ದುಬೈ: ಶುಕ್ರವಾರ ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸಿ ರೋಚಕ ಜಯ ಸಾಧಿಸಿದ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ನಲ್ಲಿ 100ನೇ ಜಯ ಸಾಧಿಸಿದ 4ನೇ ತಂಡ ಎಂಬ ಶ್ರೇಯಕ್ಕೆ ಪಾತ್ರವಾಗಿದೆ.
ಶುಕ್ರವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 165 ರನ್ಗಳ ಟಾರ್ಗೆಟ್ಅನ್ನು ಕೊನೆಯ ಎಸೆತದಲ್ಲಿ ತಲುಪಿತು. ಶ್ರೀಕಾರ್ ಭರತ್ ವೇಗಿ ಆವೇಶ್ ಖಾನ್ನ ಕೊನೆಯ ಓವರ್ನ ಕೊನೆಯ ಎಸೆತದಲ್ಲಿ ಸಿಕ್ಸರ್ಗಟ್ಟುವ ಮೂಲಕ ರೋಚಕ ಜಯ ತಂದುಕೊಟ್ಟರು. ಭರತ್ ಅಜೇಯ 78 ರನ್ ಮತ್ತು ಮ್ಯಾಕ್ಸ್ವೆಲ್ ಅಜೇಯ 51 ರನ್ ಗಳಿಸಿದರು.
ಈ ಜಯದ ಮೂಲಕ ಬೆಂಗಳೂರು ಫ್ರಾಂಚೈಸಿ 14 ವರ್ಷಗಳ ಲೀಗ್ ಇತಿಹಾಸದಲ್ಲಿ 100ನೇ ಜಯ ಸಾಧಿಸಿದ 4ನೇ ಐಪಿಎಲ್ ತಂಡ ಎನಿಸಿಕೊಂಡಿತು. ಆರ್ಸಿಬಿ 210 ಪಂದ್ಯಗಳನ್ನಾಡಿದ್ದು 100 ಜಯ, 106 ಸೋಲು ಮತ್ತು 4 ಪಂದ್ಯಗಳು ಫಲಿತಾಂಶ ರಹಿತವಾಗಿವೆ. ಮುಂಬೈ ಇಂಡಿಯನ್ಸ್ 125 ಜಯ(217 ಪಂದ್ಯ) ಚೆನ್ನೈ ಸೂಪರ್ ಕಿಂಗ್ಸ್ 115 ಜಯ(193 ಪಂದ್ಯ) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ 105(206) ತಂಡಗಳು ಕೂಡ 100+ ಜಯ ಸಾಧಿಸಿವೆ.
ಇದನ್ನು ಓದಿ:IPL: ಕೊನೆಯ ಎಸೆತದಲ್ಲಿ ಸಿಕ್ಸ್... ಆರ್ಸಿಬಿಗೆ ರೋಚಕ ಜಯ