ETV Bharat / sports

IND vs AUS 1st T20: ನಾಳೆಯಿಂದ ಭಾರತ-ಆಸ್ಟ್ರೇಲಿಯಾ ಟಿ20 ಸರಣಿ; ಐಪಿಎಲ್‌ ಪ್ರತಿಭೆಗಳಿಗೆ ಅವಕಾಶ - ETV Bharath Kannada news

India and Australia 1st T20: ಏಕದಿನ ವಿಶ್ವಕಪ್ ಕ್ರಿಕೆಟ್ ಬೆನ್ನಲ್ಲೇ ಭಾರತ ಮತ್ತು ಆಸ್ಟ್ರೇಲಿಯಾ 5 ಟಿ20 ಪಂದ್ಯಗಳ ಸರಣಿ ಆಡುತ್ತಿದ್ದು, ಮೊದಲ ಪಂದ್ಯ ನಾಳೆ ವಿಶಾಖಪಟ್ಟಣಂನಲ್ಲಿ ನಡೆಯಲಿದೆ.

IND vs AUS 1st T20
IND vs AUS 1st T20
author img

By ETV Bharat Karnataka Team

Published : Nov 22, 2023, 2:13 PM IST

ವಿಶಾಖಪಟ್ಟಣಂ(ಆಂಧ್ರ ಪ್ರದೇಶ): 2024ರ ಟಿ20 ವಿಶ್ವಕಪ್​ಗೆ ಇನ್ನೂ 8 ತಿಂಗಳಿದ್ದರೂ ಈಗಾಗಲೇ ಎಲ್ಲಾ ರಾಷ್ಟ್ರೀಯ ತಂಡಗಳು ಸಿದ್ಧತೆ ಆರಂಭಿಸಿವೆ. ಪ್ರಸಕ್ತ ಸಾಲಿನ ಏಕದಿನ ವಿಶ್ವಕಪ್​ ಮುಗಿಯುತ್ತಿದ್ದಂತೆ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಐದು ಟಿ20 ಪಂದ್ಯಗಳ ಸರಣಿ ಶುರುವಾಗುತ್ತಿದೆ. ನಾಳೆ ಮೊದಲ ಪಂದ್ಯ ವಿಶಾಖಪಟ್ಟಣಂನ ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದ್ದು ಅಭಿಮಾನಿಗಳು ಕಾತರರಾಗಿದ್ದಾರೆ.

ಐರ್ಲೆಂಡ್​ ವಿರುದ್ಧ ಗೆಲುವು: ಆಸ್ಟ್ರೇಲಿಯಾ ಸರಣಿಗೆ ಆಯ್ಕೆಯಾಗಿರುವ ಭಾರತ ತಂಡದಲ್ಲಿ ಬಹುತೇಕರು ಏಷ್ಯಾಕಪ್​ಗೂ ಮುನ್ನ ನಡೆದ ಐರ್ಲೆಂಡ್​ ವಿರುದ್ಧದ ಪಂದ್ಯಗಳಲ್ಲಿ ಭಾಗವಹಿಸಿದ್ದಾರೆ. ಬುಮ್ರಾ ನಾಯಕತ್ವದಲ್ಲಿ ತೆರಳಿದ್ದ ತಂಡ ಮೂರು ಪಂದ್ಯಗಳ ಸರಣಿಯನ್ನು 2-0ಯಿಂದ ಗೆದ್ದುಕೊಂಡಿತ್ತು. (ಒಂದು ಪಂದ್ಯ ಮಳೆಯಿಂದ ರದ್ದಾಗಿದೆ)

