ದುಬೈ : ಭಾರತ ಅಂಡರ್-19 ತಂಡದ ರಾಜವರ್ಧನ್ ಹಂಗರ್ಗೆಕರ್ ಅವರಿಗೆ 2022ರ ಕಿರಿಯರ್ ವಿಶ್ವಕಪ್ನ 2ನೇ ಲೀಗ್ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಕೊನೆಯ ಓವರ್ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಆಟಕ್ಕೆ ನಿಸಾನ್ ಟೂರ್ನಿ ಶ್ರೇಷ್ಠ ಪ್ರಶಸ್ತಿ ಗೌರವ ಒಲಿದು ಬಂದಿದೆ.
ನಾಯಕ ಯಶ್ ಧುಲ್, ಉಪನಾಯಕ ರಶೀದ್ ಸೇರಿದಂತೆ ಸ್ಟಾರ್ ಆಟಗಾರರ ಅನುಪಸ್ಥಿತಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದಿತ್ತು. ಆರಂಭಿಕ ಬ್ಯಾಟರ್ ಅಂಗ್ಕೃಶ್ ರಘವಂಶಿ(79) ಮತ್ತು ಹರ್ನೂರ್ ಸಿಂಗ್(88) ಮೊದಲ ವಿಕೆಟ್ಗೆ 164 ರನ್ಗಳ ಜೊತೆಯಾಟ ನೀಡಿ ಉತ್ತಮ ಆರಂಭ ಒದಗಿಸಿಕೊಟ್ಟಿದ್ದರು. ಇವರ ನಂತರ ಬಂದ ರಾಜ್ ಬಾವಾ 42, ನಾಯಕ ನಿಶಾಂತ್ ಸಿಂಧು 36 ರನ್ಗಳಿಸಿ ಔಟಾಗಿದ್ದರು.
-
6⃣6⃣6⃣ 💥
— ICC (@ICC) February 8, 2022 " class="align-text-top noRightClick twitterSection" data="
Rajvardhan Hangargekar's monster-hitting against Ireland has been voted the winner of @Nissan Play of the Tournament 🎉 pic.twitter.com/rsQ3qrInyG
">6⃣6⃣6⃣ 💥
— ICC (@ICC) February 8, 2022
Rajvardhan Hangargekar's monster-hitting against Ireland has been voted the winner of @Nissan Play of the Tournament 🎉 pic.twitter.com/rsQ3qrInyG6⃣6⃣6⃣ 💥
— ICC (@ICC) February 8, 2022
Rajvardhan Hangargekar's monster-hitting against Ireland has been voted the winner of @Nissan Play of the Tournament 🎉 pic.twitter.com/rsQ3qrInyG
ಆದರೆ, ಸ್ಫೋಟಕ ಬ್ಯಾಟಿಂಗ್ ನಡೆಸಿದ್ದ ರಾಜವರ್ಧನ್ 17 ಎಸೆತಗಳಲ್ಲಿ 5 ಸಿಕ್ಸರ್ ಮತ್ತು ಒಂದು ಬೌಂಡರಿ ಸಹಿತ 39 ರನ್ಗಳಿಸಿದ್ದರು. ಅದರಲ್ಲೂ ಕೊನೆಯ ಓವರ್ನಲ್ಲಿ ಐರ್ಲೆಂಡ್ನ ಮುಜಾಮಿಲ್ ಶೆರಾಜ್ ಅವರ ಓವರ್ನಲ್ಲಿ ಮುಗಿಲೆತ್ತರದ 3 ಸಿಕ್ಸರ್ಗಳ ಸಹಿತ 23 ರನ್ ಚಚ್ಚಿದ್ದರು. ಈ ಆಟಕ್ಕೆ ಐಸಿಸಿ ನಿಸಾನ್ ಪ್ಲೇ ಆಫ್ ದ ಟೂರ್ನಮೆಂಟ್ ಲಭಿಸಿದೆ.
ಭಾರತ ಆ ಪಂದ್ಯದಲ್ಲಿ 307 ರನ್ಗಳಿಸಿದರೆ, ಇದಕ್ಕುತ್ತರವಾಗಿ ಐರ್ಲೆಂಡ್ 133 ರನ್ಗಳಿಗೆ ಆಲೌಟ್ ಆಗುವ ಮೂಲಕ 174 ರನ್ಗಳಿಂದ ಸೋಲು ಕಂಡಿತ್ತು. ಭಾರತದ ಯುವ ಆಟಗಾರರು ಲೀಗ್ನಲ್ಲಿ ಎಲ್ಲಾ ಮೂರು ಪಂದ್ಯ ಮತ್ತು ಕ್ವಾರ್ಟರ್ನಲ್ಲಿ ಬಾಂಗ್ಲಾದೇಶ, ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾ ಹಾಗೂ ಫೈನಲ್ನಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ 5ನೇ ಬಾರಿ ದೇಶಕ್ಕೆ ಕಿರಿಯರ ವಿಶ್ವಕಪ್ ತಂದುಕೊಟ್ಟಿತ್ತು.