ಸೇಂಟ್ ಜಾನ್ಸ್: ವೆಸ್ಟ್ ಇಂಡೀಸ್ ತಂಡದ ನಾಯಕ ಕೀರನ್ ಪೊಲಾರ್ಡ್ ಮುಂಬರುವ ಸೀಮಿತ ಓವರ್ಗಳ ಪಾಕಿಸ್ತಾನ ಪ್ರವಾಸದಿಂದ ಹೊರಬಂದಿದ್ದಾರೆ. ಟಿ20 ವಿಶ್ವಕಪ್ ವೇಳೆ ಕಾಣಿಸಿಕೊಂಡಿದ್ದ ಹ್ಯಾಮ್ಸ್ಟ್ರಿಂಗ್ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳುವಲ್ಲಿ ವಿಫಲರಾಗಿರುವುದರಿಂದ ಪಾಕ್ ಪ್ರವಾಸದಿಂದ ಹಿಂದೆ ಸರಿದಿದ್ದಾರೆ.
ಕೀರನ್ ಪೊಲಾರ್ಡ್ ತಂಡದಿಂದ ಹಿಂದೆ ಸರಿದಿರುವ ಕಾರಣ ಏಕದಿನ ತಂಡದ ನಾಯಕತ್ವವನ್ನು ಡಿವೋನ್ ಥಾಮಸ್ಗೆ ನೀಡಲಾಗಿದೆ. ಟಿ20 ತಂಡದ ನಾಯಕತ್ವವನ್ನು ಆಲ್ರೌಂಡರ್ ರೋವ್ಮನ್ ಪೋವೆಲ್ಗೆ ವಹಿಸಲಾಗಿದೆ.
2022ರ ಜನವರಿಯಲ್ಲಿ ಐರ್ಲೆಂಡ್ ಮತ್ತು ಇಂಗ್ಲೆಂಡ್‌ಗಳ ತವರು ಪ್ರವಾಸ ಕೈಗೊಳ್ಳುವ ಕೆಲವೇ ವಾರಗಳಲ್ಲಿ ಪೊಲಾರ್ಡ್ ಅವರನ್ನು ಮರು ಮೌಲ್ಯಮಾಪನ ಮಾಡಲಾಗುತ್ತದೆ ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ ಭಾನುವಾರ ಹೇಳಿದೆ.
ವೆಸ್ಟ್ ಇಂಡೀಸ್ ತಂಡ ಪಾಕಿಸ್ತಾನ ಪ್ರವಾಸದಲ್ಲಿ ಡಿಸೆಂಬರ್ 13ರಿಂದ 22ರವರೆಗೆ 3 ಟಿ20 ಮತ್ತು 3 ಏಕದಿನ ಪಂದ್ಯಗಳ ಸರಣಿಯನ್ನಾಡಲಿದೆ. ಭದ್ರತಾ ಕಾರಣದಿಂದ ನ್ಯೂಜಿಲ್ಯಾಂಡ್ ಮತ್ತು ಇಂಗ್ಲೆಂಡ್ ತಂಡಗಳು ತಮ್ಮ ಪ್ರವಾಸವನ್ನು ರದ್ದುಗೊಳಿಸಿದ ನಂತರ ವಿಂಡೀಸ್ ಮೊದಲ ತಂಡವಾಗಿ ಪಾಕಿಸ್ತಾನ ಪ್ರವಾಸ ಕೈಗೊಳ್ಳುತ್ತಿದೆ.
ಇದನ್ನೂ ಓದಿ:ದ.ಆಫ್ರಿಕಾ ಪ್ರವಾಸಕ್ಕೆ ತಂಡದ ಆಯ್ಕೆ: ಕೊಹ್ಲಿ ಏಕದಿನ ನಾಯಕತ್ವ, ರಹಾನೆ-ಇಶಾಂತ್ ಟೆಸ್ಟ್ ಭವಿಷ್ಯ ನಿರ್ಧಾರ