ನವದೆಹಲಿ: ಆತಿಥೇಯ ಇಂಗ್ಲೆಂಡ್ ತಂಡ ನ್ಯೂಜಿಲ್ಯಾಂಡ್ ವಿರುದ್ಧ ಐದು ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದ್ದು, ಈ ಮೂಲಕ ಟೆಸ್ಟ್ ಸರಣಿಯಲ್ಲಿ 1-0 ಅಂತರದಿಂದ ಗೆಲುವು ದಾಖಲು ಮಾಡಿದೆ. ಇಂಗ್ಲೆಂಡ್ ತಂಡದ ನಾಯಕತ್ವ ತ್ಯಜಿಸಿದ ಬಳಿಕ ಅದ್ಭುತವಾಗಿ ಬ್ಯಾಟ್ ಬೀಸಿದ ಜೋ ರೂಟ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಪಿ. ಚಿದಂಬರಂ ಟ್ವೀಟ್ ಮಾಡಿದ್ದಾರೆ.
-
The way Joe Root and Ben Foakes batted and took England to victory against New Zealand is a fine demonstration of responsibility, discipline and character.
— P. Chidambaram (@PChidambaram_IN) June 5, 2022 " class="align-text-top noRightClick twitterSection" data="
That is true professionalism.
">The way Joe Root and Ben Foakes batted and took England to victory against New Zealand is a fine demonstration of responsibility, discipline and character.
— P. Chidambaram (@PChidambaram_IN) June 5, 2022
That is true professionalism.The way Joe Root and Ben Foakes batted and took England to victory against New Zealand is a fine demonstration of responsibility, discipline and character.
— P. Chidambaram (@PChidambaram_IN) June 5, 2022
That is true professionalism.
ಚಿದಂಬರಂ ಟ್ವೀಟ್: ನ್ಯೂಜಿಲ್ಯಾಂಡ್ ವಿರುದ್ಧದದ ಮೊದಲ ಟೆಸ್ಟ್ ಪಂದ್ಯಲ್ಲಿ ಜೋ ರೂಟ್ ಮತ್ತು ಬೆನ್ ಫೋಕ್ಸ್ ಬ್ಯಾಟಿಂಗ್ ಹಾಗೂ ಕಿವೀಸ್ ವಿರುದ್ಧ ಇಂಗ್ಲೆಂಡ್ ತಂಡವನ್ನ ಗೆಲುವಿನತ್ತ ಕೊಂಡೊಯ್ದ ರೀತಿ ನಿಜಕ್ಕೂ ಶ್ಲಾಘನೀಯ. ಅವರ ಜವಾಬ್ದಾರಿ, ಶಿಸ್ತು ಮತ್ತು ಬ್ಯಾಟಿಂಗ್ ಪ್ರದರ್ಶನ ಅದ್ಭುತ ಎಂದು ಟ್ವೀಟ್ ಮಾಡಿದ್ದು, ಇದು ನಿಜವಾದ ವೃತ್ತಿಪರತೆ ಎಂದು ಹೇಳಿದ್ದಾರೆ.
ಲಾರ್ಡ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ನೀಡಿದ್ದ 277ರನ್ಗಳ ಗುರಿ ಬೆನ್ನಟ್ಟಿದೆ ಇಂಗ್ಲೆಂಡ್ ಕೇವಲ 4 ವಿಕೆಟ್ನಷ್ಟಕ್ಕೆ 69ರನ್ಗಳಿಕೆ ಮಾಡಿ, ಸಂಕಷ್ಟದಲ್ಲಿತ್ತು. ಈ ವೇಳೆ ಮೈದಾನಕ್ಕಿಳಿದ ಮಾಜಿ ಕ್ಯಾಪ್ಟನ್ ರೂಟ್, ಬೆನ್ ಸ್ಟೋಕ್ಸ್ ಹಾಗೂ ಬೆನ್ ಫೋಕ್ಸ್ ಜೊತೆ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ, 5 ವಿಕೆಟ್ಗಳ ಗೆಲುವಿಗೆ ಕಾರಣವಾದರು. ಅವರ ರೂಟ್ ವೃತ್ತಿಪರತೆಗೆ ಇದೀಗ ಕಾಂಗ್ರೆಸ್ ಮುಖಂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಇನ್ನಿಂಗ್ಸ್ನಲ್ಲಿ 170 ಎಸೆತಗಳಲ್ಲಿ 115ರನ್ಗಳಿಕೆ ಮಾಡಿದ್ದ ರೂಟ್, ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು. ಇದರ ಜೊತೆಗೆ 10 ಸಾವಿರ ರನ್ ಪೂರೈಕೆ ಮಾಡಿದ ಇಂಗ್ಲೆಂಡ್ನ ಎರಡನೇ ಹಾಗೂ ಒಟ್ಟಾರೆ 14ನೇ ಪ್ಲೇಯರ್ ಆಗಿದ್ದಾರೆ.