ಮೆಲ್ಬೋರ್ನ್: ಕೋವಿಡ್ 19 ಸಾಂಕ್ರಾಮಿಕ ಹಿನ್ನೆಲೆ ತೀವ್ರ ನಿರ್ಬಂಧವಿರುವ ಕಾರಣ ಪರ್ತ್ನಲ್ಲಿ ನಡೆಯಬೇಕಿದ್ದ ಆ್ಯಶಸ್ ಸರಣಿಯ 5ನೇ ಟೆಸ್ಟ್ ಪಂದ್ಯವನ್ನು ಸ್ಥಳಾಂತರ ಮಾಡಲಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಸೋಮವಾರ ಖಚಿತಪಡಿಸಿದೆ.
" ಪರ್ತ್ ಸ್ಟೇಡಿಯಂನಲ್ಲಿ ಐದನೇ ಆ್ಯಶಸ್ ಟೆಸ್ಟ್ ಪಂದ್ಯ ನಡೆಸಲು ನಮಗೆ ಸಾಧ್ಯವಾಗುತ್ತಿಲ್ಲ. ಇದರಿಂದ ನಾವು ತುಂಬಾ ನಿರಾಸೆಗೊಂಡಿದ್ದೇವೆ. ಪ್ರಸ್ತುತ ಗಡಿ ಮತ್ತು ಆರೋಗ್ಯ ವ್ಯವಸ್ಥೆಗಳ ಅಡಿ ಕಾರ್ಯನಿರ್ವಹಿಸಲು ವೆಸ್ಟರ್ನ್ ಆಸ್ಟ್ರೇಲಿಯಾ ಸರ್ಕಾರ ಮತ್ತು ವೆಸ್ಟರ್ನ್ ಆಸ್ಟ್ರೇಲಿಯಾ ಕ್ರಿಕೆಟ್ ಸಹಭಾಗಿತ್ವದಲ್ಲಿ ನಾವು ಎಲ್ಲವನ್ನೂ ಮಾಡಿದ್ದೇವೆ. ಆದರೆ, ದುರಾದೃಷ್ಟವಶಾತ್, ಪಂದ್ಯ ಆಯೋಜಿಸಲು ನಮಗೆ ಸಾಧ್ಯವಾಗುತ್ತಿಲ್ಲ" ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಸಿಇಒ ನಿಕ್ ಹ್ಯಾಕ್ಲೆ ಹೇಳಿದ್ದಾರೆ.
ವೆಸ್ಟರ್ನ್ ಆಸ್ಟ್ರೇಲಿಯಾಗೆ ಬರುವ ಆಟಗಾರರಿಗೆ ಕ್ವಾರಂಟೈನ್ ಮಾಡಬೇಕಾದ ಬಯೋಬಬಲ್ ಅವಶ್ಯಕತೆಗಳನ್ನು ನಿಬಾಯಿಸುವುದು ತುಂಬಾ ಕಷ್ಟ. ಹಾಗಾಗಿ ಕ್ವಾರಂಟೈನ್ ತಪ್ಪಿಸಿಕೊಳ್ಳುವುದಕ್ಕಾಗಿ ಈ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಸಿಎ ತಿಳಿಸಿದೆ. ಈ ಟೆಸ್ಟ್ ಪಂದ್ಯವನ್ನು ತಾಸ್ಮೇನಿಯಾದ ಹೋಬರ್ಟ್ನಲ್ಲಿ ಆಯೋಜಿಸಲು ಸಾಧ್ಯತೆಯಿದೆ.
ಕೆಲವು ಸಮಯದಿಂದ ಆ್ಯಶಸ್ ಪಂದ್ಯಕ್ಕಾಗಿ ಎದುರು ನೋಡುತ್ತಿರುವ WACA ಕ್ರಿಕೆಟ್ ಸದಸ್ಯರು ಮತ್ತು ಅಲ್ಲಿನ ಅಭಿಮಾನಿಗಳಿಗೆ ಕ್ರಿಕೆಟ್ ಆಸ್ಟ್ರೇಲಿಯಾ ನಿರ್ಧಾರದಿಂದ ನಿರಾಸೆಯಾಗಿದೆ, ಆದಾರೂ ವೆಸ್ಟರ್ನ್ ಆಸ್ಟ್ರೇಲಿಯಾಗೆ ಮತ್ತೆ ಕ್ರಿಕೆಟ್ ತರುವುದಕ್ಕೆ ಬೋರ್ಡ್ ಬದ್ಧವಾಗಿದೆ ಹ್ಯಾಕ್ಲೆ ಹೇಳಿದ್ದಾರೆ.
ಡಿಸೆಂಬರ್ 8ರಿಂದ ಬ್ರಿಸ್ಬೇನ್ನ ಗಬ್ಬಾದಲ್ಲಿ ಮೊದಲ ಆ್ಯಶಸ್ ಟೆಸ್ಟ್ ನಡೆಯಲಿದೆ. ಆಸ್ಟ್ರೇಲಿಯಾ ತಂಡವನ್ನು ವೇಗಿ ಪ್ಯಾಟ್ ಕಮ್ಮಿನ್ಸ್ ಮುನ್ನಡೆಸುತ್ತಿದ್ದಾರೆ.
ಇದನ್ನೂ ಓದಿ:Ashes 2021-22: ಆಸ್ಟ್ರೇಲಿಯಾ 11ರ ಬಳಗದಲ್ಲಿ ಅವಕಾಶ ಪಡೆದ ಟ್ರಾವಿಡ್ ಹೆಡ್, ಮಿಚೆಲ್ ಸ್ಟಾರ್ಕ್