ETV Bharat / sports

PAK vs WI: 2ನೇ ಟಿ-20ಯಲ್ಲೂ ಗೆದ್ದ ಪಾಕ್​, ಕೊನೆ ಪಂದ್ಯ ಬಾಕಿ ಇರುವಾಗಲೇ ಸರಣಿ ಕೈವಶ - 2ನೇ ಟಿ20 ಗೆದ್ದ ಪಾಕಿಸ್ತಾನ

Pakistan vs West Indies T20 series: ವೆಸ್ಟ್​ ಇಂಡೀಸ್​ ವಿರುದ್ಧ ನಡೆದ ಎರಡನೇ ಟಿ20 ಪಂದ್ಯದಲ್ಲೂ ಆತಿಥೇಯ ಪಾಕ್​ ತಂಡ ಗೆಲುವಿನ ನಗೆ ಬೀರಿದ್ದು, ಈ ಮೂಲಕ ಸರಣಿಯನ್ನ 2-0 ಅಂತರದಿಂದ ಕೈವಶ ಮಾಡಿಕೊಂಡಿದೆ.

Pakistan beat west indies
Pakistan beat west indies
author img

By

Published : Dec 15, 2021, 3:09 AM IST

ಕರಾಚಿ: ಪ್ರವಾಸಿ ವೆಸ್ಟ್​​ ಇಂಡೀಸ್ ವಿರುದ್ಧ ಮೊದಲ ಟಿ-20 ಪಂದ್ಯದಲ್ಲಿ 63ರನ್​ಗಳ ಅಂತರದ ಗೆಲುವು ಸಾಧಿಸಿ ಮೂರು ಟಿ-20 ಪಂದ್ಯಗಳ ಸರಣಿಯಲ್ಲಿ ಮುನ್ನಡೆ ಕಾಯ್ದುಕೊಂಡಿದ್ದ ಪಾಕಿಸ್ತಾನ ತಂಡ ಇದೀಗ ಎರಡನೇ ಪಂದ್ಯದಲ್ಲೂ 9ರನ್​​ಗಳ ಅಂತರದ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಕ್ರಿಕೆಟ್​ ಸರಣಿಯಲ್ಲಿ 2-0 ಅಂತರದಿಂದ ಸರಣಿ ಕೈವಶ ಮಾಡಿಕೊಂಡಿದೆ.

ಕರಾಚಿ ರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್​​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಪಾಕಿಸ್ತಾನ ತಂಡ ನಿಗದಿತ 20 ಓವರ್​ಗಳಲ್ಲಿ 8ವಿಕೆಟ್​​ನಷ್ಟಕ್ಕೆ 172ರನ್​​ಗಳಿಕೆ ಮಾಡಿತು. ತಂಡದ ಪರ ವಿಕೆಟ್​ ಕೀಪರ್​ ರಿಜ್ವಾನ್​​ 38ರನ್​, ಹೈದರ್​ ಅಲಿ 31 ಹಾಗೂ ಶಾಬ್ದಾದ್​ ಖಾನ್​​ 28ರನ್​​ಗಳಿಕೆ ಮಾಡಿದರು.

173ರನ್​ಗಳ ಗುರಿ ಬೆನ್ನತ್ತಿದ್ದ ವೆಸ್ಟ್​ ಇಂಡೀಸ್​ ಆರಂಭದಲ್ಲೇ ವಿಕೆಟ್​ ಕಳೆದುಕೊಂಡಿತು. ಆರಂಭಿಕನಾಗಿ ಕಣಕ್ಕಿಳಿದಿದ್ದ ಶೈ ಹೋಪ್​ 1ರನ್​ಗಳಿಕೆ ಮಾಡಿ ವಿಕೆಟ್​ ಒಪ್ಪಿಸಿದರು. ಆದರೆ, ಬ್ರಾಂಡನ್​ ಕಿಂಗ್​​​ 67ರನ್​​ಗಳಿಕೆ ಮಾಡಿ ವಿಕೆಟ್​​ ಒಪ್ಪಿಸಿ ನಿರಾಸೆ ಮೂಡಿಸಿದರು. ತಂಡದ ಪರ ಮಧ್ಯಮ ಕ್ರಮಾಂಕದಲ್ಲಿ ಮಿಂಚಿದ ಶಿಫಾರ್ಡ್​​​ 19 ಎಸೆತಗಳಲ್ಲಿ 35ರನ್​​ಗಳಿಕೆ ಮಾಡಿ, ತಂಡವನ್ನ ಸೋಲಿನ ದವಡೆಯಿಂದ ಪಾರು ಮಾಡುವ ಪ್ರಯತ್ನ ಮಾಡಿದ್ರೂ, ಪ್ರಯೋಜನವಾಗಲಿಲ್ಲ.

ಇದನ್ನೂ ಓದಿರಿ: ವಿಜಯ ಹಜಾರೆ ಟ್ರೋಫಿ :115 ರನ್​ ಚೇಸ್​ ಮಾಡಲಾಗದೇ ಹೀನಾಯ ಸೋಲುಂಡ ತಮಿಳುನಾಡು!

ಕೆರಿಬಿಯನ್​​ ತಂಡ ಕೊನೆಯದಾಗಿ 20 ಓವರ್​​ಗಳಲ್ಲಿ 10 ವಿಕೆಟ್​​ನಷ್ಟಕ್ಕೆ 163ರನ್​ಗಳಿಕೆ ಮಾಡಿ 9ರನ್​ಗಳ ಅಂತರದ ಸೋಲು ಕಂಡಿತ್ತು. ಜೊತೆಗೆ ಸರಣಿಯಲ್ಲಿ 2-0 ಅಂತರದಿಂದ ಕೈಚೆಲ್ಲಿದೆ.

ನಾಳೆ ಉಭಯ ತಂಡಗಳ ಮಡಿವೆ ಕೊನೆಯ ಟಿ20 ಪಂದ್ಯ ನಡೆಯಲಿದ್ದು, ಪಾಕ್​ ಕೆಲವೊಂದು ಬದಲಾವಣೆ ಮಾಡುವ ಸಾಧ್ಯತೆ ಇದೆ. ಪಾಕಿಸ್ತಾನದ ಪರ ಶಾಹೀನ್​ ಆಫ್ರಿದಿ 3 ವಿಕೆಟ್,ಮೊಹಮ್ಮದ್ ನವಾಜ್​, ಮೊಹಮ್ಮದ್ ವಾಸೀಂ ಹಾಗೂ ಹ್ಯಾರಿಸ್​​ ರೌಪ್ ತಲಾ 2 ವಿಕೆಟ್ ಪಡೆದುಕೊಂಡರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.