ಕರಾಚಿ: ಪಿಎಸ್‌ಎಲ್ ಫ್ರಾಂಚೈಸಿಗಳು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ (ಪಿಸಿಬಿ) ಪತ್ರ ಬರೆದಿದ್ದು, ಆರನೇ ಆವೃತ್ತಿಯ ಲೀಗ್ ಮರುನಿಗದಿಪಡಿಸಿದ ಪಂದ್ಯಗಳನ್ನು ಕರಾಚಿಯಿಂದ ಯುಎಇಗೆ ಸ್ಥಳಾಂತರಿಸುವಂತೆ ಕೋರಿವೆ.
ಆಟಗಾರರು ಮತ್ತು ಅಧಿಕಾರಿಗಳಲ್ಲಿ ಕೋವಿಡ್ ಪ್ರಕರಣಗಳಿಂದಾಗಿ ಪಿಸಿಬಿ, ಪಿಎಸ್ಎಲ್ ಅನ್ನು ಮಾರ್ಚ್ 4 ರಂದು ಹಠಾತ್ತನೆ ಮುಂದೂಡಿತ್ತು. ಈಗ ದಿನಾಂಕ ಮರು ನಿಗದಿಯಾಗಿದ್ದು, ಜೂನ್ 1 ರಿಂದ ಜೂನ್ 20 ರವರೆಗೆ ಈ ಟೂರ್ನಿ ನಡೆಯಲಿದೆ. ಪಂದ್ಯಾವಳಿಯ ಮರುನಿಗದಿಪಡಿಸಿದ ಉಳಿದ ಪಂದ್ಯಗಳನ್ನು ಕರಾಚಿಯಿಂದ ಯುಎಇಗೆ ಸ್ಥಳಾಂತರಿಸುವಂತೆ ಎಲ್ಲಾ ಆರು ತಂಡಗಳ ಪ್ರಾಂಚೈಸಿಗಳು ಬರೆದಿದ್ದ ಪತ್ರವನ್ನು ಕಳೆದ ವಾರ ಮಂಡಳಿಗೆ ಕಳುಹಿಸಲಾಗಿದೆ.
ಮೂಲ ಯೋಜನೆಯ ಪ್ರಕಾರ, ಎಲ್ಲಾ ತಂಡಗಳು ಮೇ 23 ರೊಳಗೆ ಕರಾಚಿಗೆ ಬಂದು, ತಮ್ಮ ಕಡ್ಡಾಯ ಏಳು ದಿನಗಳ ಕ್ವಾರಂಟೈನ್ ಪ್ರಾರಂಭಿಸಲಿವೆ. ಜೂನ್ 2-14ರ ನಡುವೆ 16 ಲೀಗ್ ಹಂತದ ಪಂದ್ಯಗಳು ನಡೆಯಲಿದ್ದು, ಪ್ಲೇ ಆಫ್ ಪಂದ್ಯಗಳು ಜೂನ್ 16 ಮತ್ತು ಜೂನ್ 18 ರಂದು ನಡೆಯಲಿವೆ.
ಪಾಕಿಸ್ತಾನದಲ್ಲಿಯೂ ಇತ್ತೀಚೆಗೆ ಕೋವಿಡ್ ಪ್ರಕರಣಗಳು ಹೆಚ್ಚಾಗಿದ್ದು, ಕೆಲವು ನಗರಗಳನ್ನು ಈಗಾಗಲೇ ಸಂಪೂರ್ಣ ಲಾಕ್ಡೌನ್ ಮಾಡಲಾಗಿದೆ.
ಇದನ್ನೂ ಓದಿ: 'ಇದು ತಮಾಷೆಯ ವಿಷಯವಲ್ಲ': ಕೊರೊನಾ ಸ್ಫೋಟದ ಬಗ್ಗೆ ಕ್ರಿಕೆಟಿಗ ರೈನಾ