ETV Bharat / sports

ಇಂಗ್ಲೆಂಡ್ ಸರಣಿಗೆ ಪೂಜಾರಾ ಜಾಗಕ್ಕೆ ರಾಹುಲ್​ಗಿಂತ ಪೃಥ್ವಿ ಶಾ ಸೂಕ್ತ: ಬ್ರಾಡ್ ಹಾಗ್

author img

By

Published : Jul 3, 2021, 4:52 PM IST

ಭಾರತದ ಪ್ರಭಾವಿ ಬ್ಯಾಟ್ಸ್​ಮನ್ ಆಗಿದ್ದ ಪೂಜಾರ ಆಸ್ಟ್ರೇಲಿಯಾ ಪ್ರವಾಸದ ನಂತರ ಮಂಕಾಗಿದ್ದಾರೆ. ತವರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸರಣಿ ಮತ್ತು ನ್ಯೂಜಿಲ್ಯಾಂಡ್ ವಿರುದ್ಧದ ವಿಶ್ವಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ನಲ್ಲೂ ವೈಫಲ್ಯ ಅನುಭವಿಸಿದ್ದರು..

ಚೇತೇಶ್ವರ್ ಪೂಜಾರ ಪೃಥ್ವಿ ಶಾ
ಚೇತೇಶ್ವರ್ ಪೂಜಾರ ಪೃಥ್ವಿ ಶಾ

ಲಂಡನ್ ​: ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಭಾರತ ತಂಡ 3ನೇ ಕ್ರಮಾಂಕದಲ್ಲಿ ಚೇತೇಶ್ವರ್ ಪೂಜಾರರನ್ನು ಬದಲಿಸಲು ಬಯಸಿದರೆ ಅವರ ಜಾಗಕ್ಕೆ ಯುವ ಸ್ಫೋಟಕ ಬ್ಯಾಟ್ಸ್​ಮನ್ ಪೃಥ್ವಿ ಶಾ ಅತ್ಯುತ್ತಮ ಆಯ್ಕೆ ಎಂದು ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಬ್ರಾಡ್​ ಹಾಗ್​ ತಿಳಿಸಿದ್ದಾರೆ.

ಇಂಗ್ಲೆಂಡ್ ಸರಣಿಗೆ ಚೇತೇಶ್ವರ್ ಪೂಜಾರ ಸ್ಥಾನಕ್ಕೆ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಕೆ ಎಲ್ ರಾಹುಲ್ ಸೂಕ್ತರಾಗುತ್ತಾರಾ? ಎಂದು ಅಭಿಮಾನಿಯೊಬ್ಬರು ಹಾಗ್​ ಅವರಿಗೆ ಕೇಳಿದ್ದಕ್ಕೆ 50 ವರ್ಷದ ಮಾಜಿ ಸ್ಪಿನ್ನರ್​ ಪೃಥ್ವಿ ಶಾ ಹೆಸರನ್ನು ಸೂಚಿಸಿದ್ದಾರೆ.

ಯಾರಾದರೂ ಪೂಜಾರರ ಸ್ಥಾನಕ್ಕೆ ತುಂಬಲು ಹೋದರೆ ಅದು ಪೃಥ್ವಿ ಶಾ ಆಗಿರಬೇಕು. ಅವರ ಆರಂಭಿಕ ಬ್ಯಾಟ್ಸ್​ಮನ್​ಗಿಂತಲೂ ಹೆಚ್ಚು 3ನೇ ಕ್ರಮಾಂಕಕ್ಕೆ ಸೂಕ್ತರಾಗುತ್ತಾರೆ. ಆತ ಸಾಕಷ್ಟು ಪ್ರತಿಭೆ ಮತ್ತು ದೀರ್ಘ ಭವಿಷ್ಯವನ್ನು ಹೊಂದಿದ್ದಾರೆ. ಅವರು ಪ್ರಸ್ತುತ ಪ್ರವಾಸ ಗುಂಪಿನಲ್ಲಿಲ್ಲ. ಆದರೆ, ವೈಲ್ಡ್ ಕಾರ್ಡ್ ಆಯ್ಕೆಯಾಗಿದ್ದಾರೆ ಎಂದು ಹಾಗ್ ಟ್ವೀಟ್ ಮಾಡಿದ್ದಾರೆ.

ಇನ್ನು, ಭಾರತ ಇಂಗ್ಲೆಂಡ್​ನಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ. ಇದೇ ಸಂದರ್ಭದಲ್ಲಿ ಪೃಥ್ವಿ ಶಾ ಜುಲೈ 13ರಿಂದ ಶ್ರೀಲಂಕಾ ವಿರುದ್ಧದ ಸೀಮಿತ ಓವರ್‌ಗಳ ಸರಣಿಯನ್ನಾಡಲಿದ್ದಾರೆ.

ಭಾರತದ ಪ್ರಭಾವಿ ಬ್ಯಾಟ್ಸ್​ಮನ್ ಆಗಿದ್ದ ಪೂಜಾರ ಆಸ್ಟ್ರೇಲಿಯಾ ಪ್ರವಾಸದ ನಂತರ ಮಂಕಾಗಿದ್ದಾರೆ. ತವರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸರಣಿ ಮತ್ತು ನ್ಯೂಜಿಲ್ಯಾಂಡ್ ವಿರುದ್ಧದ ವಿಶ್ವಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ನಲ್ಲೂ ವೈಫಲ್ಯ ಅನುಭವಿಸಿದ್ದರು.

ಇದನ್ನು ಓದಿ: ಕೊಹ್ಲಿ ವಿಭಿನ್ನ ರೀತಿಯ ನಾಯಕ.. ಧೋನಿಗೋಸ್ಕರ ಬುಲೆಟ್​ಗೆ ಎದೆಯೊಡ್ಡಲು ಸಿದ್ಧ : ಕೆ ಎಲ್ ರಾಹುಲ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.