ETV Bharat / sports

ರನ್​ ಬರದ ಬಗ್ಗೆ ನನಗೆ ಬೇಸರ ಇತ್ತು: ವಿರಾಟ್​ ಕೊಹ್ಲಿ

ಅಂತಾರಾಷ್ಟ್ರೀಯ 75ನೇ ಶತಕ ದಾಖಲಿಸಿದ ವಿರಾಟ್​ - ವಿರಾಟ್​ ಇನ್ನಿಂಗ್ಸ್​ ಕುರಿತು ರಾಹುಲ್​ ಡ್ರಾವಿಡ್​ ಸಂದರ್ಶನ - ಮೂರು ವರ್ಷದ ನಂತರ ಕೊಹ್ಲಿ​ ಬ್ಯಾಟ್​ ನಿಂದ ಶತಕ ದಾಖಲು

author img

By

Published : Mar 14, 2023, 5:50 PM IST

Rahul Dravid  conversation with  Virat Kohli
ವಿರಾಟ್​ ಕೊಹ್ಲಿ

ಅಹಮದಾಬಾದ್ (ಗುಜರಾತ್​): ವಿರಾಟ್​ ಬ್ಯಾಟಿಂಗ್​ ಫಾರ್ಮ್​ ಬಗ್ಗೆ ಎರಡು ವರ್ಷಗಳಿಂದ ಟೀಕೆಗಳು ಕೇಳಿ ಬರುತ್ತಿದ್ದವು. ಟಿ 20 ವಿಶ್ವ ಕಪ್​ ನಂತರ ಚುಟುಕು ಹಾಗೂ ಸೀಮಿತ ಓವರ್​ಗಳ ಪಂದ್ಯದಲ್ಲಿ ವಿರಾಟ್​ ಫಾರ್ಮ್​ಗೆ ಮರಳಿದ್ದರು. ಟೆಸ್ಟ್​ನಲ್ಲಿ ಅವರ ರನ್​ ಬರ ಮುಂದುವರೆದಿತ್ತು. ಈ ಬಗ್ಗೆ ಟೀಕೆಗಳು ಕೇಳಿ ಬರುತ್ತಿದ್ದವು. ಈ ವರ್ಷದ ಬಾರ್ಡರ್​ ಗವಾಸ್ಕರ್​ ಟ್ರೊಫಿಯಲ್ಲೂ ಸತತ ಮೂರು ಪಂದ್ಯಗಳಿಂದ ಬೃಹತ್​ ರನ್​ ಗಳಿಸಲು ಪರದಾಡಿದ್ದರು.

ಕೊನೆಯ ಪಂದ್ಯದಲ್ಲಿ ವಿರಾಟ್​ ಶತಕ ಗಳಿಸಿ ಮೂರಂಕಿಯ ಮೊತ್ತವನ್ನು ಗಳಿಸುವಲ್ಲಿ ಯಶಸ್ವಿಯಾದರು. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಸಿಸ್​ ವಿರುದ್ಧ ನಡೆದ ಅಂತಿಮ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಟೆಸ್ಟ್​ ಕ್ರಿಕೆಟ್​ನ 28ನೇ ಶತಕ ದಾಖಲಿಸಿದರು. 3.5 ವರ್ಷಗಳ ನಂತರ ವಿರಾಟ್​ ಬ್ಯಾಟ್​ನಿಂದ ಬಂದ ಶತಕ ಇದಾಗಿತ್ತು.

ಮೂರು ವರ್ಷಗಳಿಂದ ದೊಡ್ಡ ಮೊತ್ತದ ಸ್ಕೋರ್​ ಮಾಡುವಲ್ಲಿ ವಿಫಲವಾಗುತ್ತಿರುವ ಬಗ್ಗೆ ಸ್ವತಃ ವಿರಾಟ್​ ಕೊಹ್ಲಿ ಅವರಿಗೇ ಬೇಸರ ಇತ್ತೆಂದು ಅವರೇ ಹೇಳಿಕೊಂಡಿದ್ದಾರೆ. ಬಿಸಿಸಿಐ ಟಿವಿಗಾಗಿ ಕೋಚ್​ ರಾಹುಲ್​ ದ್ರಾವಿಡ್​ ಮಾಡಿದ ಸಂದರ್ಶನದಲ್ಲಿ ಮಾತನಾಡಿದ ವಿರಾಟ್,​ ಈ ವಿಚಾರವನ್ನು ಹೊರಹಾಕಿದ್ದಾರೆ. ಹಾಗೇ ಶತಕದಾಟದ ಬಗ್ಗ ಮುಕ್ತವಾಗಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಶತಕ ಗಳಿಸದಿದ್ದಾಗ ನಿಮ್ಮ ಮನಸ್ಸಿನಲ್ಲಿ ಏನಾಗುತ್ತಿತ್ತು ಎಂದು ರಾಹುಲ್​ ದ್ರಾವಿಡ್​ ಕೇಳಿದ ಪ್ರಶ್ನೆಗೆ, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಬೃಹತ್​ ಮೊತ್ತವನ್ನು ತಂಡಕ್ಕೆ ಕೊಡಲಾಗುತ್ತಿಲ್ಲ ಎಂಬ ಬೇಸರ ನನ್ನಲ್ಲಿಯೂ ಇತ್ತು. ಒಬ್ಬ ಬ್ಯಾಟರ್​ಗೆ ತಾನು ರನ್​ ಗಳಿಸುತ್ತಿಲ್ಲ ಎಂಬ ಅರಿವು ಆಗುತ್ತದೆ. ನಾನು ಮೂರಂಕಿ ತಲುಪುವಲ್ಲಿ ಎಡವುತ್ತಿದ್ದ ಬಗ್ಗೆ ನನಗೆ ಬೇಸರ ಇತ್ತು. 40-45 ರನ್​ಗಳಿಗೆ ಔಟ್​ ಆಗುತ್ತಿದ್ದಾಗ ತಂಡಕ್ಕೆ ಅಗತ್ಯ ಸಮಯದಲ್ಲಿ ರನ್​ ಕೊಡುಗೆ ನೀಡಲಾಗುತ್ತಿಲ್ಲ ಎಂಬ ಹತಾಶೆ ನನ್ನಲ್ಲಿ ಮೂಡಿತ್ತು. ಈ ಕ್ರೀಸ್​ಗೆ ಬಂದಾಗ 150+ ರನ್​ ಮಾಡಬಹುದು ಎಂಬ ಭರವಸೆ ನನಗೆ ಬಂದಿತ್ತು ಹಾಗೂ ಅದು ಸಾಧ್ಯವಾಯಿತು ಎಂದು ವಿರಾಟ್​ ಹೇಳಿಕೊಂಡಿದ್ದಾರೆ.

ನಮ್ಮ ಬ್ಯಾಟ್​ನಿಂದ ಸ್ಕೋರ್​ ಬರದಿದ್ದಾಗ ಹೋಟೆಲ್ ರೋಮ್​ ನಿಂದ ಹೊರಬರಲು ಕಷ್ಟವಾಗುತ್ತದೆ. ಹೊರಗಿನ ಜನರು, ನಮ್ಮ ಬಸ್​ ಡ್ರೈವರ್​, ಲಿಫ್ಟ್​ ಹುಡುಗ ಎಲ್ಲರೂ ಎಂದು ಶತಕ ಮಾಡುತ್ತೀರಿ ಎಂದು ಕೇಳುತ್ತಾರೆ. ಇವೆಲ್ಲವೂ ಒತ್ತಡದ ರೀತಿ ನಮಗೆ ಭಾಸವಾಗುತ್ತದೆ. ಆದರೆ ಅವರ ನಿರೀಕ್ಷೆಯೂ ತಪ್ಪಲ್ಲ. ಈ ಒತ್ತಡದಿಂದ ಹೊರಬರಲು ಪಿಚ್​ನಲ್ಲಿ ಹೆಚ್ಚು ಹೊತ್ತು ಕಳೆಯಬೇಕಾಗುತ್ತದೆ ಎಂದು ಕೊಹ್ಲಿ ಹೇಳಿದ್ದಾರೆ.

ನಾನು ಎಂದಿಗೂ ದಾಖಲೆಗಳಿಗೋಸ್ಕರ ಆಡುವುದಿಲ್ಲ. ಬಹಳಷ್ಟು ಜನರು ನನ್ನನ್ನು ಕೇಳುತ್ತಾರೆ - ನೀವು ಶತಕಗಳನ್ನು ಹೇಗೆ ಗಳಿಸುತ್ತೀರಿ? ಎಂದು, ತಂಡಕ್ಕಾಗಿ ರನ್​ ಮಾಡುವಾಗ ದಾಖಲೆಗಳು ತಾನೇ ತಾನಾಗಿ ಆಗುತ್ತವೆ. ತಂಡಕ್ಕಾಗಿ ಬ್ಯಾಟಿಂಗ್​ ಮಾಡಬೇಕು, ಆಗ ರನ್​ ಸಲೀಸಾಗಿ ಪಡೆಯಬಹುದು. ನಾನು ಯಾವಾಗಲೂ ತಂಡಕ್ಕಾಗಿ ಸಾಕಷ್ಟು ರನ್​ ಗಳಿಸಲು ಪ್ರಯತ್ನಿಸುತ್ತೇನೆ. ಮೈಲಿಗಲ್ಲು ಎಂದಿಗೂ ನನ್ನ ಗಮನ ಅಲ್ಲ ಎಂದಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಮುನ್ನ ಶತಕ ದಾಖಲಿಸಿರುವುದು ನನಗೆ ಭರವಸೆ ತಂದಿದೆ. ನಾನು ಈ ಶತಕದಿಂದ ತುಂಬಾ ನಿರಾಳನಾಗಿದ್ದೇನೆ ಮತ್ತು ಫೈನಲ್​ನಲ್ಲಿ ಆಡಲು ಉತ್ಸುಕನಾಗಿದ್ದೇನೆ ಎಂದು ವಿರಾಟ್​ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: WTC 2023: ಭಾರತೀಯ ಆಟಗಾರರ ಪ್ರದರ್ಶನ ಹೀಗಿದೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.