ಹೊಸ ತಂಡ ಕಟ್ಟಲು ಬಿಸಿಸಿಐ ಚಿಂತನೆ?: 2007ರ ವಿಶ್ವಕಪ್​ಗೆ ಮಾಡಿದ ತಯಾರಿಯ ರೀತಿಯಲ್ಲೇ ಹೊಸ ತಂಡವನ್ನು ಕಟ್ಟಲು ಬಿಸಿಸಿಐ ಚಿಂತಿಸಿದಂತಿದೆ. ಇದಕ್ಕಾಗಿ ಹೊಸ ಪ್ರತಿಭೆಗಳಿಗೆ ಮಣೆ ಹಾಕಲಾಗುತ್ತಿದೆ. ಇನ್ನು 8 ತಿಂಗಳ ಕಾಲಾವಕಾಶವಿದ್ದು ತಂಡದಲ್ಲಿ ಪ್ರಯೋಗಗಳನ್ನು ಮಾಡಿ ಹೊಸ ಟೀಮ್​ ಕಟ್ಟುವ ನಿರೀಕ್ಷೆ ಗೋಚರಿಸಿದೆ.

ವಿಶ್ವಕಪ್​ ಆಡಿರುವ ಆಟಗಾರರಿಗೆ ವಿಶ್ರಾಂತಿ: ವಿಶ್ವಕಪ್​ನಲ್ಲಿ ಅಡಿರುವ ಹೆಚ್ಚಿನ ಆಟಗಾರರಿಗೆ ಟಿ20 ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಸೂರ್ಯಕುಮಾರ್​ ಯಾದವ್​, ಪ್ರಸಿದ್ಧ್​ ಕೃಷ್ಣ ಮತ್ತು ಇಶಾನ್​ ಕಿಶನ್​ ಅವರನ್ನು ಉಳಿಸಿಕೊಳ್ಳಲಾಗಿದೆ. ಶ್ರೇಯಸ್​ ಅಯ್ಯರ್​ ಕೊನೆಯ ಎರಡು ಪಂದ್ಯಗಳಿಗೆ ಮಾತ್ರ ಲಭ್ಯರಿದ್ದಾರೆ. ಕಿಶನ್​ ಮತ್ತು ಸೂರ್ಯ ವಿಶ್ವಕಪ್​ನಲ್ಲಿ ಕೆಲವೇ ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಪ್ರಸಿದ್ಧ್​ ತಂಡದಲ್ಲಿದ್ದರೆಂಬುದು ಬಿಟ್ಟರೆ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಶ್ರೇಯಸ್​ ಎಲ್ಲಾ 11 ಪಂದ್ಯಗಳನ್ನೂ ಆಡಿದ್ದಾರೆ.

ಹಾರ್ದಿಕ್​ ಅನುಪಸ್ಥಿತಿಯಲ್ಲಿ ಸೂರ್ಯ ಕ್ಯಾಪ್ಟನ್: ವಿಶ್ವಕಪ್​ನಲ್ಲಿ ಗಾಯಕ್ಕೆ ತುತ್ತಾದ ಹಾರ್ದಿಕ್​ ಪಾಂಡ್ಯ ಇನ್ನೂ ಚೇತರಿಸಿಕೊಂಡಿರದ ಕಾರಣ ಟಿ20 ನಂ.1 ಆಟಗಾರ ಸೂರ್ಯಕುಮಾರ್​ ಯಾದವ್​ ಅವರಿಗೆ ನಾಯಕತ್ವದ ಹೊಣೆ ನೀಡಲಾಗಿದೆ. ಮೊದಲ ಮೂರು ಪಂದ್ಯಕ್ಕೆ ಗಾಯಕ್ವಾಡ್​ ಉಪ ನಾಯಕನಾಗಿ ಸಾಥ್​ ಕೊಟ್ಟರೆ, ನಂತರ ಅಯ್ಯರ್​ ಈ ಜವಾಬ್ದಾರಿ ವಹಿಸಿಕೊಳ್ಳುವರು.

