ETV Bharat / sports

ಮತ್ತೆ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದೆ ನ್ಯೂಜಿಲ್ಯಾಂಡ್​, 5 ತಿಂಗಳ ಅಂತರದಲ್ಲಿ 15 ಪಂದ್ಯಗಳ್ನಾಡಲಿರುವ ಕಿವೀಸ್​

ಡಿಸೆಂಬರ್​ನಲ್ಲಿ ನಡೆಯಲಿರುವ ಎರಡು ಟೆಸ್ಟ್​ ಮತ್ತು 3 ಏಕದಿನ ಪಂದ್ಯಗಳು ಕ್ರಮವಾಗಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಮತ್ತು ಐಸಿಸಿ ಪುರುಷರ ಕ್ರಿಕೆಟ್​ ವಿಶ್ವಕಪ್​​ನ ಭಾಗವಾಗಿದೆ. ನ್ಯೂಜಿಲೆಂಡ್‌ ಕ್ರಿಕೆಟ್​ ತೆಗೆದುಕೊಂಡಿರುವ ಈ ದೃಢ ನಿರ್ಧಾರ ಪಾಕಿಸ್ತಾನದ ಕ್ರಿಕೆಟ್ ಸ್ಥಾನಮಾನವನ್ನು ಮರುದೃಢೀಕರಿಸುತ್ತದೆ ಎಂದು ರಮೀಜ್ ಸೋಮವಾರ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ..

NZ to return to Pakistan in 2023
ನ್ಯೂಜಿಲ್ಯಾಂಡ್ ತಂಡದಿಂದ ಪಾಕಿಸ್ತಾನ ಪ್ರವಾಸ
author img

By

Published : Dec 20, 2021, 3:13 PM IST

ಕರಾಚಿ : ಕಳೆದ ಸೆಪ್ಟೆಂಬರ್​ನಲ್ಲಿ ಭದ್ರತೆಯ ಕಾರಣ ನೀಡಿ ಪಾಕಿಸ್ತಾನ ಪ್ರವಾಸ ರದ್ದುಗೊಳಿಸಿದ್ದ ನ್ಯೂಜಿಲ್ಯಾಂಡ್​ ಕ್ರಿಕೆಟ್ ಮಂಡಳಿ ಇದೀಗ 2022-23ರಲ್ಲಿ ಎರಡು ಪ್ರವಾಸ ಕೈಗೊಳ್ಳಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸೋಮವಾರ ತಿಳಿಸಿದೆ.

ನ್ಯೂಜಿಲ್ಯಾಂಡ್​ ತಂಡ ಡಿಸೆಂಬರ್​/ಜನವರಿಯಲ್ಲಿ 2022-23ರ ಭವಿಷ್ಯದ ಪ್ರವಾಸ ಕಾರ್ಯಕ್ರದ ಅನ್ವಯ ಎರಡು ಟೆಸ್ಟ್​ ಮತ್ತು 3 ಏಕದಿನ ಪಂದ್ಯಗಳನ್ನಾಡಲಿದೆ. ಕಳೆದ ಸೆಪ್ಟೆಂಬರ್​​ನಲ್ಲಿ ರದ್ದಾಗಿದ್ದ ಸರಣಿಯನ್ನಾಡಲು 2023ರ ಏಪ್ರಿಲ್​ನಲ್ಲಿ 5 ಏಕದಿನ ಪಂದ್ಯ ಮತ್ತು 5 ಟಿ20 ಪಂದ್ಯಗಳನ್ನಾಡಲು ಮತ್ತೆ ಪಾಕಿಸ್ತಾನಕ್ಕೆ ಬರಲಿದೆ ಎಂದು ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ ತಿಳಿಸಿದ್ದಾರೆ.

ಡಿಸೆಂಬರ್​ನಲ್ಲಿ ನಡೆಯಲಿರುವ ಎರಡು ಟೆಸ್ಟ್​ ಮತ್ತು 3 ಏಕದಿನ ಪಂದ್ಯಗಳು ಕ್ರಮವಾಗಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಮತ್ತು ಐಸಿಸಿ ಪುರುಷರ ಕ್ರಿಕೆಟ್​ ವಿಶ್ವಕಪ್​​ನ ಭಾಗವಾಗಿದೆ. ನ್ಯೂಜಿಲೆಂಡ್‌ ಕ್ರಿಕೆಟ್​ ತೆಗೆದುಕೊಂಡಿರುವ ಈ ದೃಢ ನಿರ್ಧಾರ ಪಾಕಿಸ್ತಾನದ ಕ್ರಿಕೆಟ್ ಸ್ಥಾನಮಾನವನ್ನು ಮರುದೃಢೀಕರಿಸುತ್ತದೆ ಎಂದು ರಮೀಜ್ ಸೋಮವಾರ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

2022-23ರವೇಳೆಗೆ ಪಾಕಿಸ್ತಾನ 8 ಟೆಸ್ಟ್​ ಪಂದ್ಯಗಳು, 11 ಏಕದಿನ ಪಂದ್ಯಗಳು ಮತ್ತು 12 ಟಿ20 ಪಂದ್ಯಗಳಿಗೆ ಕ್ರಿಕೆಟ್​ನ ದೊಡ್ಡ ರಾಷ್ಟ್ರಗಳಾದ ಆಸ್ಟ್ರೇಲಿಯಾ, ಇಂಗ್ಲೆಂಡ್​ ಮತ್ತು ನ್ಯೂಜಿಲ್ಯಾಂಡ್ ತಂಡಗಳಿಗೆ ಆತಿಥ್ಯವಹಿಸಲಿದೆ ಎಂದು ರಮೀಜ್​ ತಿಳಿಸಿದ್ದಾರೆ.

ಇದನ್ನೂ ಓದಿ:ಅಂಡರ್​ 19 ವಿಶ್ವಕಪ್​ಗೆ ಭಾರತ ತಂಡ ಪ್ರಕಟ : ಡೆಲ್ಲಿಯ ಯಶ್ ಧುಲ್ ನಾಯಕ, ಕರ್ನಾಟಕದ ಅನೀಶ್ವರ್‌ಗೆ ಅವಕಾಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.