ETV Bharat / sports

ವಿಶ್ವಕಪ್​ ಫೈನಲ್‌ನಲ್ಲಿ ಈವರೆಗೆ ದಾಖಲಾಗಿದ್ದು 6 ಶತಕ: ಇಂದಿನ ಶತಕವೀರ ಯಾರು? - ವಿಶ್ವಕಪ್​ ಫೈನಲ್ ಶತಕಗಳು

Centuries in World cup final: ವಿಶ್ವಕಪ್​ ಕ್ರಿಕೆಟ್‌ ಫೈನಲ್​ ಪಂದ್ಯಕ್ಕೆ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಸಜ್ಜಾಗಿದ್ದು, ಹಲವು ದಾಖಲೆಗಳು ಸೃಷ್ಟಿಯಾಗುವ ಸಾಧ್ಯತೆಗಳಿವೆ.

ಭಾರತ ಮತ್ತು ಆಸ್ಟ್ರೇಲಿಯಾ
ಭಾರತ ಮತ್ತು ಆಸ್ಟ್ರೇಲಿಯಾ
author img

By ETV Bharat Karnataka Team

Published : Nov 19, 2023, 12:14 PM IST

Updated : Nov 19, 2023, 12:31 PM IST

ಹೈದರಾಬಾದ್​: ಈ ಬಾರಿಯ ವಿಶ್ವಕಪ್ ಚಾಂಪಿಯನ್ ಯಾರು ಎಂದು ಇಡೀ ವಿಶ್ವವೇ ಕಾಯುತ್ತಿದೆ. ಈ ಪ್ರಶ್ನೆಗೆ ಇಂದು (ಭಾನುವಾರ) ರಾತ್ರಿ ವಿಶ್ವದ ಅತಿ ದೊಡ್ಡ, ಗುಜರಾತ್​ನ ಅಹಮದಾಬಾದ್‌ನ ಮೊಟೇರಾದಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಉತ್ತರ ಸಿಗಲಿದೆ. 13ನೇ ಆವೃತ್ತಿಯ ವಿಶ್ವಕಪ್​ ಫೈನಲ್ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾವನ್ನು 2 ಬಾರಿಯ ಚಾಂಪಿಯನ್‌ ಭಾರತ ಇನ್ನೇನು ಕೆಲವೇ ಹೊತ್ತಲ್ಲಿ ಎದುರಿಸಲಿದೆ.

ಯಾವ ತಂಡ ಕಪ್​ ಗೆಲ್ಲುವುದೋ ಎಂದು ಯೋಚಿಸುತ್ತಿರುವವರ ನಡುವೆ ಯಾರು ಈ ಪಂದ್ಯದಲ್ಲಿ ಶತಕ ಬಾರಿಸಿ ಸಾರ್ವಕಾಲಿನ ಶ್ರೇಷ್ಠ ಆಟಗಾರನಾಗಿ ಉಳಿಯುವರೋ ಎಂದು ಇನ್ನೊಂದು ವರ್ಗದ ಅಭಿಮಾನಿಗಳು ಚಡಪಡಿಸುತ್ತಿದ್ದಾರೆ. ಅಂದಹಾಗೆ, ಇಲ್ಲಿಯವರೆಗೆ ನಡೆದ ಒಟ್ಟು 12 ವಿಶ್ವಕಪ್ ಫೈನಲ್‌ಗಳಲ್ಲಿ ಕೇವಲ ಆರು ಬ್ಯಾಟರ್‌ಗಳು ಮಾತ್ರವೇ ಶತಕವೀರರಾಗಿ ಮಿಂಚಿದ್ದಾರೆ. ಇವರಲ್ಲಿ ಐದು ಬ್ಯಾಟರ್‌ಗಳು ತಮ್ಮ ತಂಡವನ್ನು ವಿಶ್ವ ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಇನ್ನೂ ವಿಶೇಷವೆಂದರೆ, ಈವರೆಗೆ ಫೈನಲ್‌ನಲ್ಲಿ ಇಬ್ಬರು ನಾಯಕರು ಮಾತ್ರ ಶತಕ ಸಿಡಿಸಿದ್ದಾರೆ. ಕೇವಲ ಮೂರು ತಂಡಗಳ ಆಟಗಾರರಿಂದಷ್ಟೇ ಶತಕದಾಟ ಮೂಡಿಬಂದಿದೆ. ಇಂದಿನ ಪಂದ್ಯದಲ್ಲಿ ಭಾರತ ತಂಡದ ನಾಯಕ ಹಿಟ್​ಮ್ಯಾನ್ ರೋಹಿತ್‌ ಶರ್ಮಾ​ ಸಿಡಿದೆದ್ದರೆ, ಈ ಸಾಧನೆಯ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಲಿದ್ದಾರೆ.

