ಶಾರ್ಜಾ: ಗ್ಲೇನ್ ಮ್ಯಾಕ್ಸ್ವೆಲ್ ಅವರ ಸ್ಫೋಟಕ ಅರ್ಧಶತಕ ಮತ್ತು ಬೌಲರ್ಗಳ ಸಂಘಟಿತ ಪ್ರದರ್ಶನದ ಮೂಲಕ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡ ಎದುರಾಳಿ ಪಂಜಾಬ್ ಕಿಂಗ್ಸ್ ವಿರುದ್ಧ 6 ರನ್ಗಳ ರೋಚಕ ಜಯ ಸಾಧಿಸಿ 14ನೇ ಆವೃತ್ತಿಯಲ್ಲಿ ಮೂರನೇ ತಂಡವಾಗಿ ಪ್ಲೇ ಆಫ್ ಪ್ರವೇಶಿಸಿದೆ.
ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ಟಾಸ್ ಗೆದ್ದ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಗ್ಲೇನ್ ಮ್ಯಾಕ್ಸ್ವೆಲ್ 57(33 ಎಸೆತ, 3 ಬೌಂಡರಿ, 4 ಸಿಕ್ಸರ್) ಮತ್ತು ಆರಂಭಿಕ ದೇವದತ್ ಪಡಿಕ್ಕಲ್ ಅವರ 40ರನ್ಗಳ ನೆರವಿನಿಂದ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 164 ರನ್ಗಳ ಸವಾಲಿನ ಮೊತ್ತ ದಾಖಲಿಸಿತ್ತು.
-
2️⃣ points secured. ✅
— Royal Challengers Bangalore (@RCBTweets) October 3, 2021 " class="align-text-top noRightClick twitterSection" data="
Qualification for playoffs. ✅
How pumped are you, 12th Man Army? 👊🏻👊🏻#PlayBold #WeAreChallengers #ನಮ್ಮRCB #IPL2021 #RCBvPBKS pic.twitter.com/s610Lr0dEP
">2️⃣ points secured. ✅
— Royal Challengers Bangalore (@RCBTweets) October 3, 2021
Qualification for playoffs. ✅
How pumped are you, 12th Man Army? 👊🏻👊🏻#PlayBold #WeAreChallengers #ನಮ್ಮRCB #IPL2021 #RCBvPBKS pic.twitter.com/s610Lr0dEP2️⃣ points secured. ✅
— Royal Challengers Bangalore (@RCBTweets) October 3, 2021
Qualification for playoffs. ✅
How pumped are you, 12th Man Army? 👊🏻👊🏻#PlayBold #WeAreChallengers #ನಮ್ಮRCB #IPL2021 #RCBvPBKS pic.twitter.com/s610Lr0dEP
ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ಮೋಯಿಸಸ್ ಹೆನ್ರಿಕ್ಸ್ 12ರನ್ ನೀಡಿ 3 ವಿಕೆಟ್ ಹಾಗೂ ಮೊಹಮ್ಮದ್ ಶಮಿ 39 ರನ್ ನೀಡಿ 3 ವಿಕೆಟ್ ಪಡೆದರು.
ಇನ್ನು 165 ರನ್ಗಳ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ರಾಹುಲ್ ಬಳಗ ಎಂದಿನಂತೆ 91 ರನ್ಗಳ ಆರಂಭಿಕ ಜೊತೆಯಾಟ ನಡೆಸಿಯೂ ಮಧ್ಯಮ ಕ್ರಮಾಂಕದ ವೈಫಲ್ಯದಿಂದ ಸೋಲು ಕಂಡಿತು.
ರಾಹುಲ್ 35 ಎಸೆತಗಳಲ್ಲಿ 1 ಬೌಂಡರಿ, ಸಿಕ್ಸರ್ ಸಹಿತ 39 ರನ್ ಗಳಿಸಿ ಶಹ್ಬಾಜ್ಗೆ ವಿಕೆಟ್ ಒಪ್ಪಿಸಿದರು. ಇವರ ಬೆನ್ನಲ್ಲೇ ಮತ್ತೊಮ್ಮೆ ವೈಫಲ್ಯ ಅನುಭವಿಸಿದ ವಿಂಡೀಸ್ ಬ್ಯಾಟರ್ ನಿಕೋಲಸ್ ಪೂರನ್ ಕೇವಲ 3 ರನ್ಗಳಿಸಿ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದರು.
-
.@RCBTweets march into #VIVOIPL Playoffs! 👏 👏
— IndianPremierLeague (@IPL) October 3, 2021 " class="align-text-top noRightClick twitterSection" data="
The @imVkohli-led unit beat #PBKS by 6 runs & become the third team to reach the playoffs. 👍 👍 #RCBvPBKS
Scorecard 👉 https://t.co/0E5ehhSWRx pic.twitter.com/IHn4PanHwX
">.@RCBTweets march into #VIVOIPL Playoffs! 👏 👏
— IndianPremierLeague (@IPL) October 3, 2021
The @imVkohli-led unit beat #PBKS by 6 runs & become the third team to reach the playoffs. 👍 👍 #RCBvPBKS
Scorecard 👉 https://t.co/0E5ehhSWRx pic.twitter.com/IHn4PanHwX.@RCBTweets march into #VIVOIPL Playoffs! 👏 👏
— IndianPremierLeague (@IPL) October 3, 2021
The @imVkohli-led unit beat #PBKS by 6 runs & become the third team to reach the playoffs. 👍 👍 #RCBvPBKS
Scorecard 👉 https://t.co/0E5ehhSWRx pic.twitter.com/IHn4PanHwX
42 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ಗಳ ಸಹಿತ 57 ರನ್ಗಳಿಸಿ ಉತ್ತಮವಾಗಿ ಆಡುತ್ತಿದ್ದ ಮಯಾಂಕ್ ಅಗರ್ವಾಲ್ ಚಹಾಲ್ ಬೌಲಿಂಗ್ನಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿ ಸಿರಾಜ್ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾಗುವುದರೊಂದಿಗೆ ಪಂಜಾಬ್ ತಂಡದ ಪತನ ಆರಂಭವಾಯಿತು.
ಐಡೆನ್ ಮಾರ್ಕ್ರಮ್(20), ಸರ್ಫರಾಜ್ ಖಾನ್(0) ಶಾರುಕ್ ಖಾನ್(16) ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಕೊನೆಯ 2 ಓವರ್ಗಳಲ್ಲಿ 27 ರನ್ಗಳ ಅಗತ್ಯವಿತ್ತು. 19 ನೇ ಓವರ್ ಮಾಡಿದ ಸಿರಾಜ್ ಕೇವಲ 8 ರನ್ ನೀಡಿದರು. 20ನೇ ಓವರ್ನಲ್ಲಿ ಪಂಜಾಬ್ಗೆ ಗೆಲ್ಲಲು 19ರನ್ಗಳ ಅವಶ್ಯಕತೆಯಿತ್ತು. ಆದರೆ ಮೊದಲ ಎಸೆತದಲ್ಲೇ ಶಾರುಖ್ ಖಾನ್ ರನ್ಔಟ್ ಆದರು. ಉಳಿದ 5 ಎಸೆತಗಳಲ್ಲಿ ಹೆನ್ರಿಕ್ಸ್(11) ಮತ್ತು ಬ್ರಾರ್(3) 12 ರನ್ಗಳಿಸಲಷ್ಟೇ ಶಕ್ತವಾದರು.
ಹಲವು ತಂಡಗಳು ಈ ಪಿಚ್ನಲ್ಲಿ ರನ್ಗಳಿಸಲು ಪರದಾಡುತ್ತಿದ್ದರೂ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ ಗ್ಲೇನ್ ಮ್ಯಾಕ್ಸ್ವೆಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಪ್ರಸ್ತುತ ಆರ್ಸಿಬಿ 12 ಪಂದ್ಯಗಳಲ್ಲಿ 16 ಅಂಕ ಪಡೆದು ಪ್ಲೇ ಆಫ್ಗೆ ಅರ್ಹತೆ ಪಡೆದುಕೊಂಡಿತು. ಚೆನ್ನೈ ಮತ್ತು ಡೆಲ್ಲಿ ತಂಡಗಳು 12 ಪಂದ್ಯಗಳನ್ನಾಡಿ 18 ಅಂಕ ಹೊಂದಿದ್ದು ಮೊದಲೆರಡು ಸ್ಥಾನದಲ್ಲಿವೆ.
ಇದನ್ನು ಓದಿ:ಭಾರತ-ಆಸ್ಟ್ರೇಲಿಯಾ ಮಹಿಳೆಯರ ಅಹರ್ನಿಶಿ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯ..