ನೇಪಿಯರ್(ನ್ಯೂಜಿಲ್ಯಾಂಡ್ ): ಮೌಂಟ್ ಮೌಂಗನುಯಿಯಲ್ಲಿರುವ ಬೇ ಓವಲ್‌ನಲ್ಲಿ ನಡೆದ ಎರಡನೇ ಟಿ20ಐನಲ್ಲಿ ಭಾರತ 65 ರನ್‌ಗಳ ಜಯ ಸಾಧಿಸಿದ ನಂತರ ಮೂರನೇ ಪಂದ್ಯಕ್ಕೆ ಕೆಲವು ಆಟಗಾರರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಮೂರನೇ ಪಂದ್ಯ ಗೆದ್ದು ಸರಣಿ ವಶ ಪಡಿಸಿಕೊಳ್ಳುವ ತವಕದಲ್ಲಿ ಬ್ಲೂ ಕ್ಯಾಪ್ಸ್ ಇದ್ದರೆ, ಸರಣಿ ಸಮಬಲ ಮಾಡಿಕೊಳ್ಳಲು ಕಿವೀಸ್ ಹವಣಿಸುತ್ತಿದೆ.
ಟಿ 20ಯಲ್ಲಿ ಅದ್ಭುತ ಫಾರ್ಮ್ನಲ್ಲಿರುವ ಸೂರ್ಯ ಭಾರತಕ್ಕೆ ಆಸರೆ. ಆದರೆ ವಿಶ್ವಕಪ್ಗೂ ಮೊದಲಿನಿಂದ ಭಾರತ ಉತ್ತಮ ಆರಂಭ ಗಳಿಸದಿರುವುದು ಭಾರತದ ಋಣಾತ್ಮಕ ಅಂಶವಾಗಿದೆ. ಬೌಲಿಂಗ್ ವಿಭಾಗದಲ್ಲಿ ಹೂಡಾ ಹೊಸಾ ಭರವಸೆ ಮೂಡಿಸಿದ್ದು, ಚಹಾಲ್ ಮತ್ತು ಸುಂದರ್ಗೆ ಸಾಥ್ ನೀಡುತ್ತಿದ್ದಾರೆ. ನಾಯಕ ಹಾರ್ದಿಕ್ ಕೂಡ ಮಧ್ಯಮ ಕ್ರಮಾಂಕದಲ್ಲಿ ಜವಾಬ್ದಾರಿ ಮೆರೆಯ ಬೇಕಿದೆ. ಪಂತ್ ಆರಂಭಿಕರಾಗಿ ಬಡ್ತಿ ಪಡೆದಿರುವಾಗ ಅವರ ಮೇಲೆ ಇನ್ನಷ್ಟೂ ನಿರೀಕ್ಷೆ ಹೆಚ್ಚಿದೆ.
ಬ್ಲಾಕ್ ಕ್ಯಾಪ್ಸ್ನ ಕಾಯಂ ನಾಯಕ ಕೇನ್ ವಿಲಿಯಮ್ಸನ್ ಮೂರನೇ ಪಂದ್ಯಕ್ಕೆ ಅಲಭ್ಯರಾಗಿರುವುದು ಕಿವೀಸ್ನ ದೊಡ್ಡ ವೀಕ್ನೆಸ್. ಕೇನ್ ಜಾಗಕ್ಕೆ ಮಾರ್ಕ್ ಚಾಂಪ್ಮನ್ ಸೇರ್ಪಡೆಯಾಗಲಿದ್ದಾರೆ. ತಂಡದ ನಾಯಕತ್ವವನ್ನು ವೇಗಿ ಟಿಮ್ ಸೌಥೀ ಕೈಗೆ ನೀಡಲಾಗಿದೆ. ವಿಲಿಯಮ್ಸನ್ ಜಾಗಕ್ಕೆ ಮರಳಿರುವ ಮಾರ್ಕ್ ಚಾಂಪ್ಮನ್ ಬದಲಾಗಿ ಮೈಕಲ್ ಬ್ರೇಸ್‌ವೆಲ್ ಕೇಸ್ ಸ್ಥಾನ ತುಂಬುವ ಸಾಧ್ಯತೆ ಇದೆ.
ಪಂತ್ ಕೈ ಬಿಟ್ಟು ಅಥವಾ ಸೂರ್ಯಕುಮಾರ್ ಯಾದವ್ಗೆ ವಿಶ್ರಾಂತಿ ನೀಡಿ ಸಂಜುಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಅರ್ಷದೀಪ್ ಸಿಂಗ್ ಬದಲಿಗೆ ಜಮ್ಮು ಕಾಶ್ಮೀರಿ ವೇಗಿ ಉಮ್ರಾನ್ ಮಲಿಕ್ ಭುವನೇಶ್ವರ್ ಕುಮಾರ್ ಅವರ ಜೊತೆ ವೇಗದ ಬೌಲಿಂಗ್ ನಿರ್ವಹಿಸುವ ಸ್ಥಾನ ದೊರೆಯುವ ಸಾಧ್ಯತೆಯೂ ಇದೆ.
ಭಾರತ ಸಂಭಾವ್ಯ ಪಟ್ಟಿ: ರಿಷಬ್ ಪಂತ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್/ಸಂಜು ಸ್ಯಾಮ್ಸನ್, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್/ಉಮ್ರಾನ್ ಮಲಿಕ್, ಮೊಹಮ್ಮದ್ ಸಿರಾಜ್
ನ್ಯೂಜಿಲೆಂಡ್ ಸಂಭಾವ್ಯ ಪಟ್ಟಿ: ಫಿನ್ ಅಲೆನ್, ಡೆವೊನ್ ಕಾನ್ವೇ, ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್, ಮಾರ್ಕ್ ಚಾಂಪ್ಮನ್/ಮೈಕಲ್ ಬ್ರೇಸ್‌ವೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಆಡಮ್ ಮಿಲ್ನೆ, ಇಶ್ ಸೋಧಿ, ಲಾಕಿ ಫರ್ಗುಸನ್
ಇದನ್ನೂ ಓದಿ: ಭಾರತ ವಿರುದ್ಧ ಮೂರನೇ ಟಿ 20 ಪಂದಕ್ಕೆ ಕೇನ್ ಗೈರು