Royal Challengers Bangalore (@RCBTweets) February 13, 2023
Welcome to RCB, Renuka Singh! 🤩#PlayBold #WeAreChallengers #WPL2023 #WPLAuction #NowARoyalChallenger pic.twitter.com/X2YBCIofNjThe ICC Emerging Player of 2022 is now a Royal Challenger! 🔥
— Royal Challengers Bangalore (@RCBTweets) February 13, 2023
Welcome to RCB, Renuka Singh! 🤩#PlayBold #WeAreChallengers #WPL2023 #WPLAuction #NowARoyalChallenger pic.twitter.com/X2YBCIofNj
ಐಸಿಸಿ ರ್‍ಯಾಂಕಿಂಗ್: ಟಿ20 ಐಸಿಸಿ ಶ್ರೇಯಾಂಕದಲ್ಲಿ 12ನೇ ಮತ್ತು ಏಕದಿನದಲ್ಲಿ 35ನೇ ಸ್ಥಾನವನ್ನು ರೇಣುಕಾ ಠಾಕೂರ್ ಸಿಂಗ್ ಪಡೆದಿದ್ದಾರೆ. ಇತ್ತೀಚೆಗೆ ನಡೆದ ಮೊದಲ ಮಹಿಳಾ ಪ್ರೀಮಿಯರ್ ಲೀಗ್ ಹರಾಜಿನಲ್ಲಿ 1.5 ಕೋಟಿ ರೂ.ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿಕೊಂಡಿದ್ದಾರೆ.
ಇದನ್ನೂ ಓದಿ: ಟಿ20 ವಿಶ್ವಕಪ್: ಇಂಗ್ಲೆಂಡ್ ವಿರುದ್ಧ ಭಾರತ ನಾರಿಯರಿಗೆ 11 ರನ್ ಸೋಲು