ದುಬೈ : ಐಸಿಸಿ ಬಿಡುಗಡೆ ಮಾಡಿರುವ ನೂತನ ಏಕದಿನ ರ್ಯಾಂಕಿಂಗ್ನಲ್ಲಿ ನ್ಯೂಜಿಲ್ಯಾಂಡ್ ತಂಡ ಹಾಲಿ ವಿಶ್ವ ಚಾಂಪಿಯನ್ ಇಂಗ್ಲೆಂಡ್ ಟೀಂನ ಹಿಂದಿಕ್ಕಿ ಅಗ್ರಸ್ಥಾನಕ್ಕೆ ಲಗ್ಗೆಯಿಟ್ಟಿದೆ.
ಕಳೆದ ತಿಂಗಳ ಆರಂಭದಲ್ಲಿ ಬಾಂಗ್ಲಾದೇಶದ ವಿರುದ್ಧ ಏಕದಿನ ಸರಣಿಯನ್ನು 3-0ಯಲ್ಲಿ ಕಿವೀಸ್ ಪಡೆ ವಶಪಡಿಸಿಕೊಂಡಿತ್ತು. ಇತ್ತ ಇಂಗ್ಲೆಂಡ್ ಭಾರತದೆದುರು 2-1ರಲ್ಲಿ ಏಕದಿನ ಸರಣಿ ಕಳೆದುಕೊಂಡಿತ್ತು. ಹಾಗಾಗಿ, ನ್ಯೂಜಿಲ್ಯಾಂಡ್ ಮೇಲೇರಿದರೆ, ಇಂಗ್ಲೆಂಡ್ 4ನೇ ಸ್ಥಾನಕ್ಕೆ ಕುಸಿದಿದೆ.
ಇಂಗ್ಲೆಂಡ್ ತಂಡ 2019ರಲ್ಲಿ ಏಕದಿನ ವಿಶ್ವಕಪ್ ಗೆದ್ದ ಬಳಿಕ 12 ತಿಂಗಳುಗಳ ಕಾಲ ಅಗ್ರಸ್ಥಾನದಲ್ಲಿತ್ತು. ಆದರೆ, ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧ 2-1ರಲ್ಲಿ ಸರಣಿ ಸೋಲು ಮತ್ತು ಐರ್ಲೆಂಡ್ ವಿರುದ್ಧ ಸೋಲಿನಿಂದ ಆಂಗ್ಲರನ್ನ 4ನೇ ಸ್ಥಾನಕ್ಕೆ ಕುಸಿಯುವಂತೆ ಮಾಡಿದೆ.
-
Congratulations to @BLACKCAPS, the new No.1 Men’s ODI Team on the @MRFWorldwide ICC rankings 👏
— ICC (@ICC) May 3, 2021 " class="align-text-top noRightClick twitterSection" data="
A lookback on just some of the key men in their rise to the top 🎥#ICCRankings pic.twitter.com/aOV19hwjOw
">Congratulations to @BLACKCAPS, the new No.1 Men’s ODI Team on the @MRFWorldwide ICC rankings 👏
— ICC (@ICC) May 3, 2021
A lookback on just some of the key men in their rise to the top 🎥#ICCRankings pic.twitter.com/aOV19hwjOwCongratulations to @BLACKCAPS, the new No.1 Men’s ODI Team on the @MRFWorldwide ICC rankings 👏
— ICC (@ICC) May 3, 2021
A lookback on just some of the key men in their rise to the top 🎥#ICCRankings pic.twitter.com/aOV19hwjOw
ನ್ಯೂಜಿಲ್ಯಾಂಡ್ 121 ಅಂಕ ಹೊಂದಿದ್ದರೆ, 118 ಅಂಕಗಳನ್ನು ಹೊಂದಿರುವ ಆಸ್ಟ್ರೇಲಿಯಾ ತಂಡ 2ನೇ ಸ್ಥಾನದಲ್ಲಿದೆ. ಭಾರತ(115) ಮತ್ತು ಇಂಗ್ಲೆಂಡ್(115) 3 ಮತ್ತು 4ನೇ ಸ್ಥಾನದಲ್ಲಿವೆ. ದಕ್ಷಿಣ ಆಫ್ರಿಕಾ (107) ಪಾಕಿಸ್ತಾನ(97), ಬಾಂಗ್ಲಾದೇಶ(90) ಮತ್ತು ವೆಸ್ಟ್ ಇಂಡೀಸ್(82) ನಂತರದ ಸ್ಥಾನದಲ್ಲಿವೆ.
ಟೆಸ್ಟ್ ಶ್ರೇಯಾಂಕದಲ್ಲಿ ಭಾರತ(120), ನ್ಯೂಜಿಲ್ಯಾಂಡ್(118), ಆಸ್ಟ್ರೇಲಿಯಾ(113), ಇಂಗ್ಲೆಂಡ್(106) ಮತ್ತು ಪಾಕಿಸ್ತಾನ(90) ಅಗ್ರ 5ರಲ್ಲಿವೆ. ಟಿ20 ಶ್ರೇಯಾಂಕದಲ್ಲಿ ಇಂಗ್ಲೆಂಡ್(277), ಭಾರತ(272), ನ್ಯೂಜಿಲ್ಯಾಂಡ್(263) ಪಾಕಿಸ್ತಾನ(261) ಮತ್ತು ಆಸ್ಟ್ರೇಲಿಯಾ(258) ಟಾಪ್ 5ರಲ್ಲಿ ಕಾಣಿಸಿವೆ.
ಇದನ್ನು ಓದಿ:ಐಪಿಎಲ್ಗೆ ಕೊರೊನಾತಂಕ!!: ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲೂ ಮೂವರಿಗೆ ಕೊರೊನಾ ದೃಢ