ಮುಂಬೈ: ಭಾನುವಾರ ಆರ್ಸಿಬಿ ವಿರುದ್ಧದ ಪಂದ್ಯದ ಕೊನೆಯ ಓವರ್ನಲ್ಲಿ ಬರೋಬ್ಬರಿ 36 ರನ್ ಬಾರಿಸಲು ನಾಯಕ ಎಂಎಸ್ ಧೋನಿ ನೀಡಿದ ಸಲಹೆ ನೆರವಾಯಿತು ಎಂದು ರವೀಂದ್ರ ಜಡೇಜಾ ಹೇಳಿದ್ದಾರೆ.
ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದು ಆರೆಂಜ್ ಕ್ಯಾಪ್ ಪಡೆದಿರುವ ಹರ್ಷಲ್ ಪಟೇಲ್ ಎಸೆದ 20ನೇ ಓವರ್ನಲ್ಲಿ ಜಡೇಜಾ 5 ಸಿಕ್ಸರ್ ಮತ್ತು ಒಂದು ಬೌಂಡರಿ ಸೇರಿದಂತೆ 36ರನ್ ಬಾರಿಸಿದರು. ಒಂದು ಎಸೆತ ನೋಬಾಲ್ ಆಗಿದ್ದರಿಂದ ಕೊನೆಯ ಓವರ್ನಲ್ಲಿ 37 ರನ್ಗಳು ಸಿಎಸ್ಕೆ ಖಾತೆ ಸೇರಿದವು.
ಜಡೇಜಾ 28 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 4 ಬೌಂಡರಿಗಳ ನೆರವಿನಿಂದ ಅಜೇಯ 62 ರನ್ ಸಿಡಿಸಿ 150ರ ಆಸುಪಾಸಿನಲ್ಲಿದ್ದ ಮೊತ್ತವನ್ನು 191ಕ್ಕೇರಿಸಿ ಬೃಹತ್ ಮೊತ್ತದ ಗುರಿ ನೀಡಲು ನೆರವಾಗಿದ್ದರು. ತಾವೂ ಕೊನೆಯ ಓವರ್ನಲ್ಲಿ ಬ್ಯಾಟಿಂಗ್ ಮಾಡುವ ವೇಳೆ ಧೋನಿ ನೀಡಿದ ಸಲಹೆ ನೆರವಾಯಿತು ಎಂದು ಜಡ್ಡು ಪಂದ್ಯದ ಬಳಿಕ ಹೇಳಿದ್ದಾರೆ.
-
A no catch day and yet winning MOM!
— Chennai Super Kings - Mask P😷du Whistle P🥳du! (@ChennaiIPL) April 26, 2021 " class="align-text-top noRightClick twitterSection" data="
📹 what the man of Jaadu has to say!#CSKvRCB #WhistlePodu #Yellove 🦁💛 @imjadeja pic.twitter.com/ICZvByFSnU
">A no catch day and yet winning MOM!
— Chennai Super Kings - Mask P😷du Whistle P🥳du! (@ChennaiIPL) April 26, 2021
📹 what the man of Jaadu has to say!#CSKvRCB #WhistlePodu #Yellove 🦁💛 @imjadeja pic.twitter.com/ICZvByFSnUA no catch day and yet winning MOM!
— Chennai Super Kings - Mask P😷du Whistle P🥳du! (@ChennaiIPL) April 26, 2021
📹 what the man of Jaadu has to say!#CSKvRCB #WhistlePodu #Yellove 🦁💛 @imjadeja pic.twitter.com/ICZvByFSnU
" ನಾನು ಕೊನೆಯ ಓವರ್ನಲ್ಲಿ ಜೋರಾಗಿ ಹೊಡೆಯಲು ಎದುರು ನೋಡುತ್ತಿದ್ದೆ. ಮಹಿ ಭಾಯ್ ನನ್ನ ಬಳಿ ಹರ್ಷಲ್ ಆಫ್ ಸ್ಟಂಪ್ನ ಹೊರಗೆ ಬೌಲಿಂಗ್ ಮಾಡುತ್ತಾರೆ ಎಂದು ಹೇಳಿದರು. ನಾನು ಅದಕ್ಕೆ ಸಿದ್ಧನಾದೆ. ಅದೃಷ್ಟವಶಾತ್, ನಾನು ಎಲ್ಲವನ್ನು ಕನೆಕ್ಟ್ ಮಾಡಿದೆ. 191 ರನ್ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ಯಶಸ್ವಿಯಾದೆವು. ಆ ಓವರ್ ನಮಗೆ ತುಂಬಾ ನಿರ್ಣಾಯಕವಾಗಿತ್ತು. ನನಗೆ ಸ್ಟ್ರೈಕ್ ಸಿಕ್ಕರೆ ಹೆಚ್ಚು ರನ್ಗಳಿಸುತ್ತೇನೆ ಎಂದು ನನಗೆ ಗೊತ್ತಿತ್ತು" ಎಂದು ಜಡೇಜಾ ಪ್ರಶಸ್ತಿ ವಿತರಣೆ ವೇದಿಕೆಯಲ್ಲಿ ತಿಳಿಸಿದ್ದಾರೆ.
ಜಡೇಜಾ ಕೇವಲ ಬ್ಯಾಟಿಂಗ್ನಲ್ಲಿ ಮಾತ್ರವಲ್ಲದೆ, ಬೌಲಿಂಗ್ನಲ್ಲಿ 3 ಓವರ್ಗಳಲ್ಲಿ 13 ರನ್ ನೀಡಿ ಎಬಿ ಡಿ ವಿಲಿಯರ್ಸ್, ಮ್ಯಾಕ್ಸ್ವೆಲ್ ಮತ್ತು ವಾಷಿಂಗ್ಟನ್ ಸುಂದರ್ ವಿಕೆಟ್ ಪಡೆದರು. ಫೀಲ್ಡಿಂಗ್ನಲ್ಲೂ ಕಮಾಲ್ ಮಾಡಿದ ಅವರು ಡೇನಿಯಲ್ ಕ್ರಿಸ್ಚಿಯನ್ರನ್ನು ರನ್ಔಟ್ ಮಾಡಿದರು. ಒಟ್ಟಿನಲ್ಲಿ ತನ್ನ ಆಲ್ರೌಂಡ್ ಪ್ರದರ್ಶನದಿಂದ ಆರ್ಸಿಬಿಯನ್ನು ಮಣಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.
ಜಡೇಜಾ ನಮ್ಮನ್ನು ಏಕಾಂಗಿಯಾಗಿ ಸೋಲಿಸಿದರು.. ಆತನ ಆಟ ಖುಷಿ ತಂದಿದೆ : ಕೊಹ್ಲಿ