ETV Bharat / sports

ಪಾಕ್​ ವಿರುದ್ಧ ಏಕದಿನ ಸರಣಿ ಗೆದ್ದ ನ್ಯೂಜಿಲ್ಯಾಂಡ್​: ತವರಿನಲ್ಲಿ ಪಾಕಿಸ್ತಾನಕ್ಕೆ ಸತತ ಸರಣಿ ಸೋಲು - ETV Bharath Kannada news

ತವರಿನಲ್ಲಿ ಪಾಕಿಸ್ತಾನಕ್ಕೆ ಸರಣಿ ಸೋಲು - ಇಂಗ್ಲೆಂಡ್​ ಮತ್ತು ನ್ಯೂಜಿಲ್ಯಾಂಡ್​ ಎದುರು ಸೋಲನುಭವಿಸಿದ ಪಾಕ್​ ತಂಡ - ಆಟಗಾರರು ಫಾರ್ಮ್​ನಲ್ಲಿದ್ದರೂ ಗೆಲುವಿಗಾಗಿ ಕಷ್ಟಪಡುತ್ತಿರುವ ಹಸಿರು ಪಡೆ.

New Zealand clinch their maiden ODI series win in Pakistan
ಪಾಕ್​ ವಿರುದ್ಧ ಏಕದಿನ ಸರಣಿಗೆದ್ದ ನ್ಯೂಜಿಲೆಂಡ್
author img

By

Published : Jan 14, 2023, 7:44 PM IST

Updated : Jan 14, 2023, 10:57 PM IST

ನವದೆಹಲಿ: ತವರಿನಲ್ಲಿ ಏಷ್ಯಾಕಪ್​ ಹಾಗೂ ಭಾರತದಲ್ಲಿ ಏಕದಿನ ವಿಶ್ವಕಪ್​ ಇರುವ ಹಿನ್ನೆಲೆ ಪಾಕಿಸ್ತಾನ ತಂಡ ಭರ್ಜರಿ ತಾಲೀಮು ನಡೆಸುತ್ತಿದೆ. 2009 ಮಾರ್ಚ್​ 3 ರಂದು ಶ್ರೀ ಲಂಕಾ ಕ್ರಿಕೆಟ್​ ಟೀಂ ಇದ್ದ ಬಸ್ ​ಮೇಲೆ ದಾಳಿ ನಡೆಯುತ್ತದೆ. ಇದಾದ ನಂತರ ಪಾಕಿಸ್ತಾನಕ್ಕೆ ಹೋಗಿ ಆಡಲು ಯಾವ ದೇಶವೂ ಮುಂದೆ ಬರುವುದಿಲ್ಲ. ಹೋದ ವರ್ಷ ಇಂಗ್ಲೆಂಡ್​ ತಂಡ ಪಾಕಿಸ್ತಾನ ನೆಲಕ್ಕೆ ಹೋಗಿ ಆಡಿತು. ಈ ಮೂಲಕ ಸುಮಾರು 12 ವರ್ಷಗಳ ನಂತರ ಪಾಕ್​ನಲ್ಲಿ ದ್ವಿಪಕ್ಷೀಯ ಸರಣಿ ನಡೆಯಿತು.

ನ್ಯೂಜಿಲ್ಯಾಂಡ್​ ವಿರುದ್ಧವೂ ಸರಣಿ ಸೋತ ಪಾಕ್​: ಪಾಕಿಸ್ತಾನ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯನ್ನು ನ್ಯೂಜಿಲ್ಯಾಂಡ್​ 2-1 ಅಂತರದಿಂದ ವಶಪಡಿಸಿಕೊಂಡಿದೆ. ಮೂರನೇ ಏಕದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ ಎರಡು ವಿಕೆಟ್‌ಗಳಿಂದ ಪಾಕಿಸ್ತಾನವನ್ನು ಸೋಲಿಸಿತು. 42 ಎಸೆತಗಳಲ್ಲಿ ನಾಲ್ಕು ಸಿಕ್ಸ್​ ಮತ್ತು ನಾಲ್ಕು ಭೌಂಡರಿಯಿಂದ ಅಜೇಯ 63 ರನ್ ಗಳಿಸಿದ ಗ್ಲೆನ್ ಫಿಲಿಪ್ಸ್ ನ್ಯೂಜಿಲ್ಯಾಂಡ್​ ಗೆಲುವಿಗೆ ಕಾರಣರಾದರು. ಪಾಕ್​ ನೀಡಿದ್ದ 281 ರನ್​ಗಳ ಗುರಿಯನ್ನು ನ್ಯೂಜಿಲ್ಯಾಂಡ್​ 11 ಎಸೆತಗಳು ಬಾಕಿ ಇರುವಂತೆಯೇ ಎರಡು ವಿಕೆಟ್​ ಉಳಿಸಿಗೊಂಡು ಗೆಲುವು ಸಾಧಿಸಿತ್ತು.

ಶುಕ್ರವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿತು. ಪಾಕ್​ ಪರ ಬಾಬರ್ ಅಜಂ ಅವರ ನಿರ್ಧಾರ ಯಶಸ್ವಿಯಾಗಲಿಲ್ಲ. ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಲಾಕಿ ಫರ್ಗುಸನ್ ಆರಂಭಿಕ ಶಾನ್ ಮಸೂದ್ ಅವರನ್ನು ಔಟ್ ಮಾಡಿದರು. ಇದಾದ ಬಳಿಕ ಬಂದ ಬಾಬರ್ ಅಜಮ್ ಕೂಡ ಮೈಕಲ್ ಬ್ರೇಸ್ ವೆಲ್ ಎಸೆತದಲ್ಲಿ ಔಟ್​ ಆಗಿ ಪೆವಿಲಿಯನ್​ಗೆ ಮರಳಿದರು.

ಆರಂಭದಲ್ಲಿ ಎರಡು ವಿಕೆಟ್‌ಗಳ ಪತನದ ನಂತರ, ಆರಂಭಿಕರಾದ ಫಖರ್ ಜಮಾನ್ ಮತ್ತು ಮೊಹಮ್ಮದ್ ರಿಜ್ವಾನ್ ಜವಾಬ್ದಾರಿಯುತ ಜೊತೆಯಾಟ ಪ್ರದರ್ಶಿಸಿದರು. ಇಬ್ಬರು ರನ್​ ಒತ್ತಡದಲ್ಲಿದ್ದ ತಂಡಕ್ಕೆ 154 ರನ್‌ಗಳ ಜೊತೆಯಾಟ ನೀಡಿದರು. ರಿಜ್ವಾನ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಇಬ್ಬರ ನಡುವಣ ಉತ್ತಮ ಆಟವನ್ನು ಇಶ್ ಸೋಧಿ ಬ್ರೇಕ್​ ಮಾಡಿದರು. ರಿಜ್ವಾನ್ 74 ಎಸೆತಗಳಲ್ಲಿ 77 ರನ್ ಗಳಿಸಿದ್ದರು. ಅವರ ನಂತರ 122 ಎಸೆತಗಳಲ್ಲಿ 101 ರನ್ ಗಳಿಸಿದ್ದ ಫಖರ್ ಜಮಾನ್ ರನ್​ ಔಟ್​ ಆದರು.

ನಂತರ ಹ್ಯಾರಿಸ್ ಸೊಹೈಲ್ 22 ರನ್ ಮತ್ತು ಆಘಾ ಸಲ್ಮಾನ್ 45 ರನ್ ಗಳಿಸಿದರು. ನಂತರ ಬಂದ ಆಟಗಾರರೆಲ್ಲ ಬಾಲಂಗೋಚಿಗಳಂತೆ ಒಂದಂಕಿಗೆ ಔಟ್​ ಆಗಿ ಪೆವಿಲಿಯನ್​ ಸೇರಿದರು. 9 ವಿಕೆಟ್​ ಕಳೆದು ಕೊಂಡ ಪಾಕಿಸ್ತಾನ 50 ಓವರ್​ನಲ್ಲಿ 280 ರನ್​ ಗಳಿಸಿತ್ತು. ನ್ಯೂಜಿಲ್ಯಾಂಡ್​​ ಪರ ಸೌಥಿ 3 ಮತ್ತು ಲಾಕಿ ಫರ್ಗುಸನ್ ಎರಡು ವಿಕೆಟ್​ ಪಡೆದರು. ಇಬ್ಬರು ರನ್​ ಔಟ್​ಗೆ ಬಲಿಯಾದರೆ, ಮೈಕೆಲ್ ಬ್ರೇಸ್‌ವೆಲ್ ಮತ್ತು ಇಶ್ ಸೋಧಿ ತಲಾ ಒಂದು ವಿಕೆಟ್​ ಪಡೆದರು.

ಸಾಧಾರಣ ಗುರಿ ಬೆನ್ನು ಹತ್ತಿದ್ದ ನ್ಯೂಜಿಲ್ಯಾಂಡ್​​ ಪಾಕ್​ ಬೌಲರ್​ಗಳು ಕಾಡಿದರು. ಆರಂಭಕ ಫಿನ್ ಅಲೆನ್ 25 ರನ್ ಗಳಿಸಿ ಔಟಾದರು. ಬಳಿಕ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಡೆವೊನ್ ಕಾನ್ವೆ ನಡುವೆ 65 ರನ್ ಗಳ ಜೊತೆಯಾಟ ಮಾಡಿದರು. 21ನೇ ಓವರ್‌ನಲ್ಲಿ ಆಘಾ ಸಲ್ಮಾನ್ 52 ರನ್‌ಗಳಿಗೆ ಡೆವೊನ್ ಕಾನ್ವೆ ಅವರನ್ನು ಔಟ್ ಮಾಡಿದರು. ಡೇರಿಲ್ ಮಿಚೆಲ್ 31 ರನ್ ಗಳಿಸಿ ಆಘಾ ಸಲ್ಮಾನ್​ಗೆ ವಿಕೆಟ್​ ಒಪ್ಪಿಸಿದರು. ಅದೇ ಸಮಯದಲ್ಲಿ ವಿಲಿಯಮ್ಸನ್ 53 ರನ್ ಗಳಿಸಿ ಮೊಹಮ್ಮದ್ ವಾಸಿಮ್ ಎಸೆತದಲ್ಲಿ ರನೌಟ್ ಆದರು. ಮೈಕಲ್ ಬ್ರೇಸ್​ವೆಲ್ ಮತ್ತು ಲಾಥಮ್​ ಹೆಚ್ಚು ಹೊತ್ತು ಆಡದೇ ಪೆವಿಲಿಯನ್​ಗೆ ಮರಳಿದರು.

ನಂತರ ಗ್ಲೆನ್ ಫಿಲಿಪ್ಸ್ ಮತ್ತು ಮಿಚೆಲ್ ಸ್ಯಾಂಟ್ನರ್ ಜೊತೆಗೂಡಿ 64 ರನ್​ಗಳ ಮಹತ್ವದ ಜೊತೆಯಾಟ ನಡೆಸಿ ಸಂಕಷ್ಟದಲ್ಲಿದ್ದ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಒತ್ತಡ ಸಮಯದಲ್ಲೂ ಉತ್ತಮವಾಗಿ ಬ್ಯಾಟಿಂಗ್​ ಮಾಡಿದ ಗ್ಲೆನ್ ಫಿಲಿಪ್ಸ್ ಅಮೂಲ್ಯ 63 ರನ್​ಗಳಿಸಿ ಅಜೇಯರಾಗಿ ಉಳಿದು, ತಂಡಕ್ಕೆ ಎರಡು ವಿಕೆಟ್​ನ ಗೆಲುವು ತಂದಿತ್ತರು. ನ್ಯೂಜಿಲ್ಯಾಂಡ್​ ಜೊತೆಗಿನ ಎರಡು ಟೆಸ್ಟ್​ ಡ್ರಾದಲ್ಲಿ ಅಂತ್ಯವಾಗಿತ್ತು.

ಇಂಗ್ಲೆಂಡ್​ ವಿರುದ್ಧ ಸೋತಿದ್ದ ಪಾಕ್​: ಈ ಪಂದ್ಯದಲ್ಲಿ ಇಂಗ್ಲೆಂಡ್​ ಪಾರಮ್ಯ ಮೆರೆಯಿತು. ಬ್ರಿಟಿಷ್​ ಮತ್ತು ಪಾಕ್​ ನಡುವೆ ಏಳು ಟಿ20 ಪಂದ್ಯ ಮತ್ತು ಮೂರು ಟೆಸ್ಟ್​ ಕ್ರಿಕೆಟ್​ ಪಂದ್ಯಗಳು ನಡೆದವು. ಏಳು ಟಿ 20ಯಲ್ಲಿ ಮೂರನ್ನು ಪಾಕ್​ ಗೆದ್ದರೆ ನಾಲ್ಕರಲ್ಲಿ ಇಂಗ್ಲೆಂಡ್​ ಗೆದ್ದು ಸರಣಿ ತನ್ನದಾಗಿಸಿಕೊಂಡಿತ್ತು. ಮೂರು ಟೆಸ್ಟ್​ನಲ್ಲಿ ಪಾಕಿಸ್ತಾನ ಸೋಲನುಭವಿಸಿತ್ತು. ಇಂಗ್ಲೆಂಡ್​ ಪಾಕ್​ನ್ನು ತವರು ನೆಲದಲ್ಲೇ ಸೋಲಿಸಿ ಎರಡು ಸರಣಿ ಗೆದ್ದಿತ್ತು.

ಇದನ್ನೂ ಓದಿ: ಹಾರ್ದಿಕ್​ಗೆ ಟಿ20 ನಾಯಕತ್ವ ಮುಂದುವರಿಕೆ: ನ್ಯೂಜಿಲ್ಯಾಂಡ್​ - ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೆ ಟೀಮ್ ಇಂಡಿಯಾ​ ಪ್ರಕಟ

Last Updated : Jan 14, 2023, 10:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.