ETV Bharat / sports

NZ vs AUS T20 World Cup Final : ಕೆನ್​​​ ಕಮಾಲ್​.. ಕಪ್​​ ಗೆಲ್ಲಲು ಆಸೀಸ್​​​ಗೆ 173 ರನ್ ಗುರಿ..

ಐಸಿಸಿ ಟಿ-20 ವಿಶ್ವಕಪ್ (ICC T20 World Cup Final) ​​​ಫೈನಲ್​ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು 172 ರನ್​​​ ಗಳಿಸಿದೆ..

NZ vs AUS T20 World Cup Final
NZ vs AUS T20 World Cup Final
author img

By

Published : Nov 14, 2021, 9:16 PM IST

ದುಬೈ: ಐಸಿಸಿ ಟಿ-20 ವಿಶ್ವಕಪ್ (ICC T20 World Cup Final) ​​​ಫೈನಲ್​ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಆಸ್ಟ್ರೇಲಿಯಾ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿತು. ಟಾಸ್​​ ಸೋತು ಬ್ಯಾಟಿಂಗ್​ಗೆ ಇಳಿದ ಕೀವಿಸ್ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು 172 ರನ್​​​ ಗಳಿಸಿದೆ. ಆಸ್ಟ್ರೇಲಿಯಾಗೆ ಗೆಲ್ಲಲು 173 ರನ್​​ಗಳ ಗುರಿ ನೀಡಿದೆ.

ನ್ಯೂಜಿಲ್ಯಾಂಡ್​ ಪರ ಓಪನರ್​ ಆಗಿ ಕಣಕ್ಕಿಳಿದ ಮಾರ್ಟಿನ್ ಗಪ್ಟಿಲ್​, ಮಿಚೆಲ್ ತಂಡಕ್ಕೆ ಉತ್ತಮ ಅಡಿಪಾಯ ಹಾಕಿ ಕೊಡುವಲ್ಲಿ ಎಡವಿದರು. ಮಿಚಲ್​ 11 ರನ್​ಗಳಿಸಿದಾಗ ಹ್ಯಾಜಲ್​ವುಡ್​ಗೆ ವಿಕೆಟ್​​ ಒಪ್ಪಿಸಿದರು. ಈ ವೇಳೆ ನ್ಯೂಜಿಲ್ಯಾಂಡ್​​​ ತಂಡದ ಮೊತ್ತ 28 ರನ್​​ ಆಗಿತ್ತು.

ಮಿಚಲ್​​ ನಂತರ ಕ್ರೀಸ್​​ಗಿಳಿದ ನಾಯಕ ವಿಲಿಯಮ್ಸನ್​​, ಗಪ್ಟಿಲ್​ ಜೊತೆ ಸೇರೆ ಜವಾಬ್ದಾರಿಯುತ ಇನ್ನಿಂಗ್ಸ್​​ ಕಟ್ಟಿದರು. ಈ ಜೋಡಿ 7 ಓವರ್​​ಗಳಲ್ಲಿ 40 ರನ್​ಗಳ ಜೊತೆಯಾಟವಾಡಿತು. ಆದರೆ, ಆ್ಯಂಡ ಜಂಪಾ, ಗಪ್ಟಿಲ್​​ 28 ರನ್​​ಗಳಿಸಿದ್ದಾಗ ವಿಕೆಟ್​​ ಪಡೆಯುವ ಮೂಲಕ ಈ ಜೋಡಿಯನ್ನ ಬೇರ್ಪಡಿಸಿದರು.

ಗಪ್ಟಿಲ್​ ವಿಕೆಟ್​​ ನಂತರ ಬಂದ ಗ್ಲೆನ್​ ಪಿಲಿಪ್ಸ್ ಕೊನೆಯ ಓವರ್​​ಗಳಲ್ಲಿ ನಾಯಕನ ಜೊತೆಗೂಡಿ ಅಬ್ಬರದ ಆಟವಾಡುವ ಮೂಲಕ ರನ್​​ಗತಿಗೆ ವೇಗ ತುಂಬಿದರು. ಅಂತಿಮವಾಗಿ ಗ್ಲೆನ್​ ಪಿಲಿಪ್ಸ್ 18 ರನ್​ಗಳಿಸಿ ಔಟಾದರು.

ಇತ್ತ ನಾಯಕನ ಆಟವಾಡಿದ ವಿಲಿಯಮ್ಸನ್ ಅಬ್ಬರದ ಬ್ಯಾಟಿಂಗ್​ನಿಂದ 85 ರನ್​​ಗಳಿಸಿ ಹ್ಯಾಜಲ್​ವುಡ್​ಗೆ ವಿಕೆಟ್​ ನೀಡಿದರು. ಅಂತಿಮವಾಗಿ ಇನ್ನೂ ಕೇವಲ ಮೂರು ಓವರ್​ಗಳಿದ್ದಾಗ ಕ್ರೀಸ್‌​ಗೆ ಬಂದ ಜೇಮ್ಸ್​ ನಿಶಮ್ 13* ಮತ್ತು ಟಿಮ್ ಸಿಫರ್ಟ್ 6* ಅಬ್ಬರದ ಆಟವಾಡಿದರು.

ಇನ್ನೂ ಆಸ್ಟ್ರೇಲಿಯಾ ಪರ ಉತ್ತಮ ದಾಳಿ ನಡೆಸಿದ ಹ್ಯಾಜಲ್​ವುಡ್ ಮೂರು ವಿಕೆಟ್​​ ಪಡೆದು ಮಿಂಚಿದರೆ, ಆ್ಯಂಡ ಜಂಪಾ ಒಂದು ವಿಕೆಟ್​​ ಪಡೆದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.