ETV Bharat / sports

ಟೆಸ್ಟ್ ಚಾಂಪಿಯನ್​​ಶಿಪ್​​ನಲ್ಲಿ ಭಾರತದ ವಿರುದ್ಧ ಹೊಸ ಇತಿಹಾಸ ಸೃಷ್ಟಿಸಲಿದ್ದೇವೆ: ಟ್ರೆಂಟ್ ಬೋಲ್ಟ್​​ - ಸೌತ್​​​​​​​​​ಹ್ಯಾಂಮ್ಟನ್​​

ನ್ಯೂಜಿಲೆಂಡ್ ಸೇರಿ ಇತರೆಡೆ ನಮ್ಮ ತಂಡ ತೋರಿರುವ ಪ್ರದರ್ಶನ ಉತ್ತಮವಾಗಿದೆ. ಹೊಸ ಇತಿಹಾಸ ಸೃಷ್ಟಿಸುವಲ್ಲಿ ಇದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಬೋಲ್ಟ್ ಅಭಿಪ್ರಾಯಪಟ್ಟಿದ್ದಾರೆ.

boult-on-wtc-final
ಟ್ರೆಂಟ್ ಬೋಲ್ಟ್​​
author img

By

Published : Jun 1, 2021, 7:18 PM IST

ವೆಲ್ಲಿಂಗ್ಟನ್( ನ್ಯೂಜಿಲ್ಯಾಂಡ್​): ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್​ನಲ್ಲಿ ಭಾರತದ ವಿರುದ್ಧ ಚೊಚ್ಚಲ ಪ್ರಶಸ್ತಿ ಗೆದ್ದು ಇತಿಹಾಸ ಸೃಷ್ಟಿಸಲಿದ್ದೇವೆ ಎಂದು ನ್ಯೂಜಿಲ್ಯಾಂಡ್​​​ನ ಬೌಲರ್ ಟ್ರೆಂಟ್​ ಬೋಲ್ಟ್ ಹೇಳಿದ್ದಾರೆ.

ಸೌತ್​​​​​​​​​ಹ್ಯಾಂಮ್ಟನ್​​ನಲ್ಲಿ ಜೂನ್ 18ರಿಂದ 22ರ ವರೆಗೆ ನಡೆಯಲಿರುವ ಏಕೈಕ ಟೆಸ್ಟ್ ಮ್ಯಾಚ್​​​ನಲ್ಲಿ ಮೊದಲ ವಿಶ್ವ ಟೆಸ್ಟ್ ಚಾಂಪಿಯನ್ ಟ್ರೋಫಿಗಾಗಿ ಭಾರತ - ನ್ಯೂಜಿಲ್ಯಾಂಡ್​ ಸೆಣೆಸಾಡಲಿವೆ.

ನ್ಯೂಜಿಲ್ಯಾಂಡ್​ ಸೇರಿ ಇತರೆಡೆ ನಮ್ಮ ತಂಡ ತೋರಿರುವ ಪ್ರದರ್ಶನ ಉತ್ತಮವಾಗಿದೆ. ಹೊಸ ಇತಿಹಾಸ ಸೃಷ್ಟಿಸುವಲ್ಲಿ ಇದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಬೋಲ್ಟ್ ಅಭಿಪ್ರಾಯಪಟ್ಟಿದ್ದಾರೆ.

ಈ ಬಾರಿ ಟೆಸ್ಟ್ ಚಾಂಪಿಯನ್​ಶಿಪ್​​ನಲ್ಲಿ ‘ಡ್ಯೂಕ್’​ ಚೆಂಡಿನ ಬಳಕೆಯ ಬಗ್ಗೆ ಪ್ರತಿಕ್ರಿಯಿಸಿ, ಈ ಕುರಿತು ನನಗೆ ಹೆಚ್ಚಿನ ಅನುಭವವಿಲ್ಲ. ಇಂಗ್ಲೆಂಡ್ ನೆಲದಲ್ಲಿ ಕೆಲ ಟೆಸ್ಟ್​ಗಳ ಆಡಿರುವ ಅನುಭವವಿದೆ. ಈ ಬಾಲ್​​ ತುಸು ಭಿನ್ನವಾಗಿ ಪ್ರತಿಕ್ರಿಯಿಸುತ್ತದೆ ಎಂದಿದ್ದಾರೆ.

ಇತ್ತ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ದೃಷ್ಟಿಯಲ್ಲಿಟ್ಟುಕೊಂಡು ಎರಡು ರೆಡ್​ಬಾಲ್​ ಸರಣಿಗಾಗಿ ಇಂಗ್ಲೆಂಡ್​​ಗೆ ನ್ಯೂಜಿಲ್ಯಾಂಡ್​​​ ತಂಡ ಪ್ರವಾಸ ಕೈಗೊಳ್ಳುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.