ಬಲಿಷ್ಠ ಕಾಂಗರೂ ಪಡೆ: ಆಸ್ಟ್ರೇಲಿಯಾ ಏಕದಿನ ವಿಶ್ವಕಪ್​ನಲ್ಲಿ ಆಡಿರುವ ಪೈಕಿ 6 ಮಂದಿಯನ್ನು ಉಳಿಸಿಕೊಂಡು, 6 ಆಟಗಾರರನ್ನು ಬದಲಿಸಿದೆ. ಆಸೀಸ್​ ಕ್ರಿಕೆಟ್​ ಸಂಸ್ಥೆ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿದೆ. ಇದೇ ತಂಡ ವಿಶ್ವಕಪ್​ಗೂ ಮುನ್ನ ದಕ್ಷಿಣ ಆಫ್ರಿಕಾದಲ್ಲಿ ಟಿ20 ಮತ್ತು ಏಕದಿನ ಸರಣಿಗಳನ್ನು ಅಡಿತ್ತು. ಅಲ್ಲಿ ಕಾಂಗರೂ ಪಡೆ ಹರಿಣಗಳನ್ನು ಟಿ20 ಸರಣಿಯಲ್ಲಿ ಕ್ಲೀನ್​ ಸ್ವೀಪ್​ ಮಾಡಿದ್ದರು. ಅದೇ ಪ್ರದರ್ಶನವನ್ನು ಮಾರ್ಷ್​ ನಾಯಕತ್ವದಲ್ಲಿ ಮುಂದುವರೆಸಲು ತಂಡ ಸಜ್ಜಾಗಿದೆ.

ತಂಡಗಳು ಇಂತಿವೆ- ಭಾರತ: ಸೂರ್ಯಕುಮಾರ್ ಯಾದವ್ (ನಾಯಕ), ರುತುರಾಜ್ ಗಾಯಕ್ವಾಡ್ (ಉಪನಾಯಕ), ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್​ ಕೀಪರ್​), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಿವಂ ದುಬೆ, ರವಿ ಬಿಷ್ಣೋಯ್, ಅರ್ಶದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್, ಮುಖೇಶ್ ಕುಮಾರ್, ಶ್ರೇಯಸ್​ ಅಯ್ಯರ್ (ಕೊನೆ ಎರಡು ಪಂದ್ಯದ ಉಪ ನಾಯಕ).

ಆಸ್ಟ್ರೇಲಿಯಾ: ಮ್ಯಾಥ್ಯೂ ಶಾರ್ಟ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್ (ನಾಯಕ), ಜೋಶ್ ಇಂಗ್ಲಿಸ್ (ವಿಕೆಟ್​ ಕೀಪರ್), ಮಾರ್ಕಸ್ ಸ್ಟೊಯ್ನಿಸ್, ಟಿಮ್ ಡೇವಿಡ್, ಆ್ಯರನ್ ಹಾರ್ಡಿ, ಸೀನ್ ಅಬಾಟ್, ನಾಥನ್ ಎಲ್ಲಿಸ್, ಆ್ಯಡಮ್ ಝಂಪಾ, ಸ್ಪೆನ್ಸರ್ ಜಾನ್ಸನ್, ಮ್ಯಾಥ್ಯೂ ವೇಡ್, ಆಶ್ಟನ್ ಟರ್ನರ್, ಜೇಸನ್ ಬೆಹ್ರೆಂಡಾರ್ಫ್

ಸ್ಥಳ: ವಿಶಾಖಪಟ್ಟಣಂನ ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂ

ಸಮಯ: ಸಂಜೆ 7ಕ್ಕೆ

ನೇರಪ್ರಸಾರ: ಜಿಯೋಸಿನಿಮಾ ಮತ್ತು 18 ಸ್ಪೋರ್ಟ್ಸ್.

ಇದನ್ನೂ ಓದಿ: ಲಕ್ನೋ ಸೂಪರ್ ಜೈಂಟ್ಸ್ ತೊರೆದು ಕೆಕೆಆರ್‌ಗೆ​ ಮರಳಿದ ಗೌತಮ್​ ಗಂಭೀರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.