ETV Bharat / sports

2017ರ ಚಾಂಪಿಯನ್ಸ್​​​​​ ಟ್ರೋಫಿ ಫೈನಲ್​ ರೀತಿ ಭಾರತವನ್ನು ಸೋಲಿಸುವೆವು: ಪಾಕ್ ಕ್ರಿಕೆಟಿಗನ ಕನಸು

ಐಸಿಸಿ ವಿಶ್ವಕಪ್​ನ ಯಾವುದೇ ಪಂದ್ಯಗಳಲ್ಲಿ ಭಾರತದ ವಿರುದ್ಧ ಪಾಕ್​ ಗೆಲುವು ದಾಖಲಿಸಿಲ್ಲ. ಆದರೆ ಮುಂದಿನ ತಿಂಗಳು ನಡೆಯಲಿರುವ ಟಿ-20 ವಿಶ್ವಕಪ್​​ನ ಪಂದ್ಯದಲ್ಲಿ ಭಾರತವನ್ನು ಸೋಲಿಸುತ್ತೇವೆ ಅನ್ನೋದು ಪಾಕ್​ ಕ್ರಿಕೆಟಿಗನ ಮಾತು.

Hasan Ali
Hasan Ali
author img

By

Published : Sep 15, 2021, 10:29 PM IST

ಕರಾಚಿ(ಪಾಕಿಸ್ತಾನ): ಮುಂದಿನ ತಿಂಗಳಿಂದ ಬಹುನಿರೀಕ್ಷಿತ ಟಿ-20 ವಿಶ್ವಕಪ್ ಟೂರ್ನಿ​ ಆರಂಭಗೊಳ್ಳಲಿದೆ. ಅಕ್ಟೋಬರ್​​ 24ರಂದು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ಮುಖಾಮುಖಿಯಾಗಲಿವೆ.

ಈ ಪಂದ್ಯದ ಬಗ್ಗೆ ಈಗಿನಿಂದಲೇ ಅಭಿಮಾನಿಗಳಲ್ಲಿ ಕುತೂಹಲ ಮನೆಮಾಡಿದೆ. ಇದಕ್ಕೆ ಆಟಗಾರರು ಕೂಡಾ ಹೊರತಾಗಿಲ್ಲ. ಪಾಕ್​ ತಂಡದ ಆಲ್​​ರೌಂಡರ್​ ಹಸನ್​ ಅಲಿ ಪ್ರತಿಕ್ರಿಯಿಸಿದ್ದು, 2017ರ ಚಾಂಪಿಯನ್ಸ್​​​ ಟ್ರೋಫಿ ಫೈನಲ್​ ಪಂದ್ಯದಲ್ಲಿ ನಾವು ಭಾರತಕ್ಕೆ ಸೋಲುಣಿಸಿರುವ ರೀತಿಯಲ್ಲಿ ಈ ಸಲದ ವಿಶ್ವಕಪ್​ ಪಂದ್ಯದಲ್ಲೂ ಸೋಲುಣಿಸುತ್ತೇವೆ ಎಂದು ಹೇಳಿದ್ದಾರೆ. 2017ರ ಚಾಂಪಿಯನ್ಸ್​​ ಟ್ರೋಫಿ ಫೈನಲ್ ಪಂದ್ಯದ ಗೆಲುವಿನಿಂದ ನಾವು ಸ್ಫೂರ್ತಿ ಪಡೆಯಬಹುದು ಅನ್ನೋದು ಅಲಿ ಮಾತು.​

ಇಲ್ಲಿಯವರೆಗೆ ಪಾಕ್​​ ತಂಡ ವಿಶ್ವಕಪ್​ನ (ಏಕದಿನ, ಟಿ-20) ಯಾವುದೇ ಪಂದ್ಯಗಳಲ್ಲಿ ಭಾರತದ ವಿರುದ್ಧ ಗೆಲುವು ಸಾಧಿಸಿದ ಉದಾಹರಣೆ ಇಲ್ಲ. 2018ರಲ್ಲಿ ದುಬೈನಲ್ಲಿ ನಡೆದ ಏಷ್ಯಾಕಪ್​ ಹಾಗೂ 2019ರಲ್ಲಿ ಮ್ಯಾಂಚೆಸ್ಟರ್​ನಲ್ಲಿ ನಡೆದ ಏಕದಿನ ವಿಶ್ವಕಪ್​ನಲ್ಲೂ ಪಾಕ್​​ ಸೋಲುಂಡಿದೆ.

ಇದನ್ನೂ ಓದಿ: ಆದಿವಾಸಿಗಳ ಕನಸು ನನಸು.. ಸಿಎಂ ಹೆಲಿಕಾಪ್ಟರ್​ನಲ್ಲಿ ಬುಡಕಟ್ಟು ಜನಾಂಗದ ನಾಲ್ವರು ಪ್ರಯಾಣ..

ವರ್ಚುವಲ್​ ವಿಡಿಯೋ ಕಾನ್ಫರೆನ್ಸ್​​ನಲ್ಲಿ ಪಾಲ್ಗೊಂಡು ಮಾತನಾಡಿರುವ ಹಸನ್​ ಅಲಿ, 2017ರ ಚಾಂಪಿಯನ್ಸ್​ ಟ್ರೋಫಿಯಲ್ಲಿ ನಾವು ಭಾರತ ತಂಡಕ್ಕೆ ಸೋಲುಣಿಸಿದ್ದೆವು. ಅದೇ ರೀತಿ ಇದೀಗ ಮತ್ತೊಮ್ಮೆ ಸೋಲುಣಿಸಲು ಪ್ರಯತ್ನಿಸುತ್ತೇವೆ. ಭಾರತದ ವಿರುದ್ಧ ಆಡುವುದು ಯಾವಾಗಲೂ ಒತ್ತಡದಿಂದ ಕೂಡಿರುತ್ತದೆ. ಏಕೆಂದರೆ, ಎರಡು ದೇಶಗಳ ಅಭಿಮಾನಿಗಳಿಗೆ ಹೆಚ್ಚಿನ ನಿರೀಕ್ಷೆ ಇರುತ್ತದೆ. ನಮ್ಮ ಕೈಯಿಂದ ಆದಷ್ಟು ಉತ್ತಮ ಸ್ಪರ್ಧೆ ನೀಡಲು ಯತ್ನಿಸುತ್ತೇವೆ ಎಂದರು.

ಸಾಮಾನ್ಯವಾಗಿ ಕ್ರಿಕೆಟ್​ ಪಂದ್ಯಗಳಲ್ಲಿ ಆಸಕ್ತಿ ಇರದ ಜನರು ಕೂಡ ಭಾರತ-ಪಾಕ್​ ನಡುವಣ ಪಂದ್ಯಗಳನ್ನು ವೀಕ್ಷಣೆ ಮಾಡುತ್ತಾರೆ. ಹೀಗಾಗಿ ಆಟಗಾರರ ಮೇಲೂ ಹೆಚ್ಚಿನ ಒತ್ತಡವಿರುತ್ತದೆ ಎಂದು ಹಸನ್​ ಅಲಿ ಹೇಳುತ್ತಾರೆ. ಇದೇ ವೇಳೆ, ವಿಶ್ವಕಪ್​ ಆರಂಭಗೊಳ್ಳುವ ಕೆಲವು ದಿನಗಳ ಮುಂಚಿತವಾಗಿ ಪಾಕ್​ ತಂಡದ ಕೋಚ್​ಗಳು ಹುದ್ದೆ ತೊರೆದಿರುವುದು ಆಘಾತ ಮೂಡಿಸಿದೆ ಎಂದು ಅವರು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.