ಇನ್ನೊಂದೆಡೆ, ಶುಭ್‌ಮನ್​ ಗಿಲ್​, ವಿರಾಟ್​ ಕೊಹ್ಲಿ, ಶ್ರೇಯಸ್​ ಅಯ್ಯರ್​, ಕೆ.ಎಲ್.ರಾಹುಲ್​ ಅವರಿಗೂ ಕೂಡ ಶತಕದಾಟವಾಡುವ ಅವಕಾಶದ ಜೊತೆಗೆ ಸಾಮರ್ಥ್ಯವಿದೆ. ಆಸೀಸ್​ ಪರ ನೋಡುವುದಾದರೆ, ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್‌ರಂತಹ ಘಟಾನುಘಟಿಗಳಿದ್ದಾರೆ.

ವಿಶ್ವಕಪ್ 1975: ಕ್ಲೈವ್ ಲಾಯ್ಡ್- 102 ರನ್: 1975ರಲ್ಲಿ ಮೊಟ್ಟ ಮೊದಲ ಬಾರಿಗೆ ಪುರುಷರ ಏಕದಿನ ವಿಶ್ವಕಪ್​ ಕ್ರಿಕೆಟ್‌ ಪ್ರಾರಂಭವಾಯಿತು. ಚೊಚ್ಚಲ ಟೂರ್ನಿಯ ಫೈನಲ್​ನಲ್ಲಿ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ನಡುವೆ ಲಾರ್ಡ್ಸ್‌ನಲ್ಲಿ ಪಂದ್ಯ ನಡೆದಿತ್ತು. ಮೊದಲು ಬ್ಯಾಟ್ ಮಾಡಿದ್ದ ವೆಸ್ಟ್ ಇಂಡೀಸ್ ನಿಗದಿತ 60 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 291 ರನ್ ಗಳಿಸಿತ್ತು. ನಾಯಕ ಕ್ಲೈವ್ ಲಾಯ್ಡ್ 85 ಎಸೆತಗಳಲ್ಲಿ 102 ರನ್ ಗಳಿಸಿ ಅದ್ಭುತ ಇನ್ನಿಂಗ್ಸ್ ಆಡಿದ್ದರು. ಇದರಲ್ಲಿ 12 ಬೌಂಡರಿ ಮತ್ತು 2 ಸಿಕ್ಸರ್‌ಗಳಿದ್ದವು.

ಒಂದು ಹಂತದಲ್ಲಿ, ವೆಸ್ಟ್ ಇಂಡೀಸ್ 50 ರನ್‌ಗಳಿಂದ 3 ವಿಕೆಟ್‌ಗಳ ಕೊರತೆ ಹೊಂದಿತ್ತು. ಆದರೆ ರೋಹನ್ ಕನ್ಹೈ ಅವರೊಂದಿಗೆ ಕ್ಲೈವ್ ಲಾಯ್ಡ್ ನಾಲ್ಕನೇ ವಿಕೆಟ್‌ಗೆ 149 ರನ್ ಸೇರಿಸಿದರು. ಈ ಜೊತೆಯಾಟದಿದಾಗಿ ತಂಡ ಮುನ್ನಡೆ ಸಾಧಿಸಲು ಸಾಧ್ಯವಾಗಿತ್ತು. ವಿಂಡೀಸ್​ ನೀಡಿದ್ದ 292 ರನ್‌ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 274 ರನ್‌ಗಳಿಗೆ ಆಲೌಟ್ ಆಗಿತ್ತು. ಇದರೊಂದಿಗೆ ವೆಸ್ಟ್ ಇಂಡೀಸ್ ಮೊದಲ ವಿಶ್ವಕಪ್ ಗೆದ್ದುಕೊಂಡಿತ್ತು. ಅಂತಿಮ ಪಂದ್ಯದಲ್ಲಿ ಕ್ಲೈವ್ ಲಾಯ್ಡ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

ವಿಶ್ವಕಪ್ 1979: ವಿವಿ ರಿಚರ್ಡ್ಸ್ 138*ರನ್ : ಎರಡನೇ ವಿಶ್ವಕಪ್‌ನ ಫೈನಲ್ ಪಂದ್ಯ ಜೂನ್ 23, 1979ರಂದು ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ನಡುವೆ ಲಾರ್ಡ್ಸ್‌ನಲ್ಲಿ ನಡೆದಿತ್ತು. ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಸರ್ ವಿವಿ ರಿಚರ್ಡ್ಸ್ ಆಂಗ್ಲರ ನಿರ್ಧಾರವನ್ನು ತಲೆಕೆಳಗಾಗುವಂತೆ ಮಾಡಿದ್ದರು. ಬಿರುಸಿನ ಬ್ಯಾಟಿಂಗ್​ ಮಾಡಿದ್ದ ರಿಚರ್ಡ್ಸ್ 157 ಎಸೆತಗಳಲ್ಲಿ 11 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಹೊಡೆದು ಅಜೇಯ 138 ರನ್ ಗಳಿಸಿದ್ದರು. ಈ ಮೂಲಕ ವೆಸ್ಟ್ ಇಂಡೀಸ್ 286/9 ಟಾರ್ಗೆಟ್​ ನೀಡಿತ್ತು.

ಬಳಿಕ ಬ್ಯಾಟಿಂಗ್​ ಆರಂಭಿಸಿದ ಇಂಗ್ಲೆಂಡ್ 194 ರನ್‌ಗಳಿಗೆ ಆಲೌಟ್ ಆಗಿತ್ತು. ಇಂಗ್ಲೆಂಡ್ ತಂಡವನ್ನು 92 ರನ್‌ಗಳಿಂದ ಸೋಲಿಸಿದ ವೆಸ್ಟ್ ಇಂಡೀಸ್ ಸತತ ಎರಡನೇ ಬಾರಿಗೆ ವಿಶ್ವ ಚಾಂಪಿಯನ್ ಪ್ರಶಸ್ತಿ ಗೆದ್ದುಕೊಂಡಿತ್ತು. ತಮ್ಮ ಅಮೋಘ ಶತಕಕ್ಕಾಗಿ ಸರ್ ವಿವಿ ರಿಚರ್ಡ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

ವಿಶ್ವಕಪ್ 1996: ಅರವಿಂದ ಡಿ ಸಿಲ್ವಾ 107*ರನ್ : ಪಾಕಿಸ್ತಾನದ ಲಾಹೋರ್‌ನ ಗಡಾಫಿ ಸ್ಟೇಡಿಯಂನಲ್ಲಿ 6ನೇ ಕ್ರಿಕೆಟ್ ವಿಶ್ವಕಪ್‌ನ ಫೈನಲ್ ಪಂದ್ಯ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ನಡುವೆ ನಡೆದಿತ್ತು. ಶ್ರೀಲಂಕಾ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿದ್ದರಿಂದ ಬ್ಯಾಟಿಂಗ್​ ಮಾಡಿದ ಆಸ್ಟ್ರೇಲಿಯಾ ನಿಗದಿತ 50 ಓವರ್‌ಗಳಲ್ಲಿ 241/7 ಗಳಿಸಿತ್ತು.

ಈ ಗುರಿ ಬೆನ್ನಟ್ಟಿದ್ದ ಶ್ರೀಲಂಕಾ ಪರ ಅರವಿಂದ ಡಿ ಸಿಲ್ವಾ 124 ಎಸೆತಗಳಲ್ಲಿ ಔಟಾಗದೆ 107 ರನ್ ಗಳಿಸಿ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದರು. ಶ್ರೀಲಂಕಾ ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಆಗಿ ಕಿರೀಟ ಮುಡಿಗೇರಿಸಿಕೊಂಡಿತ್ತು. ಕೇವಲ 46.2 ಓವರ್‌ಗಳಲ್ಲಿ 245 ರನ್​ಗಳಿಗೆ 3 ವಿಕೆಟ್​ ಕಳೆದುಕೊಂಡು ಆಸ್ಟ್ರೇಲಿಯಾವನ್ನು ಏಳು ವಿಕೆಟ್‌ಗಳಿಂದ ಶ್ರೀಲಂಕಾ ಸೋಲಿಸಿತ್ತು. ಈ ಪಂದ್ಯದ ಗೆಲುವಿನ ಪ್ರಯತ್ನಕ್ಕಾಗಿ ಹೋರಾಡಿದ್ದ ಡಿ ಸಿಲ್ವಾ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ದೊರೆತಿತ್ತು.

ವಿಶ್ವಕಪ್ 2003: ರಿಕಿ ಪಾಂಟಿಂಗ್ 140*: 20 ವರ್ಷಗಳ ನಂತರ ಭಾರತ 2003ರಲ್ಲಿ ವಿಶ್ವಕಪ್ ಫೈನಲ್‌ಗೆ ಪ್ರವೇಶಿಸಿ, ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಆದರೆ ಆಸ್ಟ್ರೇಲಿಯಾದ ನಾಯಕ ರಿಕಿ ಪಾಂಟಿಂಗ್ ವಿಶ್ವ ಚಾಂಪಿಯನ್ ಹಾದಿಯಲ್ಲಿ ಅಡ್ಡಲಾಗಿ ಬಂದಿದ್ದರು. ಮಾರ್ಚ್ 23, 2003ರಂದು ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತದ ನಾಯಕ ಸೌರವ್ ಗಂಗೂಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು.

ಆದರೆ, ಬೌಲಿಂಗ್​ನಲ್ಲಿ ಸ್ವಲ್ಪ ಹಿನ್ನಡೆಯಾಗಿತ್ತು. ನಿಗದಿತ 50 ಓವರ್​ಗಳಲ್ಲಿ ಆಸ್ಟ್ರೇಲಿಯಾ 2 ವಿಕೆಟ್​ ಕಳೆದಕೊಂಡು 359 ರನ್​ ಗಳಿಸಿತ್ತು. ಆಸೀಸ್​ ಪರ ನಾಯಕ ರಿಕಿ ಪಾಂಟಿಂಗ್ 121 ಎಸೆತಗಳಲ್ಲಿ 4 ಬೌಂಡರಿ ಹಾಗೂ 8 ಸಿಕ್ಸರ್‌ಗಳ ನೆರವಿನಿಂದ ಅಜೇಯ 140 ರನ್ ಗಳಿಸಿದ್ದರು. ಆಸ್ಟ್ರೇಲಿಯಾ ನೀಡಿದ್ದ360 ರನ್ ಚೇಸ್​ ಮಾಡಲು ಹೊರಟ ಭಾರತ 234 ರನ್‌ಗಳಿಗೆ ಆಲೌಟ್ ಆಗಿತ್ತು. ಈ ಮೂಲಕ 125 ರನ್‌ಗಳ ಬಾರಿ ಅಂತರದಲ್ಲಿ ಪಂದ್ಯ ಗೆದ್ದು ಎರಡನೇ ಬಾರಿಗೆ ಆಸ್ಟ್ರೇಲಿಯಾ ವಿಶ್ವ ಚಾಂಪಿಯನ್ ಆಗಿತ್ತು. ರಿಕಿ ಪಾಟಿಂಗ್ ಅಜೇಯ ಶತಕಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

ವಿಶ್ವಕಪ್ 2007: ಆ್ಯಡಮ್ ಗಿಲ್‌ಕ್ರಿಸ್ಟ್ 149: ವೆಸ್ಟ್ ಇಂಡೀಸ್‌ನಲ್ಲಿ ಮೊದಲ ಬಾರಿಗೆ 9ನೇ ಆವೃತ್ತಿಯ ವಿಶ್ವಕಪ್ ಆಯೋಜನೆಗೊಂಡಿತ್ತು. 28 ಏಪ್ರಿಲ್ 2007ರಂದು ಬ್ರಿಡ್ಜ್‌ಟೌನ್‌ನಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ಮುಖಾಮುಖಿಯಾಗಿದ್ದವು. ಆಸ್ಟ್ರೇಲಿಯಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ನಾಯಕ ರಿಕಿ ಪಾಂಟಿಂಗ್ ಅವರ ನಿರ್ಧಾರ ಸಮರ್ಥಿಸಿಕೊಂಡ ಆರಂಭಿಕ ಆಟಗಾರ ಆಡಮ್ ಗಿಲ್‌ಕ್ರಿಸ್ಟ್ 104 ಎಸೆತಗಳಲ್ಲಿ 13 ಬೌಂಡರಿ ಮತ್ತು 8 ಸಿಕ್ಸರ್‌ಗಳೊಂದಿಗೆ ಬಿರುಸಿನ 149 ರನ್ ಗಳಿಸಿದ್ದರು. ಇದು​ ವಿಶ್ವಕಪ್ ಫೈನಲ್‌ನಲ್ಲಿ ಆಡಿದ ಅತ್ಯಧಿಕ ಇನ್ನಿಂಗ್ಸ್ ಆಗಿದೆ.

ಆಸ್ಟ್ರೇಲಿಯಾ ನಿಗದಿತ 38 ಓವರ್‌ಗಳಲ್ಲಿ 281/4 ಗಳಿಸಿತು. ಇದಕ್ಕೆ ಪ್ರತ್ಯುತ್ತರವಾಗಿ ಶ್ರೀಲಂಕಾವನ್ನು 215/8 ರನ್​ ಕಟ್ಟಿಹಾಕಲಾಗಿತ್ತು. ಆದರೇ, ಮತ್ತೊಂದೆಡೆ ಮಳೆ ಬಂದ ಕಾರಣ ಡಕ್ವರ್ತ್-ಲೂಯಿಸ್ ವಿಧಾನದ ಮೂಲಕ ಆಸ್ಟ್ರೇಲಿಯಾವು 53 ರನ್‌ಗಳಿಂದ ಸತತ ಮೂರನೇ ವಿಶ್ವಕಪ್ ಗೆದ್ದಿತು. ಗಿಲ್‌ಕ್ರಿಸ್ಟ್ ಪಂದ್ಯಶ್ರೇಷ್ಠ ಪ್ರಶಸ್ತಿ ಸಿಕ್ಕಿತ್ತು.

ವಿಶ್ವಕಪ್ 2011: ಮಹೇಲಾ ಜಯವರ್ಧನೆ 103*: ಏಪ್ರಿಲ್ 2, 2011 ವಾಂಖೆಡೆ ಸ್ಟೇಡಿಯಂನಲ್ಲಿ ಭಾರತವು ಶ್ರೀಲಂಕಾವನ್ನು ಆರು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಎರಡನೇ ಬಾರಿಗೆ ವಿಶ್ವ ಚಾಂಪಿಯನ್ ಆಗಿತ್ತು. ಶ್ರೀಲಂಕಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಲಂಕಾ ಪರ ನಾಯಕ ಮಹೇಲಾ ಜಯವರ್ಧನೆ ಅದ್ಭುತ ಇನ್ನಿಂಗ್ಸ್‌ ಆಡಿದ್ದರು. 88 ಎಸೆತಗಳಲ್ಲಿ 103 ರನ್ ಗಳಿಸಿ ಔಟಾಗದೆ ಉಳಿದಿದ್ದರು. ಇದರೊಂದಿಗೆ ಶ್ರೀಲಂಕಾ 274/6 ಗಳಿಸಿತು. ಇದಕ್ಕೆ ಉತ್ತರವಾಗಿ ಚೇಸ್​ ಮಾಡಿದ್ದ ಎಂ.ಎಸ್​.ಧೋನಿ ನಾಯಕತ್ವದ ಭಾರತ ನಾಲ್ಕು ವಿಕೆಟ್‌ಗಳಿಂದ ಪಂದ್ಯ ಗೆದ್ದುಕೊಂಡಿತ್ತು. ಮಹೇಲ ಜಯವರ್ಧನೆ ಶತಕ ವ್ಯರ್ಥವಾಗಿತ್ತು.

ವಿಶ್ವಕಪ್​ ಫೈನಲ್​ ಪಂದ್ಯ- ಶತಕವೀರರು: ಇಲ್ಲಿಯವರೆಗೆ ವಿಶ್ವಕಪ್ ಫೈನಲ್‌ನಲ್ಲಿ ಇಬ್ಬರು ನಾಯಕರು ಮಾತ್ರ ಶತಕ ಗಳಿಸಿದ್ದಾರೆ. 1975ರ ವಿಶ್ವಕಪ್ ಫೈನಲ್‌ನಲ್ಲಿ ವಿಂಡೀಸ್​ ಬ್ಯಾಟರ್​ ಸರ್ ಕ್ಲೈವ್ ಲಾಯ್ಡ್ ಮತ್ತು 2003ರ ವಿಶ್ವಕಪ್ ಫೈನಲ್‌ನಲ್ಲಿ ಆಸೀಸ್​ ನಾಯಕ ರಿಕಿ ಪಾಂಟಿಂಗ್ ಶತಕ ಸಿಡಿಸಿದ್ದಾರೆ.

ಇದನ್ನೂ ಓದಿ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಫೈನಲ್: ಕೊಹ್ಲಿ, ಅಶ್ವಿನ್​ಗೆ ವಿಶಿಷ್ಟ ದಾಖಲೆ ಬರೆಯುವ ಅವಕಾಶ

Last Updated : Nov 19, 2023, 12:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.