ಸೌತಾಂಪ್ಟನ್: ಭಾರತ - ನ್ಯೂಜಿಲ್ಯಾಂಡ್ ನಡುವೆ ಇಂದಿನಿಂದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಆರಂಭಗೊಳ್ಳಲಿದೆ. ಆದರೆ, ಇದಕ್ಕೆ ಮಳೆಯ ಕಾಟ ಶುರುವಾಗಿದ್ದು, ಇದೇ ಕಾರಣಕ್ಕಾಗಿ ಟಾಸ್ನಲ್ಲಿ ವಿಳಂಬವಾಗಿದೆ. ಪಂದ್ಯ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ಮಾತನಾಡಿರುವ ನ್ಯೂಜಿಲ್ಯಾಂಡ್ ತಂಡದ ಕ್ಯಾಪ್ಟನ್ ಕೇನ್ ವಿಲಿಯಮ್ಸನ್, ಎದುರಾಳಿ ತಂಡ ಕಟ್ಟಿಹಾಕುವ ಉದ್ದೇಶದಿಂದ ಫೈನಲ್ ಪಂದ್ಯದಲ್ಲಿ ನಾವು ವೇಗದ ಬೌಲಿಂಗ್ ಬಗ್ಗೆ ಹೆಚ್ಚಿನ ಗಮನ ಹರಿಸಲಿದ್ದೇವೆ ಎಂದಿದ್ದಾರೆ.
-
🔝 Being the top-ranked side
— ICC (@ICC) June 18, 2021 " class="align-text-top noRightClick twitterSection" data="
📜 Team selection
🛣 @BLACKCAPS' journey to Southampton
Skipper Kane Williamson chats how his team is shaping up ahead of the #WTC21 Final 🇳🇿#INDvNZ pic.twitter.com/EEOJleWEF7
">🔝 Being the top-ranked side
— ICC (@ICC) June 18, 2021
📜 Team selection
🛣 @BLACKCAPS' journey to Southampton
Skipper Kane Williamson chats how his team is shaping up ahead of the #WTC21 Final 🇳🇿#INDvNZ pic.twitter.com/EEOJleWEF7🔝 Being the top-ranked side
— ICC (@ICC) June 18, 2021
📜 Team selection
🛣 @BLACKCAPS' journey to Southampton
Skipper Kane Williamson chats how his team is shaping up ahead of the #WTC21 Final 🇳🇿#INDvNZ pic.twitter.com/EEOJleWEF7
ಕೇನ್ ವಿಲಿಯಮ್ಸನ್ ಮಾತನಾಡಿರುವ ವಿಡಿಯೋ ತುಣಕವೊಂದನ್ನ ಐಸಿಸಿ ವೆಬ್ಸೈಟ್ನಲ್ಲಿ ಪೋಸ್ಟ್ ಮಾಡಲಾಗಿದೆ. ನಾವು ಆಡುವ ಕ್ರಿಕೆಟ್ ಬಗ್ಗೆ ಹೆಚ್ಚಿನ ಗಮನ ಹರಿಸುತ್ತೇವೆ. ಈ ಸೆಷನ್ ಆನಂದಿಸುವುದು ನಮ್ಮ ತಂಡಕ್ಕೆ ಮುಖ್ಯವಾಗಿದೆ. ಕಳೆದ ಕೆಲ ದಿನಳಿಂದ ನಮ್ಮ ಪ್ಲೇಯರ್ಸ್ ಚೆನ್ನಾಗಿ ಬ್ಯಾಟಿಂಗ್ ಮಾಡ್ತಿದ್ದು, ಬೌಲರ್ಸ್ ಕೂಡ ಉತ್ತಮ ಕೊಡುಗೆ ನೀಡಿದ್ದಾರೆ.
ನ್ಯೂಜಿಲ್ಯಾಂಡ್ ವೇಗದ ಬೌಲಿಂಗ್ ವಿಭಾಗ ಭಾರತಕ್ಕೆ ಕಠಿಣ ಸ್ಪರ್ಧೆ ನೀಡಲಿದೆ ಎಂದು ಅವರು ತಿಳಿಸಿದ್ದಾರೆ. ಬೌಲಿಂಗ್ ವಿಭಾಗ ಚೆನ್ನಾಗಿರುವ ಕಾರಣ ಅದು ನಮಗೆ ಟ್ರಂಪ್ ಕಾರ್ಡ್. ಎದುರಾಳಿ ತಂಡ ಕಟ್ಟಿಹಾಕುವಲ್ಲಿ ಅದು ನಮಗೆ ಸಹಾಯ ಮಾಡಲಿದೆ ಎಂಬ ವಿಶ್ವಾಸವಿದೆ ಎಂದು ವಿಲಿಯಮ್ಸನ್ ತಿಳಿಸಿದ್ದಾರೆ.
ಇದನ್ನೂ ಓದಿರಿ: WTC ಫೈನಲ್ ಪಂದ್ಯಕ್ಕೆ ಮಳೆ ಕಾಟ: ಮೊದಲ ಸೆಷನ್ ರದ್ದು
ಕಳೆದ ಕೆಲ ದಿನಗಳ ಹಿಂದೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನಾವು ಗೆಲುವು ಸಾಧಿಸಲು ಬೌಲಿಂಗ್ ವಿಭಾಗ ಸಹಾಯ ಮಾಡಿದ್ದು, ಭಾರತದ ಎದುರು ಸಹ ಅದೇ ರೀತಿಯ ಪ್ರದರ್ಶನ ನೀಡುತ್ತಾರೆಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ. ಲಾರ್ಡ್ಸ್ನಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ನ್ಯೂಜಿಲ್ಯಾಂಡ್ ಬ್ಯಾಟ್ಸ್ಮನ್ ಕಾನ್ವೇ ದ್ವಿಶತಕ ಬಾರಿಸಿದ್ರೆ, ಥಿಮ್ ಸೌಥಿ ಪ್ರಥಮ ಇನ್ನಿಂಗ್ಸ್ನಲ್ಲಿ ಆರು ವಿಕೆಟ್ ಪಡೆದು ಮಿಂಚಿದ್ದರು. ಎರಡನೇ ಟೆಸ್ಟ್ ಪಂದ್ಯದಲ್ಲಿ ಬೌಲ್ಟ್, ಹೆನ್ರಿ ಕೂಡ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ ಎಂದರು.
ಕ್ರಿಕೆಟ್ನಲ್ಲಿ ಏನು ಬೇಕಾದರೂ ಆಗಬಹುದು. ಗೆಲುವು ಸಾಧಿಸಬೇಕು ಎಂಬ ಉದ್ದೇಶದಿಂದ ಎರಡು ತಂಡಗಳು ಸಾಧ್ಯವಾದಷ್ಟು ಯೋಜನೆ ರೂಪಿಸಿಕೊಂಡಿವೆ. ಕ್ರಿಕೆಟ್ನಲ್ಲಿ ಇದು ಕೂಡ ಒಂದು ಪಂದ್ಯವಾಗಿದೆ ಎಂದು ವಿಲಿಯಮ್ಸನ್ ತಿಳಿಸಿದ್ದಾರೆ.