ETV Bharat / sports

ಕೋಚ್​​ ರಾಹುಲ್​, ಮೆಂಟರ್​ ಧೋನಿ: ಈ ತಂತ್ರ ವರ್ಕೌಟ್​ ಆಗಲಿದೆ ಎಂದ ಎಂಎಸ್​ಕೆ ಪ್ರಸಾದ್ - ಕೋಚ್​ ಆಗಿ ರಾಹುಲ್​ ದ್ರಾವಿಡ್​

ಟೀಂ ಇಂಡಿಯಾ ಕೋಚ್​ ಯಾರಾಗಲಿದ್ದಾರೆ ಎಂಬ ಕುತೂಹಲ ಈಗಾಗಲೇ ಶುರುವಾಗಿದೆ. ಇದರ ನಡುವೆ ಬಿಸಿಸಿಐ ಆಯ್ಕೆ ಸಮಿತಿ ಮಾಜಿ ಸದಸ್ಯ ಎಂಎಸ್​​ಕೆ ಪ್ರಸಾದ್​ ತಮ್ಮ ಮನದಾಳ ಹಂಚಿಕೊಂಡಿದ್ದಾರೆ.

Rahul, Dhoni
Rahul, Dhoni
author img

By

Published : Sep 30, 2021, 7:16 PM IST

ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ಐಸಿಸಿ ಟಿ-20 ವಿಶ್ವಕಪ್​ ಮುಕ್ತಾಯವಾಗುತ್ತಿದ್ದಂತೆ ಟೀಂ ಇಂಡಿಯಾ ಮುಖ್ಯ ಕೋಚ್​ ರವಿಶಾಸ್ತ್ರಿ ಅವರ ಅವಧಿ ಮುಕ್ತಾಯಗೊಳ್ಳಲಿದೆ. ಇದಾದ ಬಳಿಕ ತಂಡಕ್ಕೆ ನೂತನ ಕೋಚ್​ ಆಗಿ ಯಾರು ಆಯ್ಕೆಯಾಗಲಿದ್ದಾರೆಂಬ ಕುತೂಹಲ ಈಗಾಗಲೇ ಶುರುವಾಗಿದೆ. ಇದರ ಬೆನ್ನಲ್ಲೇ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥರಾಗಿದ್ದ ಎಂಎಸ್​ಕೆ ಪ್ರಸಾದ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

Rahul, Dhoni
ಎಂಎಸ್‌ಕೆ ಪ್ರಸಾದ್

ಟೀಂ ಇಂಡಿಯಾಗೆ ಮುಖ್ಯ ಕೋಚ್​ ಆಗಿ ರಾಹುಲ್​​ ದ್ರಾವಿಡ್ ಹಾಗೂ ಮಾರ್ಗದರ್ಶಕರಾಗಿ ಮಹೇಂದ್ರ ಸಿಂಗ್ ಧೋನಿ ಆಯ್ಕೆಯಾಗಬೇಕು. ಇದು ತಂಡಕ್ಕೆ ವರದಾನವಾಗಲಿದೆ ಎಂದಿದ್ದಾರೆ. ರವಿಶಾಸ್ತ್ರಿ ಅಧಿಕಾರ ಅವಧಿ ನಂತರ ನೂತನ ಕೋಚ್​ ಆಗಿ ದ್ರಾವಿಡ್​​ ಅಧಿಕಾರ ವಹಿಸಿಕೊಳ್ಳುವುದು ಸೂಕ್ತ ಎಂದಿರುವ ಎಂಎಸ್​ಕೆ ಪ್ರಸಾದ್​, ಧೋನಿ ಪರ ಕೂಡ ಬ್ಯಾಟ್​ ಬೀಸಿದ್ದಾರೆ.

ನನ್ನ ಮನಸ್ಸಿನಲ್ಲೇ ಇದೇ ಭಾವನೆ ಇದೆ. ಇತ್ತೀಚೆಗೆ ನ್ನ ಸಹೋದ್ಯೋಗಿಗಳು ನನಗೆ ಸವಾಲು ಹಾಕಿದ್ದರು. ರವಿ ಭಾಯ್​ ನಂತರ ಧೋನಿ ಮಾರ್ಗದರ್ಶಕರಾಗಿ ಹಾಗೂ ದ್ರಾವಿಡ್​ ತರಬೇತುದಾರರಾಗಿ ತಂಡಕ್ಕೆ ಬರಬೇಕು ಎಂದಿದ್ದಾರೆ.

ಇದನ್ನೂ ಓದಿ: ಐದು ವರ್ಷಗಳ ನಂತರ IPLನಲ್ಲಿ ಕೊಹ್ಲಿ ರನೌಟ್: ನೋಡಿ ಪರಾಗ್‌ Direct Hit!

ಸದ್ಯ ನಡೆಯುತ್ತಿರುವ ಐಪಿಎಲ್​​ ಕಾಮೆಂಟರಿ ವೇಳೆ ನನ್ನ ಸಹೋದ್ಯೋಗಿಗಳು ಈ ಚರ್ಚೆಯಲ್ಲಿ ಭಾಗಿಯಾಗಿದ್ದರು. ರಾಹುಲ್​ ದ್ರಾವಿಡ್​ ಸ್ಫೂರ್ತಿದಾಯಕ ಹಾಗೂ ಅಧ್ಯಯನಶೀಲ ವ್ಯಕ್ತಿಯಾಗಿರುವ ಕಾರಣ, ರವಿ ಭಾಯ್​ ಯುಗದ ನಂತರ ಅವರು ಬರಬೇಕು ಎಂದರು.ಒಂದು ವೇಳೆ ಅವರು ಕೋಚ್​ ಆಗದಿದ್ದರೆ ನನಗೆ ತುಂಬಾ ನಿರಾಶೆಯಾಗುತ್ತದೆ ಎಂದಿದ್ದಾರೆ. ಟೀಂ ಇಂಡಿಯಾ ಕೋಚ್​ ಸ್ಥಾನಕ್ಕಾಗಿ ಈಗಾಗಲೇ ಕನ್ನಡಿಗರಾದ ಅನಿಲ್ ಕುಂಬ್ಳೆ, ರಾಹುಲ್​ ದ್ರಾವಿಡ್​ ಸೇರಿದಂತೆ ವಿವಿಎಸ್​ ಲಕ್ಷ್ಮಣ್​, ವಿರೇಂದ್ರ ಸೆಹ್ವಾಗ್ ಹೆಸರು ಕೇಳಿ ಬಂದಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.