ETV Bharat / sports

ಮಳೆಗೆ ವಿಶ್ವಕಪ್​ನ 4 ಪಂದ್ಯಗಳು ಡಮಾರ್.. ತಾಳ ತಪ್ಪುತ್ತಾ ತಂಡಗಳ ಸೆಮೀಸ್​​ ಲೆಕ್ಕಾಚಾರ?

ವಿಶ್ವಕಪ್​ಗೆ ಮಳೆ ಮೇಲಿಂದ ಮೇಲೆ ಹೊಡೆತ ನೀಡುತ್ತಿದೆ. ಈಗಾಗಲೇ 4 ಪಂದ್ಯಗಳನ್ನು ವರುಣ ಆಹುತಿ ಪಡೆದಾಗಿದೆ. ನಿನ್ನೆಯ ಇಂಗ್ಲೆಂಡ್​- ಆಸ್ಟ್ರೇಲಿಯಾ, ಐರ್ಲೆಂಡ್​- ಅಫ್ಘಾನಿಸ್ತಾನ ನಡುವಣ ಪಂದ್ಯಗಳೂ ಮಳೆಗೆ ರದ್ದಾಗಿವೆ.

Rain interrupts T20 World Cup
ಮಳೆಗೆ ವಿಶ್ವಕಪ್​ನ 4 ಪಂದ್ಯಗಳು ಡಮಾರ್
author img

By

Published : Oct 29, 2022, 11:05 AM IST

ಮೆಲ್ಬೋರ್ನ್(ಆಸ್ಟ್ರೇಲಿಯಾ): ವಿಶ್ವಕಪ್​ಗೆ ಮಳೆ ಪದೇ ಪದೆ ಅಡ್ಡಿಯಾಗುತ್ತಿದೆ. ಈಗಾಗಲೇ ಎರಡೂ ಗುಂಪುಗಳ ತಂಡಗಳ ಮಧ್ಯೆ 4 ಪಂದ್ಯಗಳು ವರುಣಾರ್ಭಟಕ್ಕೆ ಕೊಚ್ಚಿಕೊಂಡು ಹೋಗಿವೆ. ನಿನ್ನೆ ನಡೆಯಬೇಕಿದ್ದ ಅಫ್ಘಾನಿಸ್ತಾನ- ಐರ್ಲೆಂಡ್​, ಇಂಗ್ಲೆಂಡ್​- ಆಸ್ಟ್ರೇಲಿಯಾ ನಡುವಿನ ಪಂದ್ಯ ಮಳೆಗೆ ರದ್ದಗಿದ್ದು ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿತು.

ಸೆಮಿಫೈನಲ್​ ಹಂತಕ್ಕೇರಲು ತಂಡಗಳಿಗೆ ನಿರ್ಣಾಯಕ ಪಂದ್ಯಗಳಾಗಿದ್ದು, ಮಳೆ ಅಡ್ಡಿಯಾಗುತ್ತಿರುವುದು ಆತಂಕಕ್ಕೀಡು ಮಾಡಿದೆ. ನಿನ್ನೆ ಆಸ್ಟ್ರೇಲಿಯಾ ವಿರುದ್ಧದ ಪಂದ್ಯವನ್ನು ಮಳೆ ಆಪೋಷನ ಪಡೆದಿದ್ದಕ್ಕೆ ಇಂಗ್ಲೆಂಡ್​ ನಾಯಕ ಜೋಸ್​ ಬಟ್ಲರ್​ ಬೇಸರ ವ್ಯಕ್ತಪಡಿಸಿದ್ದಾರೆ.

ಮೆಲ್ಬರ್ನ್​ ಮೈದಾನದಲ್ಲಿ ನಡೆಯಬೇಕಿದ್ದ ಪಂದ್ಯ ಒಂದೂ ಎಸೆತ ಕಾಣದೇ ಪೂರ್ಣ ಪಂದ್ಯವನ್ನೇ ರದ್ದು ಮಾಡಲಾಯಿತು. ಇದು ಇಂಗ್ಲೆಂಡ್​ಗೆ ಸೆಮಿಫೈನಲ್​ ಹಾದಿಯನ್ನು ಕಠಿಣ ಮಾಡಲಿದೆ. ಕಳೆದ ಪಂದ್ಯ ಮಳೆ ಕಾರಣಕ್ಕೆ ಡಕ್ವರ್ಥ್ ಲೂಯಿಸ್​ ನಿಯಮದಡಿ ಐರ್ಲೆಂಡ್​ ಗೆದ್ದುಕೊಂಡಿತು.

ಮಳೆಯ ಆಟಕ್ಕೆ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ನಿರಾಶೆಗೊಂಡಿದ್ದಾರೆ. ಆದರೆ, ಪಂದ್ಯವನ್ನು ರದ್ದು ಮಾಡುವುದು ಅನಿವಾರ್ಯವಾದ ಕಾರಣ ಅವರು ನಿರ್ಧಾರವನ್ನು ಒಪ್ಪಿಕೊಂಡಿದ್ದಾರೆ. ನಾವೆಲ್ಲರೂ ಕ್ರಿಕೆಟ್​ ಆಡಲು ಬಯಸುತ್ತೇವೆ. ಆದರೆ, ಸುರಕ್ಷತೆಯೂ ಅಗತ್ಯವಾದ ಕಾರಣ ಪಂದ್ಯ ರದ್ದು ಮಾಡಲಾಗಿದೆ. ಅಂಪೈರ್​ಗಳ ತೀರ್ಮಾನವನ್ನು ಒಪ್ಪಿಕೊಳ್ಳುವೆ ಎಂದಿದ್ದಾರೆ.

ಸೆಮಿಫೈನಲ್​ ಹಾದಿ ತುಸು ಕಠಿಣವಾಗಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಬಟ್ಲರ್​, ಮಳೆಯನ್ನು ತಡೆಯಲು ಸಾಧ್ಯವಿಲ್ಲ. ನಮಗೆ ಇನ್ನೂ 2 ಪಂದ್ಯಗಳಿವೆ. ಅವುಗಳನ್ನು ಜಯಿಸಿ ಸೆಮೀಸ್​ಗೆ ತೇರ್ಗಡೆ ಪಡೆಯುತ್ತೇವೆ ಎಂದರು.

ಇಂಗ್ಲೆಂಡ್​- ಆಸ್ಟ್ರೇಲಿಯಾ ಪಂದ್ಯದ ಬಳಿಕ ಅದೇ ಮೈದಾನದಲ್ಲಿ ನಡೆಯಬೇಕಿದ್ದ ಐರ್ಲೆಂಡ್​- ಆಫ್ಘಾನಿಸ್ತಾನ ಪಂದ್ಯವೂ ಕೂಡ ರದ್ದಾಗಿತ್ತು. ಆಫ್ಘನ್​ ಈಗಾಗಲೇ 3 ಪಂದ್ಯಗಳಲ್ಲಿ 2 ಅನ್ನು ಮಳೆ ಕಾರಣಕ್ಕಾಗಿಯೇ ಕಳೆದುಕೊಂಡು 2 ಅಂಕದೊಂದಿಗೆ ಪಟ್ಟಿಯಲ್ಲಿ ಕೊನೆಯಲ್ಲಿದೆ.

ಓದಿ: ಟಿ20 ವಿಶ್ವಕಪ್​​: ಆಸ್ಟ್ರೇಲಿಯಾ-ಇಂಗ್ಲೆಂಡ್​ ಪಂದ್ಯವೂ ಮಳೆಯಿಂದ ರದ್ದು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.