ಪಲ್ಲೆಕೆಲೆ (ಶ್ರೀಲಂಕಾ): ಪಾಕಿಸ್ತಾನದ ಎದುರು ಭಾರತ ತಂಡ ಆರಂಭಿಕ ವೈಫಲ್ಯದ ನಡುವೆಯೂ ಇಶಾನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯರ ಬ್ಯಾಟಿಂಗ್ ಬಲದಿಂದ ಸ್ಪರ್ಧಾತ್ಮಕ ಗುರಿಯನ್ನು ಕಲೆಹಾಕಿದೆ. 66ಕ್ಕೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ 5ನೇ ವಿಕೆಟ್ನಲ್ಲಿ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯರ 138 ರನ್ ಜೊತೆಯಾಟದ ಆಸರೆ 267 ರನ್ ಗುರಿಗೆ ಕಾರಣವಾಯಿತು.
ಪಾಕ್ ತಂಡ ತನ್ನ ಮಾರಕ ವೇಗಿಗಳಿಂದ ಎದುರಾಳಿಗಳನ್ನು ಕಾಡುತ್ತಲೇ ಬಂದಿದೆ. ಇಂದಿನ ಪಂದ್ಯದಲ್ಲೂ, ಶಾಹೀನ್ ಅಫ್ರಿದಿ ಮತ್ತು ಹ್ಯಾರಿಸ್ ರೌಫ್ ಭಾರತೀಯ ಮೊದಲ ನಾಲ್ಕು ವಿಕೆಟ್ಗೆ ಮುಳುವಾದರು. ಸತತ 145ಕ್ಕೂ ಹೆಚ್ಚು ವೇಗದಲ್ಲಿ ಬೌಲಿಂಗ್ ಮಾಡುವ ಈ ಜೋಡಿಯ ದಾಳಿಗೆ ಭಾರತದ ಟಾಪ್ ಆರ್ಡರ್ ಕುಸಿತ ಕಂಡಿತು.
-
Innings Break!
— BCCI (@BCCI) September 2, 2023 " class="align-text-top noRightClick twitterSection" data="
A solid show with the bat from #TeamIndia! 👌 👌
8⃣7⃣ for vice-captain @hardikpandya7
8⃣2⃣ for @ishankishan51
Over to our bowlers now 👍 👍
Scorecard ▶️ https://t.co/hPVV0wT83S#AsiaCup23 | #INDvPAK pic.twitter.com/15SNzWM0k1
">Innings Break!
— BCCI (@BCCI) September 2, 2023
A solid show with the bat from #TeamIndia! 👌 👌
8⃣7⃣ for vice-captain @hardikpandya7
8⃣2⃣ for @ishankishan51
Over to our bowlers now 👍 👍
Scorecard ▶️ https://t.co/hPVV0wT83S#AsiaCup23 | #INDvPAK pic.twitter.com/15SNzWM0k1Innings Break!
— BCCI (@BCCI) September 2, 2023
A solid show with the bat from #TeamIndia! 👌 👌
8⃣7⃣ for vice-captain @hardikpandya7
8⃣2⃣ for @ishankishan51
Over to our bowlers now 👍 👍
Scorecard ▶️ https://t.co/hPVV0wT83S#AsiaCup23 | #INDvPAK pic.twitter.com/15SNzWM0k1
ಮಳೆಯ ಮುನ್ಸೂಚನೆಯಲ್ಲೇ ಟಾಸ್ ಆಗಿ ಪಂದ್ಯ ಆರಂಭವಾಯಿತು. 4.2ನೇ ಓವರ್ನಲ್ಲಿ ವರುಣನ ಕಾಟಕ್ಕೆ ಪಂದ್ಯ 20 ನಿಮಿಷಗಳ ಕಾಲ ಬ್ರೇಕ್ ಆಯಿತು. ನಂತರ ಪಂದ್ಯ ಆರಂಭ ಆಗುತ್ತಿದ್ದಂತೆ ಪಾಕ್ ಬೌಲರ್ ಶಾಹೀನ್ ಅಫ್ರಿದಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯ ವಿಕೆಟ್ ಪಡೆದರು. 4.6 ನೇ ಬಾಲ್ನಲ್ಲಿ 11 ರನ್ ಗಳಸಿದ್ದ ರೋಹಿತ್ ಕ್ಲೀನ್ ಬೌಲ್ಡ್ ಆದರೆ, ಬಂದ ಕೂಡಲೇ ಬೌಂಡರಿ ಗಳಿಸಿ ವಿರಾಟ್ ಇನ್ಸೈಡ್ ಎಡ್ಜ್ಗೆ ಔಟ್ ಆದರು.
ಗಾಯದಿಂದ ಚೇತರಿಸಿಕೊಂಡು ಮಧ್ಯಮ ಕ್ರಮಾಂಕದಲ್ಲಿ ಮೈದಾನಕ್ಕಿಳಿದ ಅಯ್ಯರ್ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಎರಡು ಬೌಂಡರಿ ಸಹಾಯದಿಂದ 14 ರನ್ ಗಳಿಸಿದ್ದ ಅಯ್ಯರ್ ಬೌನ್ಸ್ ಬಾಲ್ ಟಾಸ್ ಮಾಡಲು ಹೋಗಿ ಕ್ಯಾಚ್ ಕೊಟ್ಟರು. ಆರಂಭಿಕರಾಗಿ ಕಣಕ್ಕಿಳಿದಿದ್ದ ಗಿಲ್ ಪ್ರತಿ ಬಾಲ್ನ್ನು ಭಯದಲ್ಲೇ ಎದುರಿಸುತ್ತಿದ್ದರು. 32 ಬಾಲ್ಗಳನ್ನು ಆಡಿದ ಗಿಲ್ ಪಿಚ್ಗೆ ಸೆಟಲ್ ಆಗಲೇ ಇಲ್ಲ. ಪಾಕಿಸ್ತಾನದ ವೇಗಿಗಳ ಮುಂದೆ ಪ್ರಿನ್ಸ್ ಆರ್ಭಟ ನಡೆಯಲಿಲ್ಲ. 32ನೇ ಬಾಲ್ನಲ್ಲಿ ವಿರಾಟ್ ರೀತಿಯಲ್ಲೇ ಇನ್ಸೈಡ್ ಎಡ್ಜ್ಗೆ ಬಲಿಯಾದರು.
15 ಓವರ್ ವೇಳೆಗೆ ಭಾರತ 66 ರನ್ಗೆ 4 ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಭಾರತ ಪಾಕ್ಗೆ ಸ್ಪರ್ಧಾತ್ಮಕ ಗುರಿಯನ್ನಾದರೂ ನೀಡುತ್ತದೆಯೇ ಎಂಬ ಅನುಮಾನ ಕಾಡುತ್ತಿತ್ತು. ಆದರೆ 5ನೇ ವಿಕೆಟ್ಗೆ ಒಂದಾದ ಇಶಾನ್ ಕಿಶನ್ ಮತ್ತು ಹಾರ್ದಿಕ್ ಜೋಡಿ ಭಾರತಕ್ಕೆ ಆಸರೆಯಾದರು. ಈ ಜೋಡಿ ತಲಾ ಅರ್ಧಶತಕ ಸಿಡಿಸುವ ಮೂಲಕ 138 ರನ್ ಜೊತೆಯಾಟ ಆಡಿತು. ಪಾಕಿಸ್ತಾನದ ಸ್ಪಿನ್ ಮತ್ತು ಸ್ಪೀಡ್ ಬೌಲಿಂಗ್ನ್ನು ತಾಳ್ಮೆಯಿಂದ ಎದುರಿಸಿದ ಕಿಶನ್ 81 ಬಾಲ್ನಲ್ಲಿ 9 ಬೌಂಡರಿ ಮತ್ತು 2 ಸಿಕ್ಸ್ನಿಂದ 82 ರನ್ ಗಳಿಸಿದರು. ಉಪನಾಯಕ ಹಾರ್ದಿಕ್ ಪಾಂಡ್ಯ 7 ಬೌಂಡರಿ ಮತ್ತು 1 ಸಿಕ್ಸ್ನಿಂದ 90 ಬಾಲ್ನಲ್ಲಿ 87 ರನ್ ಗಳಿಸಿ ವಿಕೆಟ್ ಕೊಟ್ಟರು. ಅಭಿಮಾನಿಗಳಿಗೆ ಬೇಸರದ ವಿಷಯ ಎಂದರೆ ಇಬ್ಬರು ಆಟಗಾರರು ಶತಕ ವಂಚಿತರಾಗಿದ್ದು.
ಈ ಎರಡು ವಿಕೆಟ್ನ ಬೆನ್ನಲ್ಲೇ ಜಡೇಜ (14) ಮತ್ತು ಶಾರ್ದೂಲ್ ಠಾಕೂರ್ (3) ವಿಕೆಟ್ ಸಹ ಪತನವಾಯಿತು. ಕೊನೆಯ ಬಾಲಂಗೋಚಿಗಳಾದ ಕುಲ್ದೀಪ್ (4), ಬುಮ್ರಾ ಹೆಚ್ಚು ಹೊತ್ತು ಪಾಕ್ ವೇಗಿಗಳಿಗೆ ಸಾವಾಲೊಡ್ಡಲಿಲ್ಲ. ಬುಮ್ರಾ 3 ಬೌಂಡರಿಯನ್ನು ಯಶಸ್ವಿಯಾಗಿ ಗಳಿಸಿದರು. ಆದರೆ 48.5 ಬಾಲ್ನಲ್ಲಿ ವಿಕೆಟ್ ಕೊಟ್ಟಿದ್ದರಿಂದ ಭಾರತ 266ಕ್ಕೆ ಸರ್ವಪತನ ಕಂಡಿತು. ಪಾಕಿಸ್ತಾನ ಪರ ಶಾಹೀನ್ ಅಫ್ರಿದಿ 4 ವಿಕೆಟ್ ಮತ್ತು ನಸೀಮ್ ಶಾ, ಹ್ಯಾರಿಸ್ ರೌಫ್ ತಲಾ 3 ವಿಕೆಟ್ ಪಡೆದರು.
ಇದನ್ನೂ ಓದಿ: IND vs PAK: ಟಾಸ್ ಗೆದ್ದ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ಕೆ.. ಬಳಗದಲ್ಲಿ ಜಡೇಜ, ಕುಲದೀಪ್ ಸ್ಪಿನ್ ಜೋಡಿ