ETV Bharat / sports

ಭಾರತ vs ನ್ಯೂಜಿಲೆಂಡ್‌: ಒಂದು ಶತಕ ಸಿಡಿಸಿದ್ರೆ ಎರಡು ದಾಖಲೆ ಬ್ರೇಕ್​​ ಮಾಡ್ತಾರೆ ಕೊಹ್ಲಿ - ನಾಯಕ ವಿರಾಟ್ ಕೊಹ್ಲಿ

ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಫ್‌ ಫೈನಲ್‌ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸಿದರೆ, ನಾಯಕನಾಗಿ ಹೆಚ್ಚು ಅಂತಾರಾಷ್ಟ್ರೀಯ ಶತಕಗಳನ್ನು ಗಳಿಸಿದ ಆಟಗಾರನಾಗುತ್ತಾರೆ. ಈ ಮೂಲಕ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್‌ರನ್ನು ಹಿಂದಿಕ್ಕಲಿದ್ದಾರೆ. ಪಾಂಟಿಂಗ್ ಮತ್ತು ಕೊಹ್ಲಿ ಇಬ್ಬರೂ ನಾಯಕರಾಗಿ 41 ಶತಕಗಳ ದಾಖಲೆ ಹೊಂದಿದ್ದಾರೆ.

Virat Kohli
ವಿರಾಟ್ ಕೊಹ್ಲಿ
author img

By

Published : Jun 18, 2021, 9:50 AM IST

ಹೈದರಾಬಾದ್: ಇಂದಿನಿಂದ ಇಂಗ್ಲೆಂಡ್‌ನ ಸೌತಾಂಪ್ಟನ್ ಅಂಗಳದಲ್ಲಿ ಎರಡು ಬಲಿಷ್ಠ ತಂಡಗಳ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಕಾಳಗ ನಡೆಯಲಿದೆ. ಈ ಪಂದ್ಯದಲ್ಲಿ ಭಾರತ-ನ್ಯೂಜಿಲೆಂಡ್ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದು, ವಿರಾಟ್ ಕೊಹ್ಲಿ ಹೊಸ ದಾಖಲೆ ನಿರ್ಮಿಸುವ ತವಕದಲ್ಲಿದ್ದಾರೆ.

ಪ್ರಸ್ತುತ ಕ್ರಿಕೆಟ್​ ಲೋಕದಲ್ಲಿ 'ಕಿಂಗ್​ ಕೊಹ್ಲಿ' ಎಂದೆ ವಿಜೃಂಭಿಸುತ್ತಿರುವ ವಿರಾಟ್​​ ಇಂದು ನಡೆಯುವ ಟೆಸ್ಟ್​ ಪಂದ್ಯದಲ್ಲಿ ಹೊಸ ದಾಖಲೆ ಬರೆಯುವ ಉತ್ಸಾಹದಲ್ಲಿದ್ದಾರೆ. ಈಗಾಗಲೇ ಹಲವು ದಾಖಲೆಗಳನ್ನು ತಮ್ಮ ಹೆಸರಲ್ಲಿ ಬರೆಸಿಕೊಂಡಿರುವ ಅವರು, ಮತ್ತೊಂದು ಮೈಲುಗಲ್ಲು ತಲುಪುವ ಹೊಸ್ತಿಲಲ್ಲಿ ನಿಂತಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಪಂದ್ಯದಲ್ಲಿ ಕೊಹ್ಲಿ ಶತಕ ಬಾರಿಸಿದರೆ, ನಾಯಕನಾಗಿ ಹೆಚ್ಚು ಅಂತಾರಾಷ್ಟ್ರೀಯ ಶತಕಗಳನ್ನು ಗಳಿಸಿದ ಆಟಗಾರನಾಗುತ್ತಾರೆ. ಈ ಮೂಲಕ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಅವರನ್ನು ಹಿಂದಿಕ್ಕಲಿದ್ದಾರೆ. ಪಾಂಟಿಂಗ್ ಮತ್ತು ಕೊಹ್ಲಿ ಇಬ್ಬರೂ ನಾಯಕರಾಗಿ 41 ಶತಕಗಳನ್ನು ಬಾರಿಸಿದ್ದಾರೆ.

ಕೊಹ್ಲಿ ಇದುವರೆಗೆ 200 ಪಂದ್ಯಗಳಲ್ಲಿ ಭಾರತ ತಂಡ ಮುನ್ನಡೆಸಿದ್ದಾರೆ. ಇದರಲ್ಲಿ 41 ಶತಕ ಮತ್ತು 54 ಅರ್ಧಶತಕಗಳು ಒಳಗೊಂಡಂತೆ 62.33 ಸರಾಸರಿಯಲ್ಲಿ 12,343 ರನ್ ಸಿಡಿಸಿದ್ದಾರೆ. ಆಸ್ಟ್ರೇಲಿಯಾದ ಪಾಂಟಿಂಗ್ 324 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದ್ದು, 45.54 ಸರಾಸರಿಯಲ್ಲಿ 15,440 ರನ್ ಗಳಿಸಿದ್ದಾರೆ. ಅಲ್ಲದೆ, ನಾಯಕನಾಗಿ ಪಾಂಟಿಂಗ್ ಹೆಸರಲ್ಲಿ 41 ಶತಕ ಮತ್ತು 88 ಅರ್ಧಶತಕಗಳಿವೆ.

71 ಶತಕ ಗಳಿಸಿರುವ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಪ್ರಸ್ತುತ 70* ಶತಕ ಬಾರಿಸಿದ್ದು, 27 ಟೆಸ್ಟ್ ಮತ್ತು 43 ಏಕದಿನ ಪಂದ್ಯಗಳಲ್ಲಿಈ ಸಾಧನೆ ಮಾಡಿದ್ದಾರೆ.

ವಿಶ್ವ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ದಾಖಲೆ 'ಕ್ರಿಕೆಟ್​ ದೇವರು' ಭಾರತದ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಸಚಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕಗಳ ಶತಕವನ್ನೇ ಬಾರಿಸಿದ್ದಾರೆ. ತೆಂಡೂಲ್ಕರ್ ಟೆಸ್ಟ್ ಕ್ರಿಕೆಟ್ ನಲ್ಲಿ 51 ಹಾಗು ಏಕದಿನ ಕ್ರಿಕೆಟ್ ನಲ್ಲಿ 49 ಬಾರಿ ಮೂರಂಕಿ ರನ್ ಸಾಧನೆ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.