ETV Bharat / sports

ಲಂಕಾ ವಿರುದ್ಧ ಕಿವೀಸ್​ ಕ್ಲೀನ್​ ಸ್ವೀಪ್​ ಸಾಧನೆ: ಇನ್ನಿಂಗ್ಸ್​ ಗೆಲುವು ಸಾಧಿಸಿದ ನ್ಯೂಜಿಲೆಂಡ್​ - ETV Bharath Kannada news

ಲಂಕಾ ವಿರುದ್ಧ ಕ್ಲೀನ್​ ಸ್ವೀಪ್​ ಸಾಧಿಸಿದ ಕಿವೀಸ್​ - ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್​ ಸ್ಪರ್ಧೆಯಿಂದ ಲಂಕಾ ಔಟ್​ - ಲಂಕಾ ವಿರುದ್ಧ ಇನ್ನಿಂಗ್ಸ್​ ಜಯ ಸಾಧಿಸಿದ ನ್ಯೂಜಿಲೆಂಡ್​

New Zealand won by an innings and 58 runs
ಲಂಕಾ ವಿರುದ್ಧ ಕಿವೀಸ್​ ಕ್ಲೀನ್​ ಸ್ವೀಪ್​ ಸಾಧನೆ
author img

By

Published : Mar 20, 2023, 5:54 PM IST

ನವದೆಹಲಿ: ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ಗೆ ಪ್ರವೇಶ ಪಡೆಯಲು ಶ್ರೀಲಂಕಾ ನ್ಯೂಜಿಲೆಂಡ್​ನಲ್ಲಿ 2-0ಯಿಂದ ಸರಣಿ ವಶಪಡಿಸಿಕೊಳ್ಳ ಬೇಕಿತ್ತು. ಆದರೆ ನ್ಯೂಜಿಲೆಂಡ್​ ಪ್ರವಾಸದ ಟೆಸ್ಟ್​ನಲ್ಲಿ ಸಿಂಹಳೀಯರು ವೈಟ್​ ವಾಷ್​ ಆಗಿದೆ. ನ್ಯೂಜಿಲೆಂಡ್​ ಲಂಕಾವನ್ನು ಕ್ಲೀನ್​ ಸ್ವೀಪ್​ ಮಾಡಿ ಸರಣಿ ವಶಪಡಿಸಿಕೊಂಡಿದೆ. ಮೊದಲ ಟೆಸ್ಟ್​ನ್ನು ರೋಚಕವಾಗಿ 2 ವಿಕೆಟ್​ನಿಂದ ಗೆದ್ದರೆ, ಎರಡನೇ ಟೆಸ್ಟ್​ನ್ನು ಇನ್ನಿಂಗ್ಸ್​ ಸಹಿತ 58 ರನ್​ಗಳ ಜಯ ದಾಖಲಿಸಿದೆ.

ಮೊದಲ ಟೆಸ್ಟ್​ನಲ್ಲಿ ಲಂಕಾ ಸೋಲಿನಿಂದ ಭಾರತ ಜೂನ್​ 7 ರಿಂದ ಓವೆಲ್​ನಲ್ಲಿ ಆರಂಭವಾಗಲಿರುವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ ಪ್ರವೇಶಿಸಿದೆ. ಎರಡನೇ ಟೆಸ್ಟ್​ನಲ್ಲಿ ನ್ಯೂಜಿಲೆಂಡ್​ ನೀಡಿದ ಬೃಹತ್​ ಗುರಿಯನ್ನು ಶ್ರೀಲಂಕಾ ಎರಡು ಇನ್ನಿಂಗ್ಸ್​ಗಳಿಂದ ಸಾಧಿಸಲಾಗದೇ ಇನ್ನಿಂಗ್ಸ್​ ಸಹಿತ ಸೋಲನುಭವಿಸಿದೆ.

ನ್ಯೂಜಿಲೆಂಡ್ ಮೊದಲ ಇನಿಂಗ್ಸ್ ನಲ್ಲಿ 580 ರನ್ ಗಳಿಸಿತ್ತು. ಈ ಇನ್ನಿಂಗ್ಸ್​ನಲ್ಲಿ ಇಬ್ಬರು ಆಟಗಾರರು ದ್ವಿಶತಕ ಸಿಡಿಸಿದ್ದರು. ಕೇನ್ ವಿಲಿಯಮ್ಸನ್ 215 ರನ್‌ಗಳ ಇನಿಂಗ್ಸ್ ಆಡಿದರು. ಹೆನ್ರಿ ನಿಕೋಲ್ಸ್ 200 ರನ್ ಗಳಿಸಿದ್ದರು. ನ್ಯೂಜಿಲೆಂಡ್‌ನ 580 ರನ್‌ಗಳಿಗೆ ಉತ್ತರವಾಗಿ ಶ್ರೀಲಂಕಾ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 164 ರನ್‌ಗಳಿಗೆ ಆಲೌಟ್ ಆಗಿತ್ತು. ಫಾಲೋ ಆನ್ ಆಡಲು ಹೊರಬಿದ್ದ ಶ್ರೀಲಂಕಾ ತಂಡಕ್ಕೆ ಎರಡನೇ ಇನ್ನಿಂಗ್ಸ್ ನಲ್ಲೂ ನ್ಯೂಜಿಲೆಂಡ್ ಬೌಲರ್ ಗಳನ್ನು ಎದುರಿಸಲು ಸಾಧ್ಯವಾಗಲಿಲ್ಲ. ಇಡೀ ಶ್ರೀಲಂಕಾ ತಂಡವನ್ನು 358 ರನ್‌ಗಳಿಗೆ ಇಳಿಸಲಾಯಿತು.

ಶ್ರೀಲಂಕಾ ನಾಯಕ ದಿಮುತ್ ಕರುಣರತ್ನೆ ಮೊದಲ ಇನ್ನಿಂಗ್ಸ್‌ನಲ್ಲಿ ಗರಿಷ್ಠ 89 ರನ್ ಗಳಿಸಿದರು. ಶ್ರೀಲಂಕಾದ ನಾಲ್ವರು ಆಟಗಾರರು ಖಾತೆ ತೆರೆಯದೆ ಪೆವಿಲಿಯಸ್​ಗೆ ಮರಳಿದರು. ಧನಂಜಯ್ ಡಿ ಸಿಲ್ವಾ ಎರಡನೇ ಇನ್ನಿಂಗ್ಸ್‌ನಲ್ಲಿ 98 ರನ್ ಗಳಿಸಿದರು. ದಿನೇಶ್ ಚಾಂಡಿಮಾಲ್ ಕೂಡ 62 ರನ್ ಗಳಿಸಿ ಇನ್ನಿಂಗ್ಸ್ ಆಡಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ದಿಮುತ್ 51 ರನ್ ಗಳಿಸಿದರು. ಕುಸಾಲ್ ಮೆಂಡಿಸ್ ಕೂಡ 50 ರನ್​ಗಳಿಸಿ ತಂಡ ಸೋಲಿನ ಅಂತರವನ್ನು ಕಡಿಮೆ ಮಾಡಿದರು.

ಮೊದಲ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ ಎರಡು ವಿಕೆಟ್‌ಗಳ ಜಯ: ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್ ಎರಡು ವಿಕೆಟ್‌ಗಳಿಂದ ರೋಚಕ ಜಯ ಸಾಧಿಸಿತ್ತು. ಈ ಪಂದ್ಯವನ್ನು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2021-23 ಅಡಿಯಲ್ಲಿ ಆಡಲಾಯಿತು. ಈ ಪಂದ್ಯ ಏಕದಿನದಷ್ಟೇ ರೋಚಕವಾಗಿತ್ತು. ಕೊನೆಯ ಓವರ್‌ನಲ್ಲಿ ನ್ಯೂಜಿಲೆಂಡ್‌ಗೆ ಎಂಟು ರನ್‌ಗಳ ಅಗತ್ಯವಿತ್ತು. ಕೇನ್ ವಿಲಿಯಮ್ಸನ್ ಮತ್ತು ಅಸಿತಾ ಫೆರ್ನಾಂಡೋ ಮೈದಾನದಲ್ಲಿದ್ದರು. ಓವರ್‌ನ ಮೊದಲ ಮತ್ತು ಎರಡನೇ ಎಸೆತಗಳಲ್ಲಿ ತಲಾ ಒಂದು ರನ್. ಮೂರನೇ ಎಸೆತದಲ್ಲಿ ಒಂದು ರನ್ ಮತ್ತು ಒಂದು ರನ್ ಔಟ್ ಆಯಿತು. ನಾಲ್ಕನೇ ಎಸೆತದಲ್ಲಿ ಫೋರ್ ಹೊಡೆದರು. ಐದನೇ ಚೆಂಡು ಡಾಟ್ ಆಗಿತ್ತು. ಆರನೇ ಎಸೆತದಲ್ಲಿ ಬೈ ರನ್‌ನಿಂದ ನ್ಯೂಜಿಲೆಂಡ್ ಪಂದ್ಯವನ್ನು ಗೆದ್ದುಕೊಂಡಿತು.

ಇದನ್ನೂ ಓದಿ: ಅಮೆರಿಕದಲ್ಲಿ ಐಪಿಎಲ್​ ಮಾದರಿಯ ಲೀಗ್​: ಭಾರತೀಯ ಪ್ರಾಂಚೈಸಿಗಳದ್ದೇ ಕಾರುಬಾರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.