ETV Bharat / sports

Ranji Trophy: ಆಂಧ್ರ ತಂಡ ತೊರೆಯುತ್ತಾರಾ ವಿಹಾರಿ... ಮಧ್ಯಪ್ರದೇಶ ಸೇರಲಿದ್ದಾರೆ ಈ ಇಬ್ಬರು ಕ್ರಿಕೆಟಿಗರು..

ಆಂಧ್ರದ ಬ್ಯಾಟ್ಸ್‌ಮನ್ ಹನುಮ ವಿಹಾರಿ ಜೊತೆಗೆ ದೆಹಲಿಯ ಎಡಗೈ ವೇಗದ ಬೌಲರ್ ಕುಲ್ವಂತ್ ಖೇಜ್ರೊಲಿಯಾ ಕೂಡ ಮುಂದಿನ ಋತುವಿನಿಂದ ತಮ್ಮ ತಂಡಕ್ಕಾಗಿ ಆಡಲಿದ್ದಾರೆ ಎಂದು ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ ಹೇಳಿಕೊಂಡಿದೆ.

Ranji Trophy
Ranji Trophy
author img

By

Published : Jun 28, 2023, 2:11 PM IST

ನವದೆಹಲಿ: ಭಾರತದ ಬ್ಯಾಟ್ಸ್‌ಮನ್ ಹನುಮ ವಿಹಾರಿ ಮುಂಬರುವ 2023-24ರ ಭಾರತ ದೇಶೀಯ ಕ್ರಿಕೆಟ್ ಋತುವಿನಲ್ಲಿ ಆಂಧ್ರ ಪ್ರದೇಶದಿಂದ ಹೊರಹೋಗಿ ಮಧ್ಯಪ್ರದೇಶ ಪರ ಆಡುವ ನಿರೀಕ್ಷೆಯಿದೆ. ವಿಹಾರಿ ಭಾರತ ತಂಡದ ಪರ 16 ಟೆಸ್ಟ್ ಪಂದ್ಯಗಳಲ್ಲಿ 839 ರನ್ ಗಳಿಸಿದ್ದಾರೆ. ಇದಲ್ಲದೇ ದೆಹಲಿಯ ಎಡಗೈ ವೇಗಿ ಕುಲ್ವಂತ್ ಖೇಜ್ರೊಲಿಯಾ ಕೂಡ ಮಧ್ಯಪ್ರದೇಶಕ್ಕೆ ತೆರಳುವ ಸಾಧ್ಯತೆ ಇದೆ.

ಬ್ಯಾಟ್ಸ್‌ಮನ್ ಹನುಮ ವಿಹಾರಿ 2016-17 ರಿಂದ 2020-21 ರ ಋತುವಿನಲ್ಲಿ ಮತ್ತು 2022-23 ರ ಋತುವಿನಲ್ಲಿ ಆಂಧ್ರ ಪ್ರದೇಶವನ್ನು ಪ್ರತಿನಿಧಿಸಿದ್ದರು. ಆದರೆ, ಕೆಲವು ವೈಯಕ್ತಿಕ ಕಾರಣಗಳಿಂದ ವಿಹಾರಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ವಿಹಾರಿ ಅಲ್ಲದೇ, ದೆಹಲಿಯ ಎಡಗೈ ವೇಗಿ ಕುಲ್ವಂತ್ ಖೇಜ್ರೊಲಿಯಾ ಕೂಡ ಮಧ್ಯಪ್ರದೇಶಕ್ಕೆ ತೆರಳುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ, ಮುಂಬರುವ ದೇಶೀಯ ಋತುವಿನಲ್ಲಿ ಚಂದ್ರಕಾಂತ್ ಪಂಡಿತ್ ಅವರಿಂದ ತರಬೇತಿ ಪಡೆಯಲಿದ್ದಾರೆ. ಪಂಡಿತ್ ಅವರ ತರಬೇತಿಯಲ್ಲಿ, ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಮುಂಬೈ ತಂಡವನ್ನು ಸೋಲಿಸುವ ಮೂಲಕ ಮಧ್ಯಪ್ರದೇಶ 2021-22 ರ ರಣಜಿ ಟ್ರೋಫಿಯನ್ನು ಗೆದ್ದುಕೊಂಡಿತ್ತು.

ಎಂಪಿಸಿಎ ಇಬ್ಬರು ಆಟಗಾರರಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು (ಎನ್‌ಒಸಿ) ಸ್ವೀಕರಿಸಿದೆಯೇ ಎಂದು ಕೇಳಿದಾಗ, ಖಾಂಡೇಕರ್ ಹೌದು ಎಂದು ಹೇಳಿದರು ಮತ್ತು ಪ್ರಕ್ರಿಯೆಯು ನಡೆಯುತ್ತಿದೆ ಎಂದು ಹೇಳಿದರು. ತಾತ್ವಿಕವಾಗಿ, ಎಂಪಿಸಿಎ ನಿರ್ಧಾರವನ್ನು ತೆಗೆದುಕೊಂಡಿದೆ. ತಮ್ಮ ಪ್ರತಿಕ್ರಿಯೆಗಾಗಿ ಆಂಧ್ರ ಕ್ರಿಕೆಟ್ ಸಂಸ್ಥೆ (ಎಸಿಎ) ಮತ್ತು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ಯಿಂದ ಮಾಹಿತಿ ಇನ್ನಷ್ಟೇ ಬರಬೇಕಿದೆ.

ವಿಹಾರಿ 2010 ರಲ್ಲಿ ಹೈದರಾಬಾದ್‌ನೊಂದಿಗೆ ತಮ್ಮ ದೇಶೀಯ ಕ್ರಿಕೆಟ್ ವೃತ್ತಿಜೀವನ ಪ್ರಾರಂಭಿಸಿದ್ದರು ಮತ್ತು 2015-16 ಋತುವಿನವರೆಗೆ ಹೈದರಾಬಾದ್​ಗಾಗಿ ಆಡಿದರು. ನಂತರ 2021-22 ಋತುವಿನಲ್ಲಿ ಹೈದರಾಬಾದ್‌ಗಾಗಿ ಆಡಿದ್ದಾರೆ, 2022-23ರ ರಣಜಿ ಟ್ರೋಫಿಯಲ್ಲಿ ವಿಹಾರಿ 14 ಇನ್ನಿಂಗ್ಸ್‌ಗಳಲ್ಲಿ 35ರ ಸರಾಸರಿಯಲ್ಲಿ 490 ರನ್ ಗಳಿಸಿದ್ದರು. ಜನವರಿಯಲ್ಲಿ ಇಂದೋರ್‌ನ ಹೋಲ್ಕರ್ ಕ್ರೀಡಾಂಗಣದಲ್ಲಿ ನಡೆದ ರಣಜಿ ಟ್ರೋಫಿ ಕ್ವಾರ್ಟರ್-ಫೈನಲ್‌ನಲ್ಲಿ ಬಲಗೈ ಬ್ಯಾಟ್ಸ್‌ಮನ್ ಮಧ್ಯಪ್ರದೇಶದ ವಿರುದ್ಧ ಕೊನೆಯ ಬಾರಿಗೆ ಆಂಧ್ರ ಪರ ಆಡಿದ್ದರು. ಮುಂದಿನ ವಾರ ಬೆಂಗಳೂರಿನಲ್ಲಿ ನಡೆಯಲಿರುವ ದುಲೀಪ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ವಿಹಾರಿ ಅವರು ದಕ್ಷಿಣ ವಲಯ ತಂಡದ ನಾಯಕರಾಗಿ ಮೈದಾನಕ್ಕೆ ಮರಳಲಿದ್ದಾರೆ.

ಮತ್ತೊಂದೆಡೆ, ಕುಲ್ವಂತ್ ಖೇಜ್ರೊಲಿಯಾ ಅವರು 2017 ರಲ್ಲಿ ಪ್ರಥಮ ದರ್ಜೆಯ ಚೊಚ್ಚಲ ಪಂದ್ಯದಿಂದ ದೆಹಲಿ ಪರ 14 ಪಂದ್ಯಗಳಲ್ಲಿ 42.28 ರ ಸರಾಸರಿಯಲ್ಲಿ 32 ವಿಕೆಟ್​ಗಳನ್ನು ಪಡೆದಿದ್ದಾರೆ. ಏಪ್ರಿಲ್ 23 ರಂದು ಐಪಿಎಲ್ 2023 ರಲ್ಲಿ ಈಡನ್ ಗಾರ್ಡನ್ಸ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್‌ ತಂಡದಲ್ಲಿ ಕೊನೆಯ ಕ್ರಿಕೆಟ್ ಪಂದ್ಯವನ್ನು ಆಡಿದ್ದರು.

ಇದನ್ನೂ ಓದಿ: India Tour of Ireland: ಭಾರತ ಐರ್ಲೆಂಡ್​ ಪ್ರವಾಸ, ಮೂರು ಟಿ20 ಸರಣಿಯ ವೇಳಾಪಟ್ಟಿ ಪ್ರಕಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.