ETV Bharat / sports

ರಣಜಿ ಕ್ರಿಕೆಟ್‌: ಜಾರ್ಖಂಡ್‌ ವಿರುದ್ಧ ಶತಕ ಸಿಡಿಸಿದ ಬಂಗಾಳ ಕ್ರೀಡಾ ಸಚಿವ ಮನೋಜ್​​ ತಿವಾರಿ - ಸಚಿವ ಮನೋಜ್ ತಿವಾರಿ

ಜಾರ್ಖಂಡ್​ ವಿರುದ್ಧದ ರಣಜಿ ಪಂದ್ಯದಲ್ಲಿ ಪಶ್ಚಿಮ ಬಂಗಾಳ ತಂಡದ ಬ್ಯಾಟರ್‌ ಮನೋಜ್ ತಿವಾರಿ ಎರಡನೇ ಇನ್ನಿಂಗ್ಸ್​​​ನಲ್ಲಿ ಶತಕ ಸಿಡಿಸಿ ಸಂಭ್ರಮಿಸಿದರು. ಮನೋಜ್‌ ತಿವಾರ್‌ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರದಲ್ಲಿ ಕ್ರೀಡಾ ಸಚಿವರು ಕೂಡಾ ಹೌದು.

Manoj Tiwary Century against Jharkhand
Manoj Tiwary Century against Jharkhand
author img

By

Published : Jun 10, 2022, 2:57 PM IST

ಆಲೂರು(ಬೆಂಗಳೂರು): ಪ್ರಸಕ್ತ ಸಾಲಿನ ರಣಜಿ ಕ್ವಾರ್ಟರ್​ ಫೈನಲ್​​ ಪಂದ್ಯದಲ್ಲಿ ಪಶ್ಚಿಮ ಬಂಗಾಳ ಬ್ಯಾಟರ್‌ ಮನೋಜ್ ತಿವಾರಿ ಅಬ್ಬರದ ಬ್ಯಾಟಿಂಗ್​ ಪ್ರದರ್ಶಿಸಿದರು. ಜಾರ್ಖಂಡ್​ ವಿರುದ್ಧ ನಡೆದ ಪಂದ್ಯದ ಮೊದಲ ಇನ್ನಿಂಗ್ಸ್​​​ನಲ್ಲಿ 73 ರನ್​​​​ಗಳಿಕೆ ಮಾಡಿದ್ದ ಇವರು​​ ಎರಡನೇ ಇನ್ನಿಂಗ್ಸ್​​​ನಲ್ಲಿ ಶತಕ ಬಾರಿಸಿದರು. ಉಭಯ ತಂಡಗಳ ನಡುವಿನ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದ್ದು, ಮೊದಲ ಇನ್ನಿಂಗ್ಸ್​​​ನಲ್ಲಿ ಮುನ್ನಡೆ ಪಡೆದುಕೊಂಡ ಕಾರಣ ಪ.ಬಂಗಾಳ ಸೆಮಿಫೈನಲ್​​ ಪ್ರವೇಶಿಸಿದೆ.

ಶತಕ ಸಿಡಿಸುತ್ತಿದ್ದಂತೆ ಶಿಖರ್​ ಧವನ್​ ರೀತಿಯಲ್ಲಿ ತೊಡೆತಟ್ಟಿದ ತಿವಾರಿ, ಮೈದಾನದಲ್ಲಿ ಖುಷಿ ವ್ಯಕ್ತಪಡಿಸಿದರು. ಸಚಿವರಾಗಿ ಆಯ್ಕೆಯಾದ ಬಳಿಕ ಇದು ಅವರ ಬ್ಯಾಟ್‌ನಿಂದ ಸಿಡಿದ ಮೊದಲ ಶತಕ. ಈ ಹಿಂದೆ 2019-20ರ ಸಾಲಿನಲ್ಲಿ ಹೈದರಾಬಾದ್​ ವಿರುದ್ಧದ ಇವರು ಅಜೇಯ 303 ರನ್​​​ಗಳಿಕೆ ಮಾಡಿದ್ದರು.

ಇದನ್ನೂ ಓದಿ: ರಣಜಿಯಲ್ಲಿ ಘರ್ಜಿಸಿದ ಬಂಗಾಳ: 9 ಮಂದಿಯಿಂದ ಅರ್ಧಶತಕ! 129 ವರ್ಷಗಳ ಹಿಂದಿನ ದಾಖಲೆ ಉಡೀಸ್!​

ಮನೋಜ್ ತಿವಾರಿ ಟೀಂ ಇಂಡಿಯಾ ಪರ 12 ಏಕದಿನ ಮತ್ತು 3 ಟಿ20 ಪಂದ್ಯಗಳನ್ನಾಡಿದ್ದಾರೆ. 125 ಪ್ರಥಮ ದರ್ಜೆ ಮತ್ತು 163 ಲಿಸ್ಟ್​ ಎ ಪಂದ್ಯಗಳನ್ನೂ ಆಡಿದ್ದು, ದೇಶೀಯ ಕ್ರಿಕೆಟ್​​ನಲ್ಲಿ 14,000 ರನ್​​​ಗಳಿಸಿದ್ದಾರೆ. ಇದೇ ಪಂದ್ಯದಲ್ಲಿ ಪ.ಬಂಗಾಳ ತಂಡದ ಒಂಬತ್ತು ಪ್ಲೇಯರ್ಸ್​ ಅರ್ಧಶತಕ ಸಿಡಿಸಿ ಮಿಂಚು ಹರಿಸಿದ್ದು, ಹೊಸ ದಾಖಲೆಯೂ ನಿರ್ಮಾಣವಾಗಿದೆ. ಇದರಲ್ಲಿ ಮನೋಜ್ ತಿವಾರಿಯೂ ಸೇರಿದ್ದಾರೆ.

ಕಳೆದ ವರ್ಷದ ಪ.ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ತಿವಾರಿ, ಟಿಎಂಸಿ ಪಕ್ಷದಿಂದ ಗೆಲುವು ಸಾಧಿಸಿ ಇದೀಗ ಕ್ರೀಡೆ ಮತ್ತು ಯುವ ವ್ಯವಹಾರಗಳ ಸಚಿವರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.