ETV Bharat / sports

ರಣಜಿ ಟ್ರೋಫಿ: ಅಸ್ಸೋಂ ವಿರುದ್ಧ ಪೃಥ್ವಿ ಶಾ ದ್ವಿಶತಕ, ಮೊದಲ ತ್ರಿಶತಕದ ಗುರಿ

author img

By

Published : Jan 11, 2023, 8:21 AM IST

Updated : Jan 11, 2023, 8:28 AM IST

ಯುವ ಕ್ರಿಕೆಟಿಗ ಪೃಥ್ವಿ ಶಾ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ನಿನ್ನೆ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಅಸ್ಸೋಂ ವಿರುದ್ಧದ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ್ದು, ಮೊದಲ ತ್ರಿಶತಕದ ನಿರೀಕ್ಷೆ ಮೂಡಿಸಿದ್ದಾರೆ.

Mumbai batter Prithvi Shaw
ಅಸ್ಸೋಂ ವಿರುದ್ಧ ಪೃಥ್ವಿ ಶಾ ದ್ವಿಶತಕ

ಗುವಾಹಟಿ(ಅಸ್ಸೋಂ): ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ಎಡವುತ್ತಿರುವ ಯುವ ಕ್ರಿಕೆಟಿಗ ಪೃಥ್ವಿ ಶಾ ರಣಜಿ ಟ್ರೋಫಿಯಲ್ಲಿ ಅಸ್ಸೋಂ ವಿರುದ್ಧದ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟ್​ ಬೀಸಿದರು. ಮೊದಲ ದಿನದಂದೇ ದ್ವಿಶತಕ ಸಾಧನೆ ಮಾಡಿರುವ ಶಾ, ವೈಯಕ್ತಿಕ ರನ್ ಗಳಿಕೆಯಲ್ಲಿ ತಮ್ಮದೇ ದಾಖಲೆಯನ್ನು ಉತ್ತಮಪಡಿಸಿಕೊಂಡರು. ಗುವಾಹಟಿಯಲ್ಲಿ ಅಸ್ಸೋಂ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಮುಂಬೈ ತಂಡದ ಪೃಥ್ವಿ ಶಾ ಅವರು ಮೊದಲ ದಿನದಂದೇ ಅಬ್ಬರಿಸಿದರು. 283 ಎಸೆತಗಳಲ್ಲಿ ಔಟಾಗದೇ 240 ರನ್ ಗಳಿಸಿದ್ದು, ಎರಡನೇ ದಿನದಾಟಕ್ಕೆ ವಿಕೆಟ್​ ಕಾಯ್ದುಕೊಂಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿಜೀವನದ ಹಿಂದಿನ ಅಜೇಯ 227 ರನ್​ಗಳನ್ನು ಶಾ ಮೀರಿದರು.

33 ಬೌಂಡರಿ ಮತ್ತು 1 ಸಿಕ್ಸರ್‌ ಸಿಡಿಸಿದ ಮುಂಬೈ ಆರಂಭಿಕ ಆಟಗಾರನ ಆರ್ಭಟಕ್ಕೆ ಅಸ್ಸೋಂ ತಂಡ ಸುಸ್ತಾಯಿತು. ಶಾ ಜೊತೆ ಕಣಕ್ಕಿಳಿದ ಮುಶೀರ್ ಖಾನ್ ಅವರೊಂದಿಗೆ ಮೊದಲ ವಿಕೆಟ್‌ಗೆ 123 ರನ್ ಕಲೆ ಹಾಕಿದರು. ಮುಶೀರ್​ ಖಾನ್​ 42 ಗಳಿಸಿದ್ದಾಗ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಅರ್ಮಾನ್​ ಜಫ್ಫರ್​ 27 ರನ್​ಗೆ ಔಟಾದರು. ಭಾರತ ಅಂತಾರಾಷ್ಟ್ರೀಯ ಟೆಸ್ಟ್​ ತಂಡದಿಂದ ಹೊರಬಿದ್ದಿರುವ ಹಿರಿಯ ಆಟಗಾರ ಅಜಿಂಕ್ಯ ರಹಾನೆ ಜೊತೆ ಸೇರಿದ ಪೃಥ್ವಿ ಶಾ ಮುರಿಯದ 200 ರನ್ ಜೊತೆಯಾಟ ಕಟ್ಟಿದ್ದಾರೆ. ಮೊದಲ ದಿನದಾಂತ್ಯದ ವೇಳೆಗೆ ಮುಂಬೈ ತಂಡ 2 ವಿಕೆಟ್‌ಗೆ 397 ರನ್ ಗಳಿಸಿದೆ.

ಪೃಥ್ವಿ ಶಾ ಬ್ಯಾಟಿಂಗ್​ ಅಬ್ಬರಕ್ಕೆ ಹೆಚ್ಚು ದಂಡಿಸಿಕೊಂಡವರು ಎಡಗೈ ಸ್ಪಿನ್ನರ್ ರೋಷನ್ ಆಲಂ. ಮೊದಲ ದಿನವೇ ಅವರು 76 ರನ್‌ಗಳನ್ನು ಚಚ್ಚಿದರು. 24 ಓವರ್​ ಎಸೆದ ಆಲಂ 112 ರನ್​ ಬಿಟ್ಟುಕೊಟ್ಟು ದುಬಾರಿಯಾದರು. ಈ ರಣಜಿ ಟ್ರೋಫಿಯಲ್ಲಿ ಪೃಥ್ವಿ ಶಾ ಗಳಿಸಿದ ಮೊದಲ ಶತಕ ಇದಾಗಿದೆ. ಕಳೆದ ಪಂದ್ಯಗಳ 7 ಇನ್ನಿಂಗ್ಸ್‌ಗಳಲ್ಲಿ ಕೇವಲ 160 ರನ್‌ಗಳನ್ನು ಮಾತ್ರ ಗಳಿಸಿದ್ದರು. 68 ಗರಿಷ್ಠ ಸ್ಕೋರ್ ಆಗಿತ್ತು.

ಭಾರತ ತಂಡ ಸೇರಲು ಪರದಾಟ: ಯುವ ಕ್ರಿಕೆಟಿಗ ಶಾ, ಭಾರತ ತಂಡದಲ್ಲಿ ಸ್ಥಾನ ಪಡೆಯಲು ಪರದಾಡುತ್ತಿದ್ದಾರೆ. ಟೆಸ್ಟ್​ ತಂಡದಲ್ಲಿ ಸ್ಥಾನ ನೀಡಲಾಗಿತ್ತಾದರೂ, ಉತ್ತಮ ನಿರ್ವಹಣೆ ತೋರದೇ ಹೊರಬಿದ್ದಿದ್ದರು. ದೇಶೀಯ ಟೂರ್ನಿಗಳಲ್ಲೂ ಉತ್ತಮ ಪ್ರದರ್ಶನ ನೀಡದ್ದರಿಂದ ಶಾ ನಿರ್ಲಕ್ಷ್ಯಕ್ಕೆ ಒಳಗಾಗಿದ್ದರು. ಕಳೆದ ವರ್ಷದ ಜುಲೈನಲ್ಲಿ ಆಡಿದ ಟಿ20 ಪಂದ್ಯ ಶಾ ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿದೆ.

ಈ ಋತುವಿನ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅಸ್ಸೋಂ ವಿರುದ್ಧವೇ ಶತಕ ಸಾಧನೆ ಮಾಡಿದ್ದ(134) ಶಾ, ಒಟ್ಟಾರೆ 332 ರನ್‌ಗಳೊಂದಿಗೆ ಟೂರ್ನಿಯಲ್ಲಿ ಎರಡನೇ ಅತ್ಯಧಿಕ ಸ್ಕೋರರ್​ ಸ್ಥಾನ ಪಡೆದಿದ್ದರು. ವಿಜಯ್ ಹಜಾರೆ ಟ್ರೋಫಿಯಲ್ಲಿ 7 ಇನ್ನಿಂಗ್ಸ್‌ಗಳಲ್ಲಿ 217 ರನ್ ಗಳಿಸಿದ್ದರು. ಶಾ ಲಿಸ್ಟ್ ಎ ಕ್ರಿಕೆಟ್‌ನಲ್ಲಿ 50ಕ್ಕಿಂತ ಹೆಚ್ಚು ಸರಾಸರಿ ಬ್ಯಾಟಿಂಗ್​ ಹೊಂದಿದ್ದಾರೆ.

ಇದನ್ನೂ ಓದಿ: IND vs SL 1st ODI: ವ್ಯರ್ಥವಾದ ಶನಕ ಶತಕ, ಭಾರತಕ್ಕೆ 67ರನ್​ಗಳ ಜಯ

Last Updated : Jan 11, 2023, 8:28